ಕಾರ್ಕಳದ ಪರಶುರಾಮನ ಕ್ಷೇತ್ರದಲ್ಲಿ ನಡೆಯುತ್ತಿರುವುದು ಧಾರ್ಮಿಕ ಕಾರ್ಯಕ್ರಮವೇ… ಅಥವಾ ಮೋಜು ಮಸ್ತಿಯೋ : ಕಾರ್ಕಳದ ನಾಗರಿಕರ ಪ್ರಶ್ನೆಗೆ ಉತ್ತರ ಕೊಡಿ ಸಚಿವ ಸುನಿಲ್‌ ಕುಮಾರ್‌ ಅವರೇ

Karkala: ಕಾರ್ಕಳದಲ್ಲಿ ಕೊಟ್ಯಾಂತರ ರೂಪಾಯಿ ವೆಚ್ಚದಲ್ಲಿ ಪರಶುರಾಮ ಥೀಮ್ ಪಾರ್ಕ್(Parashuram Theme Park) ಉದ್ಘಾಟನೆಗೊಂಡಿತು. ಮುಖ್ಯಮಂತ್ರಿಯಾದಿಯಾಗಿ(Chief Minister) ಅನೇಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಯೋಜನೆಯನ್ನು ಸಮರ್ಥಿಸಿಕೊಂಡ್ರು. ಇದು ಜಿಲ್ಲೆಯ ಪ್ರವಾಸೋದ್ಯಮದ(Humiliation Parasurama at Karkala) ಪ್ರಗತಿಗೆ ದೊಡ್ಡ ಕಾಣಿಕೆ ಕೊಡಲಿದೆ.

ಇದು ದೊಡ್ಡ ಧಾರ್ಮಿಕ ಕೇಂದ್ರವಾಗಿ ಪರಿವರ್ತನೆಯಾಗಲಿದೆ ಅಂತ ರಾಜಕೀಯ ನಾಯಕರು ಹೇಳಿದ್ರು.ಆದ್ರೆ ಈ ಕಾರ್ಯಕ್ರಮ ಆಯೋಜನೆಗೊಂಡ ರೀತಿ, ಅವಸರವಸರವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡ ಬಗೆ ಸ್ಥಳೀಯರ ಅಸಮಾಧಾನಕ್ಕೆ ಕಾರಣ ವಾಗಿದೆ.

ಪರಶುರಾಮ ಥೀಮ್‌ ಪಾರ್ಕ್‌ ಉದ್ಘಾಟನೆ ಒಂದು ಧಾರ್ಮಿಕ ಕಾರ್ಯಕ್ರಮ ,ಆದ್ರೆ ಇಲ್ಲಿ ಹಿಂದೂ ಧಾರ್ಮಿಕತೆಗೆ ಧಕ್ಕೆ ಆಗುವ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂಬುದು ಹಿಂದೂ(Hindu) ಮುಖಂಡರ ಆರೋಪವಾಗಿದೆ.

ಈ ಕಾರ್ಯಕ್ರಮದಲ್ಲಿ ಧಾರ್ಮಿಕತೆಗಿಂತ ಹೆಚ್ಚು ಮೋಜು ಮಸ್ತಿಗೆ ಪ್ರಾಮುಖ್ಯತೆ ನೀಡಲಾಗಿದೆ. ಯುವ ಜನರನ್ನು ಮರಳು ಮಾಡುವುದೇ ಈ ಕಾರ್ಯಕ್ರಮದ ಉದ್ದೇಶವೋ ಅನ್ನೋ ರೀತಿಯಲ್ಲಿ ಸಾಂಸ್ಕೃತಿಕ(Humiliation Parasurama at Karkala) ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಅದ್ರಲ್ಲೂ ಬಾಲಿವುಡ್‌(Bollywood), ವಿದೇಶಿ ಹಾಡುಗಳ ಡಿಜೆ(DJ) ಕಾರ್ಯಕ್ರಮಗಳನ್ನು ಹಾಕಿ ಹುಚ್ಚಾಪಟ್ಟೆ ಕುಣಿಸಿದ್ದಾರೆ. ಇದು ಪರಶುರಾಮನಿಗೇ ಮಾಡಿರೋ ಅಪಚಾರ ಅನ್ನೋದು ಸ್ಥಳೀಯರ ಆರೋಪ.

ಇದನ್ನೂ ಓದಿ: ಕುಟುಂಬಕ್ಕೆ ಒಂದು ಟಿಕೆಟ್‌ ಎಂದು ಘೋಷಿಸಲಿ, ನನ್ನ ಮಕ್ಕಳಿಂದ ರಾಜೀನಾಮೆ ಕೊಡಿಸ್ತೀನಿ: ಹೆಚ್.ಡಿ ರೇವಣ್ಣ

ಪರಶುರಾಮ ಥೀಮ್‌ ಪಾರ್ಕ್‌ ಬರೀ ಆಡಂಬರಕ್ಕೆ ಮಾಡಿದಂತಿದೆ. ಇದು ಪರಶುರಾಮರ ಮೇಲಿನ ಭಕ್ತಿಯಿಂದ ಅಲ್ಲ ಎಂಬುವುದು ಸ್ಪಷ್ಟವಾಗಿ ತಿಳಿಯುತ್ತದೆ.

ತುಳುನಾಡನ್ನು(Tulu Nadu) ಹಾಡಿ ಹೊಗಳುವಂತಹ, ಹಿಂದೂ ಸಂಸ್ಕೃತಿಯನ್ನು, ತುಳುವರ ಸಾಧನೆಗಳನ್ನು ಬಿಂಬಿಸುವಂತಹ ಕಾರ್ಯಕ್ರಮಗಳು ಇರಲೇ ಇಲ್ಲ.

ಥೀಮ್‌ ಪಾರ್ಕ್‌ ಒಳಗೆ ಹೋಗುವಾಗಲೇ ಮುಖ್ಯ ದ್ವಾರದ ಬಳಿ ಸಚಿವರ ಕೆಲಸವನ್ನು ಸಾಧನೆ ಎಂದು ಬಿಂಬಿಸುವ ಆರ್ಟ್ ಗ್ಯಾಲರಿಯಂತೆ 10-15 ದೊಡ್ಡ ದೊಡ್ಡ ಬ್ಯಾನರ್ಗಳು.

ಉಡುಪಿ ರಸ್ತೆಯ ಬಂಗಲೆಗುಡ್ಡೆಯಿಂದ(Bangle Gudde) ಹಿಡಿದು ಗುಡ್ಡೆಅಂಗಡಿಯವರೆಗೆ ಲಕ್ಷಾಂತರ ಬಲ್ಬುಗಳು, ಸಾವಿರಾರು ಸಂಖ್ಯೆಯಲ್ಲಿ ಬ್ಯಾನರ್ಗಳು ಮತ್ತು ಪ್ರತಿಯೊಂದು ಬ್ಯಾನರ್ ನಲ್ಲಿ ಸಚಿವರ ಫೋಟೋ.

ಕೆಲವು ಬ್ಯಾನರ್ ಗಳಲ್ಲಂತೂ ಪರಶುರಾಮರ ಫೋಟೋಗಿಂತ ಸಚಿವರ ಫೋಟೋ ದೊಡ್ಡದಾಗಿದೆ. ಧಾರ್ಮಿಕ ಕಾರ್ಯಕ್ರಮಕ್ಕೆ ಇದೆಲ್ಲ ಬೇಕಿತ್ತೆ? ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಇದಕ್ಕೆ ಇಂಧನ ಸಚಿವ, ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಸುನಿಲ್ ಕುಮಾರ್‌(V Sunil Kumar) ಅವರು ಉತ್ತರಿಸಲೇ ಬೇಕಾಗಿದೆ.

ಇದನ್ನೂ ಓದಿ: ವಂದೇ ಭಾರತ್ ರೈಲಿನಲ್ಲಿ ರಾಶಿ ರಾಶಿ ಪ್ಲಾಸ್ಟಿಕ್‌ ಬಾಟಲಿಗಳು: ಕಾಣೆಯಾಯ್ತು ಸ್ವಚ್ಛ ಭಾರತ

ಬರೀ ಮೋಜು ಮಸ್ತಿಗೋಸ್ಕರ ಜನರ ಹಣವನ್ನು ಈ ರೀತಿ ಪೋಲು ಮಾಡೋದು ಸರಿಯೇ? ಇಷ್ಟು ವರ್ಷ ಕ್ಷೇತ್ರದ ಅಭಿವೃದ್ಧಿಯನ್ನು ಮರೆತಿರುವ ಶಾಸಕರು ಚುನಾವಣೆ ಹತ್ತಿರ ಬರುತ್ತಿರುವವಂತೆ ಮೇಳ,

ಉತ್ಸವದ ಹೆಸರಲ್ಲಿ ಸರ್ಕಾರದ ಕೋಟ್ಯಾಂತರ ರೂಪಾಯಿಯಲ್ಲಿ ತಮ್ಮ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ ಅನ್ನೋದು ಸಾರ್ವಜನಿಕರ ಅಭಿಪ್ರಾಯವಾಗಿದೆ.


ಈ ಆಡಂಬರದಿಂದ ಯಾವ ಬಡವನ ಹೊಟ್ಟೆಯು ತುಂಬುವುದಿಲ್ಲ. ಉದ್ಯೋಗ ಇಲ್ಲದೆ, ದುಡಿಮೆ ಇಲ್ಲದೆ ಜನ ಕಂಗಾಲಾಗಿದ್ದಾರೆ.

ಸರ್ಕಾರದ ಈ ದುಂದುವೆಚ್ಚದ ಕಾರ್ಯಕ್ರಮಗಳು ಜನತೆಯ ಹೊಟ್ಟೆಗೆ ಬರೆ ಎಳೆಯದಿದ್ದಾರೆ ಸಾಕು ಎನ್ನುವುದೇ ಪ್ರತಿಯೊಬ್ಬ ನಾಗರಿಕರ ಮನವಿಯಾಗಿದೆ.

Exit mobile version