• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಕಠಿಣ ವ್ಯಾಯಾಮವಿಲ್ಲದೇ, ಹೊಟ್ಟೆಯ ಕೊಬ್ಬನ್ನು ಕರಗಿಸಲು ಈ ಸರಳ ಉಪಾಯ ಪಾಲಿಸಿ

Mohan Shetty by Mohan Shetty
in ಆರೋಗ್ಯ, ಲೈಫ್ ಸ್ಟೈಲ್
ಕಠಿಣ ವ್ಯಾಯಾಮವಿಲ್ಲದೇ, ಹೊಟ್ಟೆಯ ಕೊಬ್ಬನ್ನು ಕರಗಿಸಲು ಈ ಸರಳ ಉಪಾಯ ಪಾಲಿಸಿ
0
SHARES
7
VIEWS
Share on FacebookShare on Twitter

Health Tips : ದೇಹದ ಯಾವ ಭಾಗದ ಕೊಬ್ಬನ್ನು (How To Reduce Fat) ಕಳೆದುಕೊಳ್ಳಲು ಇಚ್ಚಿಸುತ್ತೀರಿ ಎಂದು ನೀವು ಯಾರನ್ನಾದರೂ ಕೇಳಿದರೆ, ಹೆಚ್ಚಿನವರು ಹೊಟ್ಟೆಯ ಭಾಗದ ಬೊಜ್ಜು ಎಂದು ಹೇಳುತ್ತಾರೆ.

Health Tips

ಹೊಟ್ಟೆಯ ಭಾಗದಲ್ಲಿರುವ ಈ ಕೊಬ್ಬನ್ನು ವಿಸೆರಲ್ ಕೊಬ್ಬು ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ.

ಈ ಬೊಜ್ಜನ್ನು ಕರಗಿಸುವುದು ಒಂದು ದೊಡ್ಡ ಸವಾಲಿನ ಕೆಲಸವೇ ಸರಿ.

ಈ ಬೊಜ್ಜನ್ನು ಹೀಗೇ ಬಿಟ್ಟರೆ, ಇದು ಟೈಪ್ 2 ಡಯಾಬಿಟಿಸ್, ಹೃದ್ರೋಗ ಹಾಗೂ ಇತರ ಗಂಭೀರ ಕಾಯಿಲೆಗಳಿಗೆ ದಾರಿ ಮಾಡಿಕೊಡುವ ಮೂಲಕ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು.


ಸ್ವಲ್ಪ ಮಟ್ಟಿನ ವ್ಯಾಯಾಮ(Exercise) ಹಾಗೂ ಆರೋಗ್ಯಕರ ಆಹಾರವನ್ನು ಸೇವಿಸದೆ ಗಮನಾರ್ಹ ಪ್ರಮಾಣದ ತೂಕವನ್ನು ಕಳೆದುಕೊಳ್ಳುವುದು ಸ್ವಲ್ಪ ಕಷ್ಟವಾದರೂ,

ಕಠಿಣ ಚಟುವಟಿಕೆಯಲ್ಲಿ ತೊಡಗಿಕೊಳ್ಳದೆ ಹಠಮಾರಿ ಹೊಟ್ಟೆಯ ಕೊಬ್ಬನ್ನು ಕರಗಿಸಲು ನೀವು ಅನುಸರಿಸಬಹುದಾದ ಕೆಲವು ನಿಯಮಗಳು ಇಲ್ಲಿವೆ ನೋಡಿ.

https://fb.watch/h6_9JrDPUG/ PROMO | ಥೂ ಥೂ..ಇದೆಂಥಾ ರಸ್ತೆ ರೀ? ಎಲ್ಲಿದೆ ಚಿನ್ನದ ರಸ್ತೆ?


ಮೊಟ್ಟ ಮೊದಲು ನೀವು ಸೇವಿಸುವ ಆಹಾರದ ಮೇಲೆ ನಿಯಂತ್ರಣವಿರುವುದು ಬಹಳ ಮುಖ್ಯ.

ನೀವು ಸೇವಿಸುವ ಆಹಾರದಲ್ಲಿರುವ ಕ್ಯಾಲೋರಿಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು.

ಉದಾಹರಣೆಗೆ, ನಿಮ್ಮ ನೆಚ್ಚಿನ ಆಹಾರವನ್ನು ಅತಿಯಾಗಿ ಸೇವಿಸುವುದರಿಂದ ಹೆಚ್ಚಿನ ಕ್ಯಾಲೋರಿ ದೇಹಕ್ಕೆ ಸೇರಿ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.

ಹಾಗಾಗಿ ನೀವು ಕ್ಯಾಲೋರಿ ಸೇವನೆಯನ್ನು ನಿಯಂತ್ರಿಸುವುದು ಅತೀ ಮುಖ್ಯ.

ಪ್ರತಿದಿನದ ಊಟವನ್ನು ವಿಭಜಿಸುವ ಮೂಲಕ ಹೊಟ್ಟೆಯ ಕೊಬ್ಬನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು. ಆಲ್ಕೋಹಾಲ್ ಅನ್ನು ಮಿತವಾಗಿ ಬಳಸುವುದು ಒಳ್ಳೆಯದು.

Reduce Weight

ಆಲ್ಕೋಹಾಲ್(Alcohol) ಅತಿಯಾದ ಸೇವನೆಯು ನಿಮ್ಮ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರಬಹುದು ಹಾಗೂ ಇದು ಹೊಟ್ಟೆಯ ಕೊಬ್ಬನ್ನು ಇನ್ನಷ್ಟು ಹೆಚ್ಚಿಸಬಹುದು.

ಹಾಗಾಗಿ ಪ್ರತಿನಿತ್ಯ ಒಂದಕ್ಕಿಂತ ಕಡಿಮೆ ಗ್ಲಾಸ್ ಮದ್ಯವನ್ನು ಕುಡಿಯುವ ಅಭ್ಯಾಸವುಳ್ಳವರು,

ಹೆಚ್ಚು ಆಲ್ಕೋಹಾಲ್ ಕುಡಿಯುವ ಅಭ್ಯಾಸವಿರುವವರಿಗಿಂತ ಕಡಿಮೆ ಹೊಟ್ಟೆಯ ಬೊಜ್ಜನ್ನು ಹೊಂದಿರುತ್ತಾರೆ ಎಂದು ಅಧ್ಯಯನಗಳು ನಿರೂಪಿಸಿವೆ.


ಡಿಟಾಕ್ಸ್ ಜ್ಯೂಸ್ ಸೇವನೆ ಒಳ್ಳೆಯದು. ಇವು ದೇಹದಲ್ಲಿನ ತ್ಯಾಜ್ಯವನ್ನು ಹೊರ ಹಾಕುವ ಮೂಲಕ ನಿಮ್ಮ ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ.

ಉಪಯೋಗಕಾರಿ ಬ್ಯಾಕ್ಟೀರಿಯಾದ ಕೆಲಸವನ್ನು ಬಲಪಡಿಸುವ ಮೂಲಕ ಹೊಟ್ಟೆಯ ಅಧಿಕ ಕೊಬ್ಬನ್ನು ಕರಗಿಸುತ್ತದೆ.

https://fb.watch/h6_9JrDPUG/ PROMO | ಥೂ ಥೂ..ಇದೆಂಥಾ ರಸ್ತೆ ರೀ? ಎಲ್ಲಿದೆ ಚಿನ್ನದ ರಸ್ತೆ?


ಇನ್ನು, ಸಮತಟ್ಟಾದ ಹೊಟ್ಟೆಯನ್ನು ಪಡೆಯುವ ಮೊದಲ ಹಂತವೆಂದರೆ ಕುಳಿತುಕೊಳ್ಳುವ ಸರಿಯಾದ ಭಂಗಿ. ನೀವು ಬಾಗಿದಾಗ ಅಥವಾ ಬಗ್ಗಿ ಕುಳಿತಾಗ,

ನಿಮ್ಮ ಹೊಟ್ಟೆಯು ಹೆಚ್ಚು ಕಾಣುತ್ತದೆ. ಇದೇ ರೀತಿ ನಿರಂತರವಾಗಿ ನೀವು ಕುಳಿತುಕೊಳ್ಳುವುದು ಅಥವಾ ಬಾಗುವುದನ್ನು ಮುಂದುವರಿಸಿದರೆ, ನಿಮ್ಮ ಹೊಟ್ಟೆ ಮುಂದಕ್ಕೆ ಜೋತು ಬೀಳಲು ಶುರುವಾಗುತ್ತದೆ.

ಆದ್ದರಿಂದ, ನೀವು ಪ್ರತೀ ಬಾರಿಯೂ ಕುರ್ಚಿಯ ಮೇಲೆ ಕುಳಿತುಕೊಳ್ಳುವಾಗ ಉತ್ತಮ ಭಂಗಿಯನ್ನು ಕಾಪಾಡಿಕೊಳ್ಳುವುದು ಅಗತ್ಯ.


ರಾತ್ರಿ ಹೊತ್ತಿನಲ್ಲಿ ಸಾಧ್ಯವಾದಷ್ಟು ಕಮ್ಮಿ ಆಹಾರವನ್ನು ಸೇವಿಸಿರಿ, ಅಂದರೆ ಲಘು ಭೋಜನವನ್ನು ಅನುಸರಿಸಿ.

ಇದರಿಂದ ಹೊಟ್ಟೆಯಲ್ಲಿನ ಹೆಚ್ಚುವರಿ ಕೊಬ್ಬನ್ನು ಶೀಘ್ರವೇ ಕಡಿಮೆ ಮಾಡಿಕೊಳ್ಳಬಹುದು.

How To Reduce Fat

ಹಾಗಂತ ಖಾಲಿ ಹೊಟ್ಟೆಯಲ್ಲಿ ಮಲಗುವುದು ಸೂಕ್ತವಲ್ಲ, ಸ್ವಲ್ಪ ಪ್ರಮಾಣದ ಲಘು ಆಹಾರ ಸೇವನೆ ಸೂಕ್ತ.

ಪದೇ ಪದೇ ಚ್ಯೂಯಿಂಗ್‌ಗಮ್ ಅಗಿಯುವುದು ಒಳ್ಳೆಯದಲ್ಲ, ಏಕೆಂದರೆ ಇದನ್ನು ಅಗಿಯುವಾಗ ಬಹಳ ಗಾಳಿ ದೇಹದ ಒಳಗೆ ಸೇರುತ್ತದೆ.

ಇದರ ಪರಿಣಾಮವಾಗಿ, ನೀವು ಬೊಜ್ಜನ್ನು ಹೊಂದಿ ವ್ಯಾಯಾಮ ಮಾಡಲು ಬಹಳ ಕಷ್ಟಪಡುತ್ತೀರಿ.


ಸಂಶೋಧನೆಗಳ ಪ್ರಕಾರ, ಕಾಫಿ ಸೇವನೆಯಿಂದ ಅದರಲ್ಲಿರುವ ಕೆಫೀನ್ ಅಂಶದಿಂದಾಗಿ ನಿಮ್ಮ ಚಯಾಪಚಯ ಕ್ರಿಯೆಯಲ್ಲಿ ತಾತ್ಕಾಲಿಕ ಹೆಚ್ಚಳವಾಗುತ್ತದೆ.

ಆದ್ದರಿಂದ, ಸಕ್ಕರೆಯಿಲ್ಲದೆ ಒಂದು ಕಪ್ ಕಾಫಿ ಕುಡಿಯುವುದು ಬಹಳ ಪ್ರಯೋಜನಕಾರಿಯಾಗಿದೆ,

ಇದು ನಿಮ್ಮ ಹೊಟ್ಟೆಯನ್ನು ಫಿಟ್ ಆಗಿರಿಸಲು ಸಹಕರಿಯಾಗಿದೆ.

ಇದನ್ನೂ ಓದಿ : https://vijayatimes.com/new-update-of-ration-card/


ಇನ್ನು, ಆಪಲ್ ಸೈಡರ್ ವಿನೆಗರ್(Apple Sider Vinegar) ಕೂಡ ಕಿಬ್ಬೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಕಾರಿ.

ಒಂದು ಅಥವಾ ಎರಡು ಚಮಚ ಆಪಲ್ ಸೈಡರ್ ವಿನೆಗರ್ ನ್ನು ನೀರಿನಲ್ಲಿ ಹಾಕಿ ಕುಡಿಯುವುದರಿಂದ ಹೊಟ್ಟೆಯ ಕೊಬ್ಬು ಪರಿಣಾಮಕಾರಿಯಾಗಿ ಕಡಿಮೆಯಾಗುತ್ತದೆ.

ಇದನ್ನೂ ಓದಿ : https://vijayatimes.com/187-coins-removed/


ಒಟ್ಟಿನಲ್ಲಿ, ಹೊಟ್ಟೆಯ ಕೊಬ್ಬನ್ನು ಕರಗಿಸಲು ಸ್ವಲ್ಪ ಪ್ರಯತ್ನ, ತಾಳ್ಮೆ ಹಾಗೂ ದೀರ್ಘಕಾಲೀನ ಬದ್ಧತೆಯ ಅಗತ್ಯವಿದೆ.

ಅಲ್ಲದೇ, ಹೊಟ್ಟೆಯ ಕೊಬ್ಬು ಕಡಿಮೆ ಮಾಡಿಕೊಳ್ಳಲು ಅತ್ಯಂತ ಮೂಲಭೂತ ವಿಧಾನ ಎಂದರೆ ನೀವು ಸೇವಿಸುವುದಕ್ಕಿಂತ ಹೆಚ್ಚಿನ ಕ್ಯಾಲೋರಿಗಳನ್ನು ದಹಿಸುವ ಅಭ್ಯಾಸ ಮಾಡಿಕೊಳ್ಳುವುದು.

Tags: fatfoodhealth tips

Related News

ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.
ಆರೋಗ್ಯ

ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.

March 29, 2023
ಬಿರು ಬೇಸಿಗೆ ಬರುತ್ತಿದೆ ಹುಷಾರ್‌ ! ಕಂಡಿದ್ದನ್ನೆಲ್ಲಾ ತಿಂದು ಆಸ್ಪತ್ರೆ ಸೇರಬೇಡಿ
Vijaya Time

ಬಿರು ಬೇಸಿಗೆ ಬರುತ್ತಿದೆ ಹುಷಾರ್‌ ! ಕಂಡಿದ್ದನ್ನೆಲ್ಲಾ ತಿಂದು ಆಸ್ಪತ್ರೆ ಸೇರಬೇಡಿ

March 25, 2023
‘ವಿಷ ಪಾತ್ರೆ’  ನಿಮ್ಮ ಮನೆಯಲ್ಲಿ ನಾನ್ ಸ್ಟಿಕ್ ಪಾತ್ರೆ ಇದ್ರೆ ಇಂದೇ ಬಿಸಾಕಿ
ಆರೋಗ್ಯ

‘ವಿಷ ಪಾತ್ರೆ’ ನಿಮ್ಮ ಮನೆಯಲ್ಲಿ ನಾನ್ ಸ್ಟಿಕ್ ಪಾತ್ರೆ ಇದ್ರೆ ಇಂದೇ ಬಿಸಾಕಿ

March 25, 2023
ನಿಮಗೆ ಅಂಗೈ ಬೆವರೋ ಸಮಸ್ಯೆ ಇದೆಯಾ? ಇದು ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣನಾ?
Lifestyle

ನಿಮಗೆ ಅಂಗೈ ಬೆವರೋ ಸಮಸ್ಯೆ ಇದೆಯಾ? ಇದು ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣನಾ?

March 18, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.