ಹೈಡ್ರಾಫೇಶಿಯಲ್ ಮಾಡಿಸಿಕೊಳ್ಳುವವರೇ ಎಚ್ಚರ : 17,000ರೂ ಕೊಟ್ಟು ಫೇಶಿಯಲ್‌ ಮಾಡಿಸಿ ಮುಖವೇ ಸುಟ್ಟೋಯ್ತು!

Mumbai : ಇತ್ತೀಚೆಗಂತೂ ಮುಖಕ್ಕೆ ಫೇಶಿಯಲ್‌ (Hydra facial burned face) ಮಾಡಿಸಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ . ಅದರಲ್ಲೂ ಆಗಾಗ್ಗೆ ಕೆಲವೊಮ್ಮೆ ಪುರುಷರು ಸಹ

ಅಪರೂಪಕ್ಕೊಮ್ಮೆ ಫೇಶಿಯಲ್‌ ಮಾಡಿಸಿಕೊಳ್ಳುತ್ತಾರಾದರೂ, ಹೆಚ್ಚಾಗಿ ಮಹಿಳೆಯರು ಫೇಶಿಯಲ್‌ ಮಾಡಿಸಿಕೊಳ್ಳುತ್ತಿರುತ್ತಾರೆ. ಇದಕ್ಕೆ ಸಾವಿರಾರು ರೂಪಾಯಿಯನ್ನು ಸಹ ಖರ್ಚು ಮಾಡುತ್ತಾರೆ.

ಆದರೆ, ಇಲ್ಲೊಬ್ಬ ಮಹಿಳೆ ಹತ್ತಾರು ಸಾವಿರ ರೂ. ಖರ್ಚು ಮಾಡಿಸಿಕೊಂಡು ಮುಖಕ್ಕೆ ಫೇಶಿಯಲ್‌ ಮಾಡಿಸಿಕೊಂಡ ನಂತರ ಈಗ ಅವರ ಮುಖ ಹೇಗಾಗಿದೆ ನೋಡಿ..ಮುಖದ ಮಸಾಜ್ ಟ್ರೀಟ್ಮೆಂಟ್‌

(Massage Treatment) ಬಳಿಕ ಈ ಮಹಿಳೆಯ ಮುಖದ ಚರ್ಮದ ಮೇಲೆ ಸುಟ್ಟ ಗಾಯಗಳಾಗಿದ್ದು, ಅವರ ಮುಖವು ಶಾಶ್ವತ ಹಾನಿಗೊಳಗಾಗಿದೆ. ಈ ಹಿನ್ನೆಲೆಯಲ್ಲಿ ಬ್ಯೂಟಿ ಸಲೂನ್

(Salon) ವಿರುದ್ಧ ಮಹಿಳೆಯೊಬ್ಬರು ಎಫ್ಐಆರ್ ದಾಖಲಿಸಿರುವ ಘಟನೆ ಮಹಾರಾಷ್ಟ್ರ(Hydra facial burned face) ರಾಜಧಾನಿ ಮುಂಬೈನಲ್ಲಿ (Mumbai) ನಡೆದಿದೆ.

ಈ ಘಟನೆ ಜೂನ್ 17 ರಂದು ನಡೆದಿದ್ದು ಅಂಧೇರಿಯ (Andheri) ಕಾಮಧೇನು ಶಾಪಿಂಗ್ ಸೆಂಟರ್‌ನಲ್ಲಿರುವ ಗ್ಲೋ ಲಕ್ಸ್ ಸಲೂನ್‌ನಿಂದ ಆ ಮಹಿಳೆಯು 17,500 ರೂಪಾಯಿ ಮೌಲ್ಯದ

ಹೈಡ್ರಾಫೇಶಿಯಲ್ ಟ್ರೀಟ್ಮೆಂಟ್‌(Hydra Facial Treatment) ಪಡೆದಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ.

ವೈದ್ಯಕೀಯ-ದರ್ಜೆಯ ರೀಸರ್ಫೇಸಿಂಗ್‌ ಚಿಕಿತ್ಸೆಯಾಗಿದೆ ಈ ಹೈಡ್ರಾಫೇಶಿಯಲ್. ಇದು ಮುಖದಲ್ಲಿರುವ ರಂಧ್ರಗಳನ್ನು(Pores) ಕ್ಲಿಯರ್‌ ಮಾಡುತ್ತದೆ ಮತ್ತು ಚರ್ಮವನ್ನು ಹೈಡ್ರೇಟ್ (Hydrate) ಆಗಿರಲು ಸಹಾಯ

ಮಾಡುತ್ತದೆ . ಪ್ರಮಾಣೀಕೃತ ಹೈಡ್ರಾಫೇಶಿಯಲ್ ಸೌಂದರ್ಯಶಾಸ್ತ್ರಜ್ಞರು ಲಭ್ಯವಿರುವಲ್ಲಿ ಮತ್ತು ಪರವಾನಗಿ ಪಡೆದ ವೈದ್ಯಕೀಯ ವೃತ್ತಿಪರ ಸೌಲಭ್ಯಗಳಲ್ಲಿ ಮಾತ್ರ ಇದನ್ನು ನೀಡಲಾಗುತ್ತದೆ.

ಇದನ್ನೂ ಓದಿ : ಇಂದಿರಾ ಕ್ಯಾಂಟೀನ್‌ ಊಟದ ಮೆನು ಬದಲಾವಣೆ : ಹೊಸ ಸೇರ್ಪಡೆ ಪಟ್ಟಿ ಇಲ್ಲಿದೆ ನೋಡಿ

ಆದರೂ ಮಹಿಳೆಯು ಸುಡುವ ಸಂವೇದನೆಯನ್ನು ಈ ಚಿಕಿತ್ಸೆಯ ನಂತರ ಅನುಭವಿಸಿದರು ಹಾಗೂ ಚರ್ಮಶಾಸ್ತ್ರಜ್ಞರನ್ನು (Dermotologist) ನಂತರ ಸಂಪರ್ಕಿಸಿದರು ಎಂದು ತಿಳಿದುಬಂದಿದೆ. ಚರ್ಮದ

ಸುಟ್ಟಗಾಯಗಳು ಮತ್ತು ಶಾಶ್ವತ ಹಾನಿಯನ್ನು ಅವರು ಮಸಾಜ್‌ನಿಂದ ಅನುಭವಿಸಿದ್ದಾರೆ ಎಂದು ಹೇಳಿದರು. ನಂತರ ಈ ಬಗ್ಗೆ ಎಫ್‌ಐಆರ್(FIR) ಸಹ ದಾಖಲಿಸಿದರು ಎಂದೂ ತಿಳಿದುಬಂದಿದೆ.

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಈ ಮಹಿಳೆ ಮಾಡಿರುವ ಟ್ವೀಟ್‌ (Tweet) ವೈರಲ್‌ ಆಗಿದೆ. ಈ ಘಟನೆಯ ಬಗ್ಗೆ ಆಘಾತದಿಂದ ಟ್ವಿಟ್ಟರ್‌ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ

ಮತ್ತು ಅಂತಹ ಸಲೂನ್‌ಗಳನ್ನು ನಿಯಂತ್ರಿಸಬೇಕೆಂದು ಕರೆ ನೀಡಿದರು.

ಯಾವುದೇ ಕಾನೂನುಗಳು ಪಾರ್ಲರ್‌ಗಳ ಮೇಲೆ ಇಲ್ಲ, ಅದಕ್ಕಾಗಿಯೇ ಅವು ನಾಯಿಕೊಡೆಗಳಂತೆ ನಗರದಾದ್ಯಂತ ಬೆಳೆಯುತ್ತಿದೆ. ಮತ್ತು ರಾತ್ರೋರಾತ್ರಿ ಶ್ರೀಮಂತರಾಗಲು ಪ್ರತಿಯೊಬ್ಬರೂ

ಬಯಸಿದಾಗ ಇಂತಹ ಸಮಸ್ಯೆಗಳು ಸ್ಫೋಟಗೊಳ್ಳುತ್ತವೆ” ಎಂದು ಟ್ವಿಟ್ಟರ್‌ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

ರಶ್ಮಿತಾ ಅನೀಶ್

Exit mobile version