ಜೆಡಿಎಸ್ ಗೆ ಬಹುಮತ ಬರದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ : ಹೆಚ್ ಡಿ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ

Karnataka : ವಿಧಾನಸಭಾ ಚುನಾವಣೆಗೆ (Assembly Election) ಪ್ರಾರಂಭವಾಗಿದೆ, ಇಂಥಾ ಮಹತ್ವದ ಘಟ್ಟದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (HD Kumarswamy) ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಅದೇನಂದ್ರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (I will dissolve JDS) ಜಾತ್ಯತೀತ ಜನತಾದಳ ಬಹುಮತ ಪಡೆಯುವ ವಿಶ್ವಾಸವಿದೆ.

ಒಂದು ವೇಳೆ ಬಹುಮತ ಪಡೆಯದಿದ್ದರೆ ಪಕ್ಷವನ್ನೇ ವಿಸರ್ಜಿಸುತ್ತೇನೆ ಕುಮಾರಸ್ವಾಮಿ ಘೋಷಿಸಿದ್ದಾರೆ. ಜೆಡಿಎಸ್ (JDS) ನಾಯಕ ಕುಮಾರಸ್ವಾಮಿಯವರು ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಫೋಟೋಕರ್ ಪರ ಪ್ರಚಾರ ನಡೆಸಲು ಉತ್ತರ ಕನ್ನಡ ಜಿಲ್ಲೆಯ (Uttara Kannada District) ಹಳಿಯಾಳಕ್ಕೆ ಹೋಗಿದ್ದರು ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ,

ಇದನ್ನೂ ಓದಿ : http://Who will become Bantwal MLA | ಬಂಟ್ವಾಳದ MLA ಯಾರು?

ನನಗೆ ಜನ ಪೂರ್ಣ ಬಹುಮತದೊಂದಿಗೆ ಆಶೀರ್ವಾದ ಮಾಡ್ತಾರೆ ಅನ್ನೋ ವಿಶ್ವಾಸ ನನಗಿದೆ. ಒಂದು ವೇಳೆ ಈ ಬಾರಿ ಸರ್ಕಾರ ರಚಿಸಲು ನಮಗೆ ಬಹುಮತ (I will dissolve JDS) ಬರದಿದ್ದರೆ ಪಕ್ಷವನ್ನೇ ವಿಸರ್ಜಿಸುತ್ತೇನೆ ಎಂದು ಕುಮಾರಸ್ವಾಮಿ ಕಠಿಣ ಹೇಳಿಕೆ ನೀಡಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ನ 190 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ನಾವು ಶಕ್ತಿ ಮೀರಿ ಗೆಲುವಿಗೆ ಶ್ರಮವಹಿಸುತ್ತಿದ್ದೇವೆ. ನಮ್ಮ ಪಂಚರತ್ನ ಯೋಜನೆಯ ಮಹತ್ವವನ್ನು ಜನರಿಗೆ ಸಾರುತ್ತಿದ್ದೇವೆ.

ಇದನ್ನೂ ಓದಿ : https://vijayatimes.com/supreme-court-verdict/

ಕಾಂಗ್ರೆಸ್‌ (Congress), ಬಿಜೆಪಿಯಂಥಾ (BJP) ರಾಷ್ಟ್ರೀಯ ಪಕ್ಷಗಳಿಂದ ಕನ್ನಡಿಗರ ಏಳಿಗೆ ಸಾಧ್ಯವಿಲ್ಲ. ಹಾಗಾಗಿ ಈ ಬಾರಿ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಗೆ ಜನ ಬೆಂಬಲ ಕೊಡಬೇಕು ಎಂದು ನಾವು ಕೇಳಿಕೊಳ್ಳುತ್ತಿದ್ದೇವೆ. ನಾಡಿನ ಜನತೆ ಕೂಡ ನಮ್ಮ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ನನಗಿದ್ದು, ಸರ್ಕಾರ ರಚಿಸಲು ಬಹುಮತ ಬರದಿದ್ದರೆ ಪಕ್ಷವನ್ನು ವಿಸರ್ಜಿಸಲು ನಿರ್ಧರಿಸಿದ್ದೇನೆ ಎಂದು ಅಚ್ಚರಿಯ ಹೇಳಿಕೆ ಕುಮಾರಸ್ವಾಮಿ ನೀಡಿದರು.

Exit mobile version