ದೇಹದಲ್ಲಿರುವ ಬೊಜ್ಜನ್ನು ಕಡಿಮೆ ಮಾಡಲು ಖಾಲಿ ಹೊಟ್ಟೆಯಲ್ಲಿ ಈ ಪಾನೀಯಗಳನ್ನು ಕುಡಿಯಿರಿ.

How to Reduce Body Fat : ಆಹಾರ ನಮ್ಮ ದೇಹದ ಶಕ್ತಿ ಮತ್ತು ಚೈತನ್ಯ ಮೇಲೆ ಪ್ರಭಾವ ಬೀರುತ್ತದೆ. ಅಪ್ಪಿ ತಪ್ಪಿ ಬೆಳಗಿನ ಸಮಯದಲ್ಲಿ ಹೆಚ್ಚು ಜಿಡ್ಡು ಒಳಗೊಂಡಿರುವ ಮತ್ತು ಎಣ್ಣೆ

ಪದಾರ್ಥರಗಳನ್ನು ತಿಂದರೆ ಅದರಿಂದ ನಮಗೆ ಇಡೀ ದಿನ ಆಲಸ್ಯ ಉಂಟಾಗುತ್ತದೆ. ಏಕೆಂದರೆ ಜಿಡ್ಡು ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚು ಮಾಡುತ್ತದೆ. ಎಣ್ಣೆ ಅಂಶ ನಮ್ಮ ರಕ್ತ ಸಂಚಾರದಲ್ಲಿ

ಬೆರೆಯುವುದರಿಂದ ದೇಹದ ಒಳಗಿನ ಅಂಗಾಂಗಗಳು ಸರಿಯಾಗಿ ಕಾರ್ಯ ನಿರ್ವಹಣೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಬೆಳಗಿನ ಸಮಯದ ಆಹಾರಕ್ಕೆ ನಾವು ಮೊದಲ ಆದ್ಯತೆಯಾಗಿ

ಆರೋಗ್ಯಕರವಾದ ಆಹಾರಗಳನ್ನು ಅಥವಾ (How to reduce body fat) ಪಾನೀಯಗಳನ್ನು ಸೇವಿಸಬೇಕು.

ಶುಂಠಿ ಮತ್ತು ನಿಂಬೆರಸ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರು ಬೆಚ್ಚಗಿನ ನೀರಿನೊಂದಿಗೆ ಸ್ವಲ್ಪ ನಿಂಬೆಹಣ್ಣಿನ ರಸ ಮತ್ತು ತುರಿದ ಶುಂಠಿಯನ್ನು ಹಾಕಿ ಸ್ವಲ್ಪ ಹೊತ್ತು ಬಿಟ್ಟು ಅನಂತರ ಕುಡಿಯುವುದರಿಂದ

ದೇಹದ ಜೀರ್ಣಶಕ್ತಿ ಹೆಚ್ಚಾಗುವುದರ ಜೊತೆಗೆ ಕೊಲೆಸ್ಟ್ರಾಲ್ ಕಡಿಮೆಯಾಗಿ ತೂಕ ಕೂಡ ಕಡಿಮೆಯಾಗುತ್ತದೆ. ಇದು ಅತ್ಯಂತ ಪರಿಣಾಮಕಾರಿಗಿದ್ದು, ಅತ್ಯಂತ ವೇಗವಾಗಿ ನಿಮ್ಮ ತೂಕವನ್ನು

ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ನೆಲ್ಲಿಕಾಯಿ ರಸ
ನೆಲ್ಲಿಕಾಯಿ ತನ್ನಲ್ಲಿ ವಿಟಮಿನ್ ಸಿ ಅಂಶವನ್ನು ಹೆಚ್ಚಾಗಿ ಒಳಗೊಂಡಿರುವುದರಿಂದ ಇದನ್ನು ಕೇವಲ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಿಕೊಳ್ಳಲು ಬಳಸಬಹುದು, ಮತ್ತು ನಮ್ಮ ದೇಹದ ತೂಕವನ್ನು

ಕೂಡ ಇದು ಕಡಿಮೆ ಮಾಡಬಲ್ಲದು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶಗಳು ನಮ್ಮ ಹೃದಯಕ್ಕೆ ಸಹಕಾರಿ ಯಾಗಿರುತ್ತವೆ. ಹೀಗಾಗಿ ಕೊಲೆಸ್ಟ್ರಾಲ್ ಹಾಗೂ ಬೊಜ್ಜು ಕೂಡ ನಿಯಂತ್ರಣಕ್ಕೆ ಬರುತ್ತದೆ.

ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಇನ್ನು ಒಳ್ಳೆಯದು.

ಜೇನುತುಪ್ಪ ಮತ್ತು ಬೆಳ್ಳುಳ್ಳಿ ಮಿಕ್ಸ್ಡ್ ನೀರು
ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಮನೆಯಲ್ಲಿ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಜೇನುತುಪ್ಪ ಮತ್ತು ಬೆಳ್ಳುಳ್ಳಿಯನ್ನು ಜಜ್ಜಿದ ರಸ ಸೇರಿಸಿ ಸ್ವಲ್ಪ ಹೊತ್ತು ಬಿಟ್ಟು

ಕುಡಿಯುವುದರಿಂದ ನಿಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಸಾಕಷ್ಟು ಕಡಿಮೆಯಾಗುತ್ತದೆ. ರಕ್ತದ ಒತ್ತಡ ಕೂಡ ನಿಯಂತ್ರಣಕ್ಕೆ ಬರುತ್ತದೆ.

ಹಾಲಿಗೆ ಅರಿಶಿನ ಹಾಕಿ ಕುಡಿಯುವುದು
ಬೆಳಗಿನ ಸಮಯದಲ್ಲಿ ಹಾಲಿಗೆ ಚಿಟಿಕೆ ಅರಿಶಿನ ಹಾಕಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುವುದಲ್ಲದೆ ತೂಕ ನಿಯಂತ್ರಣ ಮಾಡಲು ಇದು ಸಹಾಯ ಮಾಡುತ್ತದೆ.

ಪ್ರತಿದಿನ ರಾತ್ರಿ ಸಮಯದಲ್ಲಿ ಒಂದು ಲೋಟ ಹಾಲು ಕುಡಿದು ಮಲಗುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಕೊತ್ತಂಬರಿ ಸೊಪ್ಪಿನ ನೀರು:

ಇದರಲ್ಲಿ ಪೊಟ್ಯಾಶಿಯಂ, ವಿಟಮಿನ್ ಅಂಶಗಳು,ಮತ್ತು ಖನಿಜಾಂಶಗಳು ಇರಲಿದ್ದು ನಮ್ಮ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಸಹಾಯ ಮಾಡುತ್ತವೆ. ಮುಖ್ಯವಾಗಿ

ನಮ್ಮ ಹೃದಯದ ಆರೋಗ್ಯವನ್ನು ರಕ್ಷಿಸುವಂತಹ ಕೆಲಸ ಇದರಿಂದ ನಡೆಯುತ್ತದೆ. ಕೊತ್ತಂಬರಿ ಸೊಪ್ಪಿನ ನೀರು ಕುಡಿಯುವುದರಿಂದ ನಮ್ಮ ಕಿಡ್ನಿ ಕೂಡ ಸ್ವಚ್ಛವಾಗುತ್ತದೆ ಎಂದು ಹೇಳುತ್ತಾರೆ.

ಗ್ರೀನ್ ಟೀ:
ಇದು ನಮ್ಮ ದೇಹವನ್ನು ಸ್ವಚ್ಛ ಮಾಡುವ ಕೆಲಸ ಮಾಡುತ್ತದೆ.ಮುಖ್ಯವಾಗಿ ಕೊಲೆಸ್ಟ್ರಾಲ್ ಅಂಶವನ್ನು ನಮ್ಮ ರಕ್ತದಿಂದ ದೂರ ಮಾಡಿ ತನ್ನ ಆಂಟಿ ಆಕ್ಸಿಡೆಂಟ್ ಅಂಶಗಳಿಂದ ನಮ್ಮ ಹೃದಯವನ್ನು ರಕ್ಷಿಸುತ್ತದೆ.

ಒಟ್ಟಿನಲ್ಲಿ ಉತ್ತಮ ಆರೋಗ್ಯಕ್ಕೆ ಗ್ರೀನ್ ಟೀ ನಮಗೆ ಬಹಳ ಮುಖ್ಯವಾದ ಗಿಡಮೂಲಿಕೆ ಚಹಾ ಆಗಿದೆ.​

ಟೊಮೆಟೊ ರಸ
ಇದರಲ್ಲಿ ನಯಾಸಿನ್ ಮತ್ತು ಲೈಕೋಪಿನ್ ಎಂಬ ಅಂಶಗಳು ಇದರಲ್ಲಿದ್ದು ರಕ್ತ ಸಂಚಾರದಲ್ಲಿ ಅಡಗಿರುವ ನಮ್ಮ ಹೃದಯಕ್ಕೆ ಮುಂಬರುವ ದಿನಗಳಲ್ಲಿ ಎದುರಾಗುವ ತೊಂದರೆಗಳನ್ನು ತಪ್ಪಿಸುತ್ತದೆ.

ಪಾರ್ಶ್ವವಾಯು ಸಮಸ್ಯೆ ಕೂಡ ಬರದಂತೆ ನೋಡಿಕೊಳ್ಳುತ್ತದ್ದೆ.

ಜೀರಿಗೆ ಮತ್ತು ನಿಂಬೆರಸ
ನಮ್ಮ ಹೊಟ್ಟೆ ಉಬ್ಬರ ಸಮಸ್ಯೆಯನ್ನು ನಿಯಂತ್ರಣ ಮಾಡುವುದರ ಜೊತೆಗೆ ನಮ್ಮ ಜೀರ್ಣ ಶಕ್ತಿಯನ್ನು ಈ ಹೆಚ್ಚಿಸುತ್ತದೆ. ಮತ್ತು ನಮ್ಮ ಕರುಳಿನ ಚಲನೆಯನ್ನು ಜೊತೆಗೆ ನಮ್ಮ ಬೊಜ್ಜನ್ನು ಕರಗಿಸುವಲ್ಲಿ

ಪ್ರಾಮುಖ ಪಾತ್ರ ವಾಹಿಸಿದೆ.

ಇದನ್ನು ಓದಿ: ಇಂಡಿಯಾ ಮೈತ್ರಿಕೂಟ ಒಂದಾಗಿರಲು ಶ್ರಮಿಸುತ್ತೇವೆ: ಮಲ್ಲಿಕಾರ್ಜುನ ಖರ್ಗೆ

Exit mobile version