1990ರ ವಾಯುಸೇನೆ ಸಿಬ್ಬಂದಿ ಹತ್ಯೆ ಪ್ರಕರಣ: ಯಾಸಿನ್ ಮಲಿಕ್ ಮುಖ್ಯ ಶೂಟರ್ ಎಂದು ಖಚಿತಪಡಿಸಿದ ಪ್ರತ್ಯಕ್ಷ ಸಾಕ್ಷಿ

New Delhi: 1990ರಲ್ಲಿ ಭಾರತೀಯ ವಾಯು ಸೇನೆಯ ನಾಲ್ವರು ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದಿದ್ದ ಪ್ರಕರಣಕ್ಕೆ (IAF Personnel 1990 Killing Case) ಸಂಬಂಧಿಸಿದಂತೆ ಪ್ರಮುಖ ಆರೋಪಿ

ಜಮ್ಮು ಕಾಶ್ಮೀರ (Jammu Kashmira) ಲಿಬರೇಶನ್ ಫ್ರಂಟ್ ಮುಖ್ಯಸ್ಥ ಯಾಸಿನ್ ಮಲಿಕ್‌ನನ್ನು ಘಟನೆಯ ಪ್ರತ್ಯಕ್ಷ ಸಾಕ್ಷಿಯಾಗಿರುವ ವಾಯುಸೇನೆಯ ನಿವೃತ್ತ ಅಧಿಕಾರಿ ಗುರುತು ಹಿಡಿದು ಖಚಿತ ಪಡಿಸಿದ್ದಾರೆ.

ಶ್ರೀನಗರದ (Srinagar) ಹೊರವಲಯದ ರಾವಲ್ಪುರದಲ್ಲಿ ನಡೆದ ಪೈಶಾಚಿಕ ಕೃತ್ಯದ ಆರೋಪಿಯನ್ನು ಜಮ್ಮುವಿನ ಟಾಡಾ ಕೋರ್ಟ್ (TADA COURT, JAMMU)ಗೆ ಹಾಜರುಪಡಿಸಲಾಯಿತು.

1990ರ ಜನವರಿ 25ರಂದು ಭಾರತೀಯ ವಾಯುಸೇನೆಯ ಸಿಬ್ಬಂದಿಯ ಮೇಲೆ ನಡೆದ ಏಕಾಏಕಿ ದಾಳಿಯಲ್ಲಿ ಸ್ಕಾಡ್ರನ್ ಲೀಡರ್ ರವಿ ಖನ್ನಾ ಸೇರಿದಂತೆ ನಾಲ್ವರು ವಾಯಸೇನೆ ಸಿಬ್ಬಂದಿ ಮೃತಪಟ್ಟು

40 ಮಂದಿ (IAF Personnel 1990 Killing Case) ಗಾಯಗೊಂಡಿದ್ದರು.

ಈ ಪ್ರಕರಣದಲ್ಲಿ ಪ್ರಮುಖ ಪ್ರತ್ಯಕ್ಷ ಸಾಕ್ಷಿಯಾಗಿರುವ ನಿವೃತ್ತ ವಾಯುಸೇನಾ ಅಧಿಕಾರಿಯು ಪ್ರಕರಣದ ಪ್ರಮುಖ ಶೂಟರ್ ಜೆಕೆಎಲ್ ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ (Yaseen Mallik) ನನ್ನು ಗುರುತು

ಹಿಡಿದಿದ್ದಾರೆ. ಅವರಿಗೂ ಈ ಘಟನೆಯಲ್ಲಿ 4 ಗುಂಡುಗಳು ಬಿದ್ದಿದ್ದವು ಎಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಸರ್ಕಾರಿ ವಕೀಲೆ ಮೋನಿಕಾ ಕೋಹ್ಲಿ ಅವರು ತಿಳಿಸಿದ್ದಾರೆ.

ಉಗ್ರ ಚಟುವಟಿಕೆಗೆ ಹಣ ಪೂರೈಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ 2019ರಿಂದ ದಿಲ್ಲಿಯ ತಿಹಾರ್ ಜೈಲಿನಲ್ಲಿರುವ ಯಾಸಿನ್ ಮಲಿಕ್ ವರ್ಚುವಲ್ ನಲ್ಲಿ ಕೋರ್ಟ್ ಕಲಾಪಕ್ಕೆ ಹಾಜರಾಗಿದ್ದ.

ಈ ವೇಳೆ ಮಲಿಕ್ ನನ್ನು, ನಿವೃತ್ತ ಅಧಿಕಾರಿ ತೋರಿಸಿ ಈತನೇ ಮುಖ್ಯ ಶೂಟರ್ ಎಂದು ಖಚಿತಪಡಿಸಿದರು. ವಾಯುಸೇನೆ ಅಧಿಕಾರಿಗಳು ಮತ್ತು ಸಿಬ್ಬಂದಿ ರಸ್ತೆ ಬದಿ ನಿಂತಿದ್ದಾಗ ಅಲ್ಲಿಗೆ ಬಂದ ಯಾಸಿನ್

ಮಲಿಕ್ ತನ್ನ ಬಳಿಯಿದ್ದ ಆಟೋಮೆಟಿಕ್ ರೈಫಲ್ (Automatic Riffle) ನಿಂದ ಏಕಾಏಕಿ ಗುಂಡಿನ ದಾಳಿ ನಡೆಸಿದ್ದ ಎಂದು ನಿವೃತ್ತ ಅಧಿಕಾರಿ ತಿಳಿಸಿದರು.

ಈ ಪ್ರಕರಣದಲ್ಲಿ ಆರೋಪಿಯ ಶಿಕ್ಷೆಯನ್ನು ನಿಗದಿಪಡಿಸಲು ಅತ್ಯಂತ ಮಹತ್ವದ ಬೆಳವಣಿಗೆ ಮತ್ತು ದೊಡ್ಡ ಸಾಧನೆ ಎಂದು ಮೋನಿಕಾ ಕೊಹ್ಲಿ (Monica Kohli) ಮಾಹಿತಿ ನೀಡಿದರು. ಈ ಪ್ರಕರಣದ

ವಿಚಾರಣೆಯನ್ನು ಫಜಮ್ಮು ಟಾಡಾ ವಿಶೇಷ ಕೋರ್ಟ್ ಫೆಬ್ರವರಿ (February) 15 ಮತ್ತು 16ಕ್ಕೆ ಮುಂದೂಡಲಾಗಿದ್ದು, ಮಲಿಕ್ 2 ವಿಚಾರಣೆಗಳನ್ನು ಎದುರಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಯಾಸಿನ್

ಮತ್ತು ಇತರ ಆರು ಮಂದಿಯ ವಿರುದ್ಧ ಮಾರ್ಚ್ 2020ರಲ್ಲಿಪ್ರಕರಣ ದಾಖಲಿಸಿ ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಂಡಿತ್ತು.

ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ (Jammu And Kashmir Liberation Front)ನ ಸದಸ್ಯರಾದ ಅಲಿ ಮೊಹಮ್ಮದ್ ಮಿರ್, ಮನ್ಸೂರ್ ಅಹ್ಮದ್ ಸೋಫಿ ಅಲಿಯಾಸ್ ಮುಸ್ತಾಫಾ,

ಜಾವೇದ್ ಅಹ್ಮದ್ ಮಿರ್ ಅಲಿಯಾಸ್ ನಾಲ್ಕಾ, ಶೌಕತ್ ಅಹ್ಮದ್ ಭಕ್ಷಿ, ಜಾವೇದ್ ಅಹ್ಮದ್ ಝರ್ಗರ್ ಮತ್ತು ನಾನಾಜಿ ಪ್ರಕರಣಧ ಇತರ ಆರೋಪಿಗಳಾಗಿದ್ದಾರೆ.

Exit mobile version