Mumbai : ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ನಡೆಯಲಿರುವ 48 ಪಂದ್ಯಗಳಿಗೆ ನಗದು ಬಹುಮಾನ ಮತ್ತು ಪ್ರೋತ್ಸಾಹ ಧನವನ್ನು ಅಂತಾರಾಷ್ಟ್ರೀ ಕ್ರಿಕೆಟ್ (ICC Prize Announcement) ಮಂಡಳಿ ಪ್ರಕಟಿಸಿದೆ.

ಅಕ್ಟೋಬರ್(October) 5 ರಿಂದ ನವೆಂಬರ್ 19ರ ವರೆಗೆ ಭಾರತದ ಸಂಪೂರ್ಣ ಆತಿಥ್ಯದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯುತ್ತಿದ್ದು, ವಿಶ್ವದ ಪ್ರಮುಖ ತಂಡಗಳು ಈ ಟೂರ್ನಿಯಲ್ಲಿ ಭಾಗಿಯಾಗಲಿವೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನೀಡಿರುವ ಮಾಹಿತಿಯ ಪ್ರಕಾರ, ವಿಶ್ವಕಪ್ ಟೂರ್ನಿಗೆ ಒಟ್ಟು 83.10 ಕೋಟಿ ಮೊತ್ತವನ್ನ ಘೋಷಿಸಿದೆ. ವಿಜೇತ ತಂಡ 33.24 ಕೋಟಿ ರೂ.ಗಳ ಬಹುಮಾನ ಮೊತ್ತವನ್ನು
ಪಡೆದರೆ, ರನ್ನರ್ ಅಪ್ ತಂಡ 16.62 ಕೋಟಿ ರೂ.ಗಳನ್ನು ಪಡೆದುಕೊಳ್ಳಲಿದೆ. ಸೆಮಿಫೈನಲ್ನಲ್ಲಿ (Semi Final) ಸೋತ ಎರಡೂ ತಂಡಗಳಿಗೆ ತಲಾ 6.64 ಕೋಟಿ ರೂಪಾಯಿಗಳು ಸಿಗಲಿದೆ.
ಇನ್ನು ಟೂರ್ನಿಯಲ್ಲಿ ಸೆಮಿಫೈನಲ್ ತಲುಪುವಲ್ಲಿ ವಿಫಲವಾಗುವ ಎಲ್ಲಾ (ICC Prize Announcement) ತಂಡಗಳಿಗೆ 83.10 ಲಕ್ಷ ರೂ.ಗಳನ್ನು ನೀಡಲಾಗುತ್ತದೆ.
ಇನ್ನು ಟೂರ್ನಿಯಲ್ಲಿ ನಡೆಯಲಿರುವ ಪ್ರತಿ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ 33.24 ಲಕ್ಷ ರೂ.ಗಳ ಪ್ರೋತ್ಸಾಹ ಧನವನ್ನು ನೀಡಲು ಅಂತಾರಾಷ್ಟ್ರೀ ಕ್ರಿಕೆಟ್ ಮಂಡಳಿ ಮುಂದಾಗಿದೆ. ವಿಶ್ವಕಪ್
ಟೂರ್ನಿಯನ್ನು ಸ್ಪರ್ಧಾತ್ಮಕವಾಗಿಸಲು ಮತ್ತು ಅಭಿಮಾನಿಗಳಿಗೆ ಮನರಂಜನೆ ನೀಡಲು ಐಸಿಸಿ (ICC) ಈ ನಿರ್ಧಾರ ತೆಗೆದುಕೊಂಡಿದೆ.

ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಭಾರತದ ವಿವಿಧ ನಗರಗಳಲ್ಲಿ ವಿಶ್ವಕಪ್ ಟೂರ್ನಿ ನಡೆಯಲಿದೆ. 45 ಲೀಗ್ ಪಂದ್ಯಗಳು ಮತ್ತು 3 ನಾಕೌಟ್ ಪಂದ್ಯಗಳು ಸೇರಿದಂತೆ ಒಟ್ಟು 48 ಪಂದ್ಯಗಳು ನಡೆಯಲಿದೆ.
ಈ ಟೂರ್ನಿಯಲ್ಲಿ ಭಾರತ, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್ (England), ಪಾಕಿಸ್ತಾನ, ಶ್ರೀಲಂಕಾ ಮತ್ತು ನೆದರ್ಲೆಂಡ್ ತಂಡಗಳು ಭಾಗಿಯಾಗಲಿವೆ.
ಇನ್ನು ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಚೆನ್ನೈ ನಲ್ಲಿರುವ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ದ ಆಡಲಿದೆ.
ಇದನ್ನು ಓದಿ: ತಿನ್ನುವ ಆಹಾರದಲ್ಲಿಯೇ ಇದೆ ಮಧುಮೇಹಕ್ಕೆ ಔಷಧಿ, ಯಾವ ಆಹಾರದಲ್ಲಿದೆ ಆ ಮೆಡಿಸಿನ್ ?