ಸೌಂದರ್ಯ ಸಲಹೆ: ಚಿಕ್ಕ ವಯಸ್ಸಿಗೆ ಮುಖದಲ್ಲಿ ಸುಕ್ಕು ಕಾಣಿಸಿಕೊಳ್ಳುತ್ತಿದೀಯಾ? ಹಾಗಾದ್ರೆ ಈ ರೀತಿ ಮಾಡಿ

Beauty Tips: ದಿನಗಳು ಕಳೆದಂತೆ ಜೀವನ ಶೈಲಿಯು ಬದಲಾಗುತ್ತಿರುವುದರಿಂದ ಚಿಕ್ಕ ವಯಸ್ಸಿನಲ್ಲೇ ಮುಖದಲ್ಲಿ ಸುಕ್ಕುಗಟ್ಟುವುದು (Wrinkles) ಸಾಮಾನ್ಯವಾಗಿ ಬಿಟ್ಟಿದ್ದು, ತಲೆ ಕೂದಲು ಉದುರುವುದು, ಚರ್ಮ ಸುಕ್ಕುಗಟ್ಟುವುದು ಎಲ್ಲವೂ ಸಹ ಮಾಮೂಲಿಯಾಗಿ ಬಿಡುತ್ತೆ. ಆದರೆ ಇದನ್ನು ಅಡ್ಜಸ್ಟ್ ಮಾಡಿಕೊಳ್ಳಬೇಕೆಂದು ಏನಿಲ್ಲ ಹಾಗಾಗಿ ಚರ್ಮ ಸುಕ್ಕುಗಟ್ಟುವುದನ್ನು ಮತ್ತು ವಯಸ್ಸಾದಂತೆ ಕಾಣುವುದನ್ನು (Beauty Tips) ತಡೆಗಟ್ಟುವುದು ಹೇಗೆ? ಇದನ್ನು ದೂರ ಮಾಡುವುದು ಹೇಗೆ? ತಿಳಿಯೋಣ ಬನ್ನಿ..

ಬಿಸಿಲಿನಿಂದ ಚರ್ಮದ ರಕ್ಷಣೆ
ಹೆಚ್ಚಾಗಿ ಬಿಸಿಲಿನ ತಾಪ ಚರ್ಮದ ಮೇಲೆ ಬೀಳುತ್ತಿದ್ದರೆ ಸುಕ್ಕುಗಟ್ಟುವಿಕೆ #SkinProtectionfromtheSun ಮತ್ತು ವಯಸ್ಸಾಗುವಿಕೆ ಸಮಸ್ಯೆ ಬೇಗನೆ ಎದುರಾಗುತ್ತದೆ. ಆದ್ದರಿಂದ ಮನೆಯಿಂದ ಹೊರಗಡೆ ಹೋಗುವಾಗ ತಲೆಗೆ ಟೋಪಿ, ಮೈ ತ್ವಚೆಯನ್ನು ಸಂಪೂರ್ಣವಾಗಿ ಮುಚ್ಚುವಂತಹ ಬಟ್ಟೆ, ಕಾಲಿಗೆ ಬೂಟು ಧರಿಸಿ ಹೋಗುವುದರಿಂದ ಸೂರ್ಯನ ಅತಿ ನೇರಳೆ ಕಿರಣಗಳಿಂದ ಕಾಪಾಡಿಕೊಳ್ಳಬಹುದು

ಹೆಚ್ಚಾಗಿ ನೀರು ಕುಡಿಯಬೇಕು
ದೇಹದಲ್ಲಿ ನೀರಿನ ಅಂಶದ ಕೊರತೆ ಉಂಟಾಗುವುದರಿಂದ ಸಹ ಈ ರೀತಿಯ ಸಮಸ್ಯೆ ಉಂಟಾಗಬಹುದು ಹಾಗಾಗಿ ನಮ್ಮ ದೇಹದಲ್ಲಿ ನಿರ್ಜಲೀಕರಣದ ಕೊರತೆ ಬಾರದಂತೆ ನೋಡಿಕೊಳ್ಳಬೇಕು. ಇನ್ನು ಅಷ್ಟೇ ಅಲ್ಲದೆ ದಿನನಿತ್ಯ ಹೆಚ್ಚು ನೀರನ್ನು ಮತ್ತು ಆರೋಗ್ಯಕರ ಪಾನೀಯಗಳನ್ನು (Healthy Drinks) ಕುಡಿಯುವುದರಿಂದ ಚರ್ಮದ ಹಲವು ಸಮಸ್ಯೆಗಳಿಂದ ದೂರವಾಗಲು ಸಹಾಯವಾಗುತ್ತದೆ.

ಆರೋಗ್ಯಕರ ಆಹಾರ ಸೇವಿಸಬೇಕು
ಮುಖ್ಯವಾಗಿ ದಿನನಿತ್ಯದ ಆಹಾರ ಪದ್ದತಿ ಸಮತೋಲನದಿಂದ ಕೂಡಿರಬೇಕು. ಅಂದರೆ ತಿನ್ನುವ ಆಹಾರದಲ್ಲಿ ಎಲ್ಲವೂ ಇರಬೇಕು. ಪ್ರೋಟೀನ್, ವಿಟಮಿನ್ (Protien, Vitamins) ಖನಿಜಾಂಶಗಳು, ಕಾರ್ಬೋಹೈಡ್ರೇಟ್, ಆರೋಗ್ಯಕರ ಕೊಬ್ಬುಗಳು ಹೀಗೆ. ಹಣ್ಣು, ತರಕಾರಿಗಳು, ಹಸಿರು ಸೊಪ್ಪು, ಕೋಳಿ ಮೊಟ್ಟೆ, (Fruit, vegetables, green leafy vegetables, chicken eggs) ಕೊಬ್ಬಿನ ಅಂಶ ಕಡಿಮೆ ಇರುವ ಮಾಂಸಹಾರ ಇವುಗಳಿಗೆ ಹೆಚ್ಚಿನ ಮಹತ್ವ ಕೊಡಬೇಕು.

ಸರಿಯಾಗಿ ನಿದ್ರೆ ಮಾಡಬೇಕು
ಇನ್ನು ಸರಿಯಾಗಿ ನಿದ್ರೆ ಮಾಡದೇ (Sleeping) ಇರುವುದು ಕೂಡ ಇದಕ್ಕೆ ಮುಖ್ಯ ಕಾರಣವಾಗಿದ್ದು, ಎಷ್ಟೇ ಒತ್ತಡ ಅಥವಾ ಕೆಲಸವಿದ್ದರೂ ಸರಿಯಾದ ಸಮಯಕ್ಕೆ ಮಲಗಿ ನಿದ್ರಿಸಬೇಕು ಹೀಗೆ ಮಾಡುವುದರಿಂದ ಸಹ ಚರ್ಮದ ಸಮಸ್ಯೆಯಿಂದ ದೂರವಿರಬಹುದು….

ಮುಖಕ್ಕೆ ಮೊಯಿಸ್ಚರೈಸ್ ಮಾಡಿಕೊಳ್ಳಬೇಕು
ಚರ್ಮದಲ್ಲಿ ಸುಕ್ಕುಗಟ್ಟುವುದು, ಬಿರುಕು ಹೊಡೆಯುವ ಸಮಸ್ಯೆಗೆ ಮೊಯಿಸ್ಚರೈಸ್ (Moisturizer) ಮಾಡಿಕೊಳ್ಳುವುದರಿಂದ ಸಹ ಬೇಗ ಮುಖ ಸುಕ್ಕುಗಟ್ಟುವುದು ಮತ್ತು ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ.. ಹಾಗಾಗಿ ಚರ್ಮದ ಕಾಂತಿಯುತ ತ್ವಚೆಗೆ ಮೊಯಿಸ್ಚರೈಸ್ ಮಾಡಿಕೊಳ್ಳುವುದು ಉತ್ತಮ.

ಭವ್ಯಶ್ರೀ ಆರ್ ಜೆ

Exit mobile version