ಬೊಜ್ಜು ಸಮಸ್ಯೆಗೆ ಇಲ್ಲಿದೆ ಸರಳ ಮನೆಮದ್ದು!

fat tummy

ಚಕ್ಕೆಯನ್ನು ತೂಕ ಇಳಿಕೆಗೆ ಬಳಸುವಿಕೆ ಬಗ್ಗೆ ನೀವು ಕೇಳಿರಬಹುದು. ಅದೇ ರೀತಿ ಲವಂಗವನ್ನೂ ಬಳಸಿ ತೂಕ ಇಳಿಕೆ ಮಾಡಬಹುದು. ಆದರೆ ಮಿತಿಯಲ್ಲಿ ಸೇವಿಸಬೇಕು. ತೂಕ ಇಳಿಕೆಗೆ ಲವಂಗವನ್ನು ಯಾವ ರೀತಿ ಬಳಸಬೇಕು, ಹೆಚ್ಚು ಬಳಸಿದರೆ ಉಂಟಾಗುವ ಅಡ್ಡಪರಿಣಾಮಗಳೇನು ಎಂಬ ಮಾಹಿತಿ ಇಲ್ಲಿದೆ.


ಲವಂಗದಲ್ಲಿ ಮ್ಯಾಂಗನೀಸ್‌ ಇದ್ದು, ಇದು ಮೂಳೆಗಳಿಗೆ ಹಾನಿಯಾಗಿದ್ದರೆ ಸರಿಪಡಿಸಲು ಸಹಕಾರಿಯಾಗುತ್ತದೆ. ಇದರಲ್ಲಿ ವಿಟಮಿನ್‌ ಕೆ, ಪೊಟಾಷ್ಯಿಯಂ, ಬೀಟಾ ಕೆರೋಟಿನ್‌ ಹಾಗೂ ಅತ್ಯಲ್ಪ ಪ್ರಮಾಣದ ಪ್ರೊಟೀನ್, ಕೊಬ್ಬು, ಕಾರ್ಬೋಹೈಡ್ರೇಟ್ಸ್ ಹಾಗೂ ನಾರಿನಂಶವಿದೆ. ಲವಂಗದಲ್ಲಿ ಆ್ಯಂಟಿಆಕ್ಸಿಡೆಂಟ್‌ ತುಂಬಾನೇ ಇರುವುದರಿಂದ ಅತ್ಯುತ್ತಮವಾದ ನೋವು ನಿವಾರಕವಾಗಿದೆ. ಲವಂಗ ಜೀರ್ಣಕ್ರಿಯೆಗೆ ಸಹಕಾರಿ. ಜೀರ್ಣಕ್ರಿಯೆ ಚೆನ್ನಾಗಿದ್ದರೆ ತೂಕ ಹೆಚ್ಚಾಗಲ್ಲ.

ತೂಕ ಇಳಿಕೆ ಅಥವಾ ಹೆಚ್ಚಾಗುವುದಕ್ಕೆ ದೇಹದ ಚಯಪಚಯ ಕ್ರಿಯೆ, ಜೀರ್ಣಕ್ರಿಯೆಗೆ ನೇರ ಸಂಬಂಧವಿದೆ. ಲವಂಗವನ್ನು ಮಿತಿಯಲ್ಲಿ ಸೇವಿಸುವುದರಿಂದ ತೂಕ ಇಳಿಕೆಗೆ ಸಹಕಾರಿ. 50ಗ್ರಾಂ ಚಕ್ಕೆ, 50ಗ್ರಾಂ ಲವಂಗ, 50ಗ್ರಾಂ ಜೀರಿಗೆಯನ್ನು ಪ್ಯಾನ್‌ನಲ್ಲಿನಲ್ಲಿ ಕಡಿಮೆ ಉರಿಯಲ್ಲಿ ಹುರಿಯಿರಿ, ಅದರಿಂದ ಸುವಾಸನೆ ಬರುವಾಗ ಸ್ಟೌವ್‌ ಆಫ್‌ ಮಾಡಿ ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ರುಬ್ಬಿ ಪುಡಿ ತಯಾರಿಸಿ. ಬಳಸುವುದು ಹೇಗೆ? ಒಂದು ಚಿಕ್ಕ ಚಮಚದಲ್ಲಿ ಅರ್ಧ ಚಮಚ ಪುಡಿಯನ್ನು ಒಂದು ದೊಡ್ಡ ಲೋಟ ಬಿಸಿ ನೀರಿಗೆ ಹಾಕಿ ಮಿಕ್ಸ್ ಮಾಡಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ.


ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದ ಬಳಿಕ ತುಂಬಾ ಹೊತ್ತು ಆಹಾರ ಸೇವಿಸದೆ ಇರಬೇಡಿ. ಬೆಳಗ್ಗೆ 8 ಗಂಟೆಯ ಒಳಗಾಗಿ ಆರೋಗ್ಯಕರ ಆಹಾರ ಸೇವಿಸಿ, ಇದು ನಿಮಗೆ ತೂಕ ಇಳಿಕೆಯನ್ನು ಆರೋಗ್ಯಕರ ರೀತಿಯಲು ಮಾಡಲು ಸಹಕಾರಿಯಾಗಿದೆ. ಇದನ್ನು ಸೇವಿಸಿದ ನಂತರ ತಲೆಸುತ್ತು, ಗ್ಯಾಸ್ಟ್ರಿಕ್ ಹೀಗೆ ಸಮಸ್ಯೆಗಳು ಉಂಟಾದರೆ ಮುಂದುವರಿಸಬೇಡಿ. ಹಾಗೇ ಮಸಾಲೆಯ ಅಲರ್ಜಿ ಇದ್ದವರು ಇದನ್ನು ಸೇವಿಸದಿರೋದು ಉತ್ತಮ.

Exit mobile version