ಮೊದಲ ಪ್ರಯತ್ನದಲ್ಲೇ UPSC ಗೆದ್ದ 22 ವರ್ಷದ ಚಂದ್ರಜ್ಯೋತಿ ಸಿಂಗ್: ಇವರ ಯಶಸ್ಸಿನ ಗುಟ್ಟು ಹೀಗಿದೆ

Punjab: ಪರೀಕ್ಷೆ ಎಂದ ಕೂಡಲೇ ಎಲ್ಲರೂ ಪರಿಶ್ರಮ, ಶ್ರದ್ಧೆಯಿಂದಲೇ ಓದಿರುತ್ತಾರೆ. ಹಾಗೆ (IAS Success Story – UPSC) ಪ್ರತಿ ವರ್ಷವು ಲಕ್ಷಾಂತರ ಅಭ್ಯರ್ಥಿಗಳು ಕೇಂದ್ರ ನಾಗರೀಕ

ಸೇವೆಗಳ ಹುದ್ದೆಗಳಿಗೆ ಸೇರಲು ಯುಪಿಎಸ್‌ಸಿ (UPSC) ಪರೀಕ್ಷೆ ಬರೆಯುತ್ತಾರೆ. ಆದರೆ ಪರೀಕ್ಷೆಯಲ್ಲಿ ಬರವಣಿಗೆ, ಪ್ರಶ್ನೆಗಳಿಗೆ ನೆನಪಿನ ಶಕ್ತಿ, ಉತ್ತರಿಸುವ ವೇಗ, ನಿಖರ ಉತ್ತರ ಇವೆಲ್ಲವುಗಳ

ಮೇಲೆ ಮಾತ್ರ ಯಶಸ್ಸು ಎಂಬುದು ನಿರ್ಧರಿತವಾಗುತ್ತದೆ. ಹಾಗಾಗಿ ಪ್ರತಿವರ್ಷವು ಸಹ ಸಾವಿರಾರು ಸಂಖ್ಯೆಯಲ್ಲಿ ಐಎಎಸ್‌ (IAS) ,ಐಆರ್‌ಎಸ್‌,ಐಪಿಎಸ್, ಐಎಫ್‌ಎಸ್‌ (IFS) ಆಗುವ ಕನಸನ್ನು

ನನಸು (IAS Success Story – UPSC) ಮಾಡಿಕೊಳ್ಳುತ್ತಾರೆ.

ಅದೇ ರೀತಿ ಚಂದ್ರಜ್ಯೋತಿ ಸಿಂಗ್‌ (Chandrajyothi Singh) ಅವರಿಗೆ ಕೇವಲ 22 ವರ್ಷ ವಯಸ್ಸಾಗಿದ್ದು, ಅವರು ಪದವಿ ಮುಗಿಸಿರುವ ಸಮಯವಾಗಿದೆ. ಈ ಹಂತದಲ್ಲೇ ಅವರು ಮೊದಲ

ಪ್ರಯತ್ನದಲ್ಲೇ ಯುಪಿಎಸ್‌ಸಿ ಗೆದ್ದು ಐಎಎಸ್‌ ಅಧಿಕಾರಿ ಆಗುವ ಸಾಧನೆ ಮಾಡಿದ್ದಾರೆ ಚಂದ್ರಜ್ಯೋತಿ ಸಿಂಗ್‌ ರವರು. ಇವರ ಯಶಸ್ಸಿನ ಗುಟ್ಟು ಮುಂದೆ ತಿಳಿಯೋಣ.

ಇವರ ತಂದೆ ಕರ್ನಲ್ (Karnal) ಡಾಲ್ಬರ್ ಸಿಂಗ್‌ ಆರ್ಮಿಯಲ್ಲಿ ರೇಡಿಯೋಲಾಜಿಸ್ಟ್‌ (Radiologist) ಆಗಿದ್ದು, ಅವರ ತಾಯಿ ಲೆಫ್ಟಿನಂಟ್ ಕರ್ನಲ್ ಮೀನಾ ಸಿಂಗ್ (Meena Singh). ಇಬ್ಬರು ಸಹ

ರಕ್ಷಣಾ ಇಲಾಖೆ ಸಿಬ್ಬಂದಿ ಆಗಿದ್ದು, ಚಂದ್ರಜ್ಯೋತಿ ಇವರು ಆರ್ಮಿ (Army)ಅಧಿಕಾರಿಯ ಮಗಳು. ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅಧಿಕಾರಿಯ ಮಗಳಾದ್ದರಿಂದ ಆಗಾಗ ಶಾಲೆಗಳನ್ನು ಅವರ

ಅಪ್ಪನ ವರ್ಗಾವಣೆಯಂತೆಯೇ ಬದಲಾಣೆ ಮಾಡುತಿದ್ದರು, ಆದರೂ ಸಹ ಶ್ರದ್ದೆಯಿಂದ ಓದುತಿದ್ದರು, ಚಂದ್ರಜ್ಯೋತಿ ಸಿಂಗ್ ರವರ ಅಧ್ಯಯನಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದರು.

ಚಂದ್ರಜ್ಯೋತಿ ಸಿಂಗ್ ಅವರ ತಮ್ಮ ಪ್ರೌಡ ವಿಭಾಗದ ಹತ್ತನೇ ತರಗತಿ ಶಿಕ್ಷಣವನ್ನು ಪಂಜಾಬ್ ಜಲಾಂಧರ್ ಎಪಿಜೆ ಸ್ಕೂಲ್‌ನಲ್ಲಿ (Punjab Jalander APJ School) ಪೂರ್ಣಗೊಳಿಸಿ ತದನಂತರ,

ತಮ್ಮ ಇಂಟರ್‌ಮಿಡಿಯೇಟ್‌ ವ್ಯಾಸಂಗವನ್ನು ಚಂಡೀಗಢದ ಭವನ್ ವಿದ್ಯಾಲಯಕ್ಕೆ ಸೇರಿದರು. ನಂತರ ದೆಹಲಿ ವಿಶ್ವವಿದ್ಯಾಲಯ ಅಧೀನದ ಸೆಂಟ್‌ ಸ್ಟೀಫನ್ (Saint Stephen) ಕಾಲೇಜಿನಲ್ಲಿ

ಇತಿಹಾಸ ಹಾನರ್ಸ್ ಡಿಗ್ರಿ (Degree) ಮುಗಿಸಿದರು.

2018 ರಿಂದಲೇ,ಕೇಂದ್ರ ನಾಗರೀಕ ಸೇವೆಯ ಗುರಿಯನ್ನು ಹೊಂದಿದ್ದ ಚಂದ್ರಜ್ಯೊತಿ ಅವರು ತಮ್ಮ ಸ್ನಾತಕೊತ್ತರ ಪದವಿ ಅನ್ನು ಮೊದಲ ವರ್ಷದಿಂದ ಆರಂಭಿಸಿದ್ದರು.ಮತ್ತು ಇತಿಹಾಸವನ್ನುಆಯ್ಕೆಯ

ವಿಷಯವಾಗಿ ಪರಿಗಣಿಸಿದ್ದರು. 2020 ರ ವೇಳೆಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರಿಗೆ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಿಕ್ಕಿತು.

ಪ್ರತಿದಿನವು 1-2 ಗಂಟೆಗಳ ಕಾಲ ದಿನಪತ್ರಿಕೆಗಳನ್ನು ಚಂದ್ರಜ್ಯೋತಿ ರವರು ತಮ್ಮ ಯುಪಿಎಸ್‌ಸಿ ತಯಾರಿಯ ಭಾಗವಾಗಿ ಓದುತ್ತಿದ್ದರು ಮತ್ತು ಅವರು ಸ್ವಂತ ನೋಟ್ಸ್‌ (Notes) ತಯಾರಿ ಮಾಡಿಕೊಳ್ಳುತ್ತಿದ್ದರು.

ಮತ್ತು ಪ್ರತಿ ವಾರವು ತಪ್ಪದೆ ಪತ್ರಿಕೆಗಳನ್ನು ಪುನರಾವರ್ತನೆ ಮಾಡುತ್ತಿದ್ದರು ಹಾಗೆ ಹೆಚ್ಚಾಗಿ ಅಣಕು ಪರೀಕ್ಷೆಗಳ ಮೇಲೆ ಗಮನವಿಡುತ್ತಿದ್ದರು. ತುಂಬಾ ಕಡಿಮೆ ಸಮಯ ಮತ್ತು ಲಾಂಗ್ ಟರ್ಮ್‌ (Long Term)

ಅಧ್ಯಯನದ ಸಮಯ ನಿಗದಿ ಮಾಡಿಕೊಂಡು ಓದುತ್ತಿದ್ದರು ಇದು ಅವರ ಸಂಪೂರ್ಣ ಯುಪಿಎಸ್‌ಸಿ ಅಧ್ಯಯನ ಪಯಣವಾಗಿತ್ತು.

ಇವರು ಸಿವಿಲ್‌ (Civil) ಸೇವೆಗಳ ಪರೀಕ್ಷೆಯನ್ನು ತಮ್ಮ ಮೊಟ್ಟ ಮೊದಲ ಪ್ರಯತ್ನದಲ್ಲೇ ಅಖಿಲ ಭಾರತ ಶ್ರೇಯಾಂಕ AIR-28 ನೊಂದಿಗೆ ಯಶಸ್ಸು ಗಳಿಸಿದರು ಇವರು ಈ ಪ್ರಯತ್ನಕ್ಕೆ ಯುಪಿಎಸ್‌ಸಿ ಸಾಧನೆಗೆ

ಅವರು ಓದುವ ಮಾದರಿ ಹಾಗೂ ತಂತ್ರಗಾರಿಕೆ ಸಂಪೂರ್ಣ ಯೋಜನೆ ಪ್ರಕಾರವೇ ನಡೆದಿತ್ತು ಹಾಗಾಗಿ ಅವರು ಈ ಒಂದು ಸಾಧನೆಗೆ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಯಿತು.

UPSC ಈ ರೀತಿ ಅಧ್ಯಯನ ಮಾಡಿ..!
ಚಂದ್ರಜ್ಯೋತಿ ರವರು ಪ್ರಸ್ತುತ ಇವರು ಪಂಜಾಬ್‌ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದು ಯುಪಿಎಸ್‌ಸಿ ಪರೀಕ್ಷೆ ಪಾಸ್‌ ಮಾಡಿದಾಗ ಅವರಿಗೆ ಕೇವಲ 22 ವರ್ಷ ಅಷ್ಟೆ. ಮತ್ತು ಅತಿ ಚಿಕ್ಕವಯಸ್ಸಿನಲ್ಲೇ ಈ

ಪರೀಕ್ಷೆ ಗೆದ್ದ ಅತಿ ಕಿರಿಯರು ವಯ್ಯಸ್ಸಿನವರು ಎಂಬ ಖ್ಯಾತಿಗೆ ಪಾತ್ರರಾಗಿ ಹಾಗೂ ಮೊಹಾಲಿಯ ಎಸ್‌ಡಿಎಂ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇದನ್ನು ಓದಿ: ಗೂಗಲ್ ಡಾರ್ಕ್ ರಿಪೋರ್ಟರ್ ಅನ್ನು ಬಳಸುವುದು ಹೇಗೆ? ಇಲ್ಲಿದೆ ಇದರ ಸಂಪೂರ್ಣ ಮಾಹಿತಿ

Exit mobile version