ಆಂಬ್ಯುಲೆನ್ಸ್ ಕೊಡದ ಆಸ್ಪತ್ರೆ ಸಿಬ್ಬಂದಿ ; 3 ವರ್ಷದ ಮಗಳ ಶವವನ್ನು 65 ಕಿ.ಮೀ ದೂರ ಬೈಕ್‌ನಲ್ಲಿ ಹೊತ್ತೊಯ್ದ ಕುಟುಂಬಸ್ಥರು!

Telangana : ತೆಲಂಗಾಣದ(Telangana) ಖಮ್ಮಂನಲ್ಲಿರುವ ತಾಯಿ ಮತ್ತು ಮಕ್ಕಳ ಆರೋಗ್ಯ ಕೇಂದ್ರದ(MCH) ಸಿಬ್ಬಂದಿಗಳು ಶವ ತೆಗೆದುಕೊಂಡು ಹೋಗಲು ಆಂಬ್ಯುಲೆನ್ಸ್(hospital refuses ambulance) ಕೊಡಲು ನಿರಾಕರಿಸಿದ ಕಾರಣ ಸುಮಾರು 65 ಕಿಮೀ ದೂರವಿರುವ ತಮ್ಮ ಗ್ರಾಮಕ್ಕೆ ಮೃತದೇಹವನ್ನು ಬೈಕ್‌ನಲ್ಲಿ ಹೊತ್ತೊಯ್ದ ಕುಟುಂಬಸ್ಥರ ಪಾಡು ಎಲ್ಲರ ಮನಕಲುಕವಂತ್ತಿತ್ತು.

ಆಂಬ್ಯುಲೆನ್ಸ್‌ ಸೇವೆ ನೀಡಲು ಹಣ ಕೇಳಿದ ಆಸ್ಪತ್ರೆ ಸಿಬ್ಬಂದಿ, ಮೃತ ಬಾಲಕಿಯ ತಂದೆಯ ಬಳಿ ಹಣವಿಲ್ಲದ ಕಾರಣ ಆಂಬ್ಯುಲೆನ್ಸ್ ನೀಡಲು ನಿರಾಕರಿಸಿದ್ದಾರೆ.

“ನಮ್ಮ ಬಳಿ ಹಣವಿಲ್ಲದ ಕಾರಣ ನನಗೆ ನನ್ನ 3 ವರ್ಷದ ಮಗಳ ಮೃತದೇಹವನ್ನು ಸಾಗಿಸಲು ಆಂಬ್ಯುಲೆನ್ಸ್ ಸೇವೆ ದೊರೆಯಲಿಲ್ಲ.

ಹೀಗಾಗಿ 65 ಕಿಲೋಮೀಟರ್ ದೂರದವರೆಗೆ ಬೈಕ್‌ನಲ್ಲಿ ತೆಗೆದುಕೊಂಡು ಹೋಗಿದ್ದೇವೆ” ಎಂದು ಮಗುವಿನ ತಂದೆ ವೆಟ್ಟಿ ಮಲ್ಲಯ್ಯ ಹೇಳಿದ್ದಾರೆ.

https://vijayatimes.com/delhi-schools-closed/

ಖಮ್ಮಂ ಜಿಲ್ಲೆಯ ಎಣುಕೂರು ಮಂಡಲದ ಕೋಟಾ ಮೇಡೆಪಲ್ಲಿ ಗ್ರಾಮದ ಆದಿವಾಸಿ ಕುಟುಂಬಕ್ಕೆ(hospital refuses ambulance) ಸೇರಿದ ಇವರು,

ಆದಿವಾಸಿ ದಂಪತಿಯ ಪುತ್ರಿ ವೆಟ್ಟಿ ಸುಕ್ಕಿ (3) ಅವರನ್ನು ಏಣಕೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದರು,

https://fb.watch/gEwHz-w2oG/ ಕತ್ತಲಲ್ಲಿ ಕಳೆದು ಹೋದ ವಿದ್ಯೆ

ಕೂಡಲೇ ಆಕೆಯನ್ನು ಖಮ್ಮಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮುಂಜಾನೆ ಆಕೆ ಮೃತಪಟ್ಟಿದ್ದಾಳೆ.

ಬಾಲಕಿಯ ತಂದೆ ಸ್ವಗ್ರಾಮಕ್ಕೆ ಬಂದು ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಬಾಲಕಿಯ ಮೃತದೇಹವನ್ನು ಖಮ್ಮಂ ಸರ್ಕಾರಿ ಆಸ್ಪತ್ರೆಯಿಂದ ಹೊಸ ಮೆಡೆಪಲ್ಲಿ ಗ್ರಾಮಕ್ಕೆ ಸ್ಥಳಾಂತರಿಸಲು ಗ್ರಾಮದ ಸಂಬಂಧಿಕರಿಂದ ಬೈಕ್ ತೆಗೆದುಕೊಂಡು ಹೋಗಿದ್ದಾರೆ.

ಸರಕಾರಿ ವೈದ್ಯಾಧಿಕಾರಿಗಳ ನಿರ್ಲಕ್ಷ್ಯವೇ ನಮ್ಮ ಮಗುವಿನ ಸಾವಿಗೆ ಕಾರಣ ಎಂದು ಬಾಲಕಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಪ್ರಕರಣ ಕಂಡು ಅನೇಕರು ಆಸ್ಪತ್ರೆ ಸಿಬ್ಬಂದಿಗಳಿಗೆ ಹಿಡಿ ಶಾಪ ಹಾಕಿದ್ದಾರೆ.

ಒಂದು ಜೀವಕ್ಕಿಂತ ನಿಮಗೆ ಹಣವೇ ಮುಖ್ಯವಾ? ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

Exit mobile version