ಬೆಂಗಳೂರಿನಲ್ಲಿರುವ 30 ಸಾವಿರಕ್ಕೂ ಅಧಿಕ ಹೊಟೇಲ್ ಗಳಲ್ಲಿ ಟ್ರೇಡ್ ಲೈಸನ್ಸ್ ಹೊಂದಿರುವುದು ಕೇವಲ 523!

Bengaluru: ಬೆಂಗಳೂರಿನಲ್ಲಿ (Bengaluru) ಎಲ್ಲೆಂದರಲ್ಲಿ ಹೋಟೆಲುಗಳು ಕಾಣಸಿಗುತ್ತವೆ.ಒಂದು ಸಣ್ಣ ಬೀದಿಗಯಲ್ಲಿ ಕಣ್ಣಾಯಿಸಿದರೂ ಹತ್ತಾರು ಹೋಟೆಲ್ಗಳಿವೆ . ಒಟ್ಟಾರೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳೆರಡನ್ನೂ ಸೇರಿಸಿದರೆ 30 ಸಾವಿರಕ್ಕೂ ಅಧಿಕ ಹೋಟೆಲ್ ಗಳಿವೆ. ಆದರೆ ಉದ್ದಿಮೆ ಪರವಾನಗಿ (Trade license) ಎಂದು ಇರುವುದು 523 ಹೋಟೆಲ್ ಗಳಿಗೆ ಮಾತ್ರ. ಹೋಟೆಲ್ ಗಳು ಟ್ರೇಡ್ ಲೈಸನ್ಸ್ ಹೊಂದಿರುವುದು ಕಡ್ಡಾಯವಾಗಿದ್ದರೂ ಹಚ್ಚಿನವರು ಹೊಂದಿಲ್ಲ. ಪರವಾನಿಗೆ ಪಡೆಯದೇ ಆಹಾರ ಪದಾರ್ಥಗಳನ್ನು ಮಾರಾಟ ಮಾಡಬಾರದು ಎಂದು ತಿಳಿದಿದ್ದರೂ ಅದೇ ತಪ್ಪನ್ನು ಮಾಡುತ್ತಿದ್ದಾರೆ ಎಂದರೆ ಇದಕ್ಕೆ ಕಾರಣ ಅತಿಯಾದ ಲಂಚಕೋರತನ ಎಂದು ಎಲ್ಲೆಡೆ ಆರೋಪಗಳು ಕೇಳಿಬಂದಿವೆ.

ಪ್ರತಿನಿತ್ಯ ಆಹಾರಕ್ಕಾಗಿ ಹಲವರು ಜನ ಹೋಟೆಲ್ (Hotel)ಗಳನ್ನೇ ಅವಲಂಬಿಸಿರುತ್ತಾರೆ.ಜನರ ಹಸಿವು ತಣಿಸಲು ಎಲ್ಲೆಂದರಲ್ಲಿ ತಲೆ ಎತ್ತಿರುವ ಹೋಟೆಲ್‌ಗಳು ಟ್ರೇಡ್‌ ಲೈಸೆನ್ಸ್‌ ಪಡೆದು ಹೋಟೆಲ್ ನಡೆಸಬೇಕು ಎನ್ನುವ ಕಡ್ಡಾಯ ಆದೇಶವಿದೆ. ಆದರೆ, ಇದಕ್ಕೆ ಬಹುತೇಕರು ಕಿಮ್ಮತ್ತು ನೀಡುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಟ್ರೇಡ್‌ ಲೈಸೆನ್ಸ್‌ ಹೆಸರಿನಲ್ಲಿ ಭ್ರಷ್ಟಾಚಾರ ಹೌದು ಒಂದಿಷ್ಟು ಹಣ ನೀಡಿದರೆ ಮುಗಿಯಿತು ಲೈಸನ್ಸ್ ಅವಶ್ಯಕತೆಯೇ ಇಲ್ಲ ಎಂಬಂತಾಗಿದೆ.

ಇನ್ನು ಬೆಂಗಳೂರು ಗ್ರಾಮಾಂತರದಲ್ಲಿ 207 ಮತ್ತು ಬೆಂಗಳೂರು ನಗರದಲ್ಲಿ 316 ಹೋಟೆಲ್‌ಗಳು ಮಾತ್ರವೇ ಟ್ರೇಡ್‌ ಲೈಸೆನ್ಸ್‌ ಪಡೆದುಕೊಂಡಿವೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಅಂದಾಜು 7 ಸಾವಿರ ಮತ್ತು ಬೆಂ.ನಗರದಲ್ಲಿ 25 ಸಾವಿರಕ್ಕೂ ಅಧಿಕ ಹೋಟೆಲ್‌ಗಳಿವೆ. ಉಳಿದವೆಲ್ಲ ಆದೇಶಗಳನ್ನು ಗಾಳಿಗೆ ತೂರಿ ನಡೆಸುತ್ತಿದ್ದಾರೆ.ಉದ್ದಿಮೆ ಪರವಾನಗಿ ವಿತರಣೆಯಿಂದ 2023-24ರಲ್ಲಿ ಸರಕಾರಕ್ಕೆ ಬಂದಿರುವ ಆದಾಯ ಕೇವಲ 214 ಕೋಟಿ ರೂಪಾಯಿಗಳು ಮಾತ್ರ. ಉಳಿದ ಹಣವೆಲ್ಲ ಅಧಿಕಾರಿಗಳ ಜೇಬು ಸೇರುತ್ತಿದೆ.

ಇನ್ನು ಈ ಕುರಿತಾಗಿ ಹೇಳಿಕೆ ನೀಡಿರುವ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್ (P C Rao), ಹೆಚ್ಚಿನ ಹೋಟೆಲ್‌ಗಳು ಎಫ್‌ಎಸ್‌ಎಸ್‌ಎಐ(FSSAI)ನಿಂದ ಪರವಾನಗಿ ಪಡೆದುಕೊಂಡಿರುತ್ತವೆ. ಹೀಗಿದ್ದಾಗ ಇದೇ ಮಾದರಿಯ ಟ್ರೇಡ್‌ ಲೈಸೆನ್ಸ್‌ ಪಡೆಯುವ ಅಗತ್ಯ ನಮಗೆ ಕಾಣಲಿಲ್ಲ.ಅಷ್ಟೇ ಅಲ್ಲ ಸರಕಾರ ವಿನಾಕಾರಣ ಟ್ರೇಡ್‌ ಲೈಸೆನ್ಸ್‌ ಕಡ್ಡಾಯಗೊಳಿಸಿ ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸುತ್ತಿದೆ. ಟ್ರೇಡ್‌ ಲೈಸೆನ್ಸ್‌ ಪಡೆಯುವುದು ಸುಲಭವಾದ ಮಾತಲ್ಲ. ಸಾಕಷ್ಟು ಹಣ ವ್ಯಯಿಸಬೇಕಾಗಿದೆ ಸಣ್ಣ ಪುಟ್ಟ ಹೊಟೇಲ್ ಅವರಿಗೆ ಅದು ಕಷ್ಟ ಕೂಡ ಎಂದು ತಿಳಿಸಿದ್ದಾರೆ.

Exit mobile version