ಐಸಿಸಿ ಮಹಿಳಾ ಕ್ರಿಕೆಟ್ ಶ್ರೇಯಾಂಕ: ನಂ.1 ಸ್ಥಾನಕ್ಕೇರಿದ ಟೀಂ ಇಂಡಿಯಾ ನಾಯಕಿ ಮಿಥಾಲಿ ರಾಜ್

ಹೊಸದಿಲ್ಲಿ, ಜು. 06: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್, ಐಸಿಸಿ ಏಕದಿನ ಮಹಿಳಾ ಕ್ರಿಕೆಟ್ ಬ್ಯಾಟಿಂಗ್ ವಿಭಾಗದ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಅದ್ಭುತ ಫಾರ್ಮ್‌ನಲ್ಲಿರುವ ಭಾರತ ಮಹಿಳಾ ನಾಯಕಿ ಮಿಥಾಲಿ ರಾಜ್, 762 ರೇಟಿಂಗ್ ಪಾಯಿಂಟ್ಸ್ ಪಡೆದು ಅಗ್ರಸ್ಥಾನಕ್ಕೇರಿದ್ದಾರೆ. ಮಿಥಾಲಿ ರಾಜ್ ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ್ಲಲಿ ಭಾರತ ತಂಡದ ಪರವಾಗಿ ಶ್ರೇಷ್ಠ ಪ್ರದರ್ಶನವನ್ನು ನೀಡಿದ್ದರು.

ಇನ್ನೂ ಭಾರತ ಮಹಿಳಾ ತಂಡದ ಮತ್ತೋರ್ವ ಶ್ರೇಷ್ಠ ಆಟಗಾರ್ತಿ ಸ್ಮೃತಿ ಮಂದಾನ, 701 ರೇಟಿಂಗ್ ಪಾಯಿಂಟ್ಸ್ ಪಡೆದು 9ನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಭಾರತ ಮಹಿಳಾ ತಂಡದ ಹಿರಿಯ ಆಟಗಾರ್ತಿ ಜುಲನ್ ಗೋಸ್ವಾಮಿ 5ನೇ ಸ್ಥಾನದಲ್ಲಿದ್ದಾರೆ, ಪೂನಂ ಯಾದವ್ 9ನೇ ಸ್ಥಾನದಲ್ಲಿದ್ದಾರೆ.

ಆಲ್ರೌಂಡರ್ ಗಳ ಪಟ್ಟಿಯಲ್ಲಿ ಭಾರತ ತಂಡದ ದೀಪ್ತಿ ಶರ್ಮಾ ಮಾತ್ರ ಸ್ಥಾನ ಪಡೆದಿದ್ದು, 304 ರೇಟಿಂಗ್ ಪಾಯಿಂಟ್ಸ್ ಪಡೆದಿರುವ ದೀಪ್ತಿ ಶರ್ಮಾ, 5ನೇ ಸ್ಥಾನದಲ್ಲಿದ್ದಾರೆ.

Exit mobile version