India : ಇತೀಚೆಗಷ್ಟೇ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ (IDFCLtd merged IDFCFirst Bank) ಎಚ್‌ಡಿಎಫ್‌ಸಿ ಲಿಮಿಟೆಡ್ ವಿಲೀನಗೊಂಡಿತು ಇದೀಗ ಇದರ ಬೆನ್ನಲ್ಲೇ ಅಂಥಹದ್ದೇ ಇನ್ನೊಂದು ಬ್ಯಾಂಕ್
ಈಗ ವಿಲೀನ ಮಾಡಿಕೊಳ್ಳಲು ವೇದಿಕೆ ಸಜ್ಜಾಗಿದೆ. ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನೊಂದಿಗೆ (IDFC First Bank) ಅದರ ಮೂಲ ಸಂಸ್ಥೆ ಐಡಿಎಫ್‌ಸಿ ಲಿಮಿಟೆಡ್ (IDFC Ltd) ಅನ್ನು ವಿಲೀನಗೊಳಿಸುವ
ಯೋಜನೆಗೆ ಸೋಮವಾರ ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನ ನಿರ್ದೇಶಕರ ಮಂಡಳಿಯು (IDFCLtd merged IDFCFirst Bank) ಅನುಮೋದನೆ ನೀಡಿದೆ.

ಷೇರು ವಿನಿಮಯ ಅನುಪಾತವನ್ನು ವಿಲೀನಕ್ಕಾಗಿ ನಿರ್ಧರಿಸಲಾಗಿದ್ದು, ಐಡಿಎಫ್‌ಸಿ ಲಿಮಿಟೆಡ್‌ನ 10 ರೂ. ಮುಖಬೆಲೆಯ ಪ್ರತಿ 100 ಈಕ್ವಿಟಿ ಷೇರುಗಳಿಗೆ ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನ 10 ರೂ. ಮುಖಬೆಲೆಯ
155 ಈಕ್ವಿಟಿ ಷೇರುಗಳು (Shares) ಸಿಗಲಿವೆ. ಐಡಿಎಫ್‌ಸಿ ಷೇರುಗಳು ಶೇ. 6.29ರಷ್ಟು ಲಾಭದೊಂದಿಗೆ ಸೋಮವಾರ 109.10 ರೂ.ನಲ್ಲಿ ವಹಿವಾಟು ಕೊನೆಗೊಳಿಸಿದ್ದು, ಮಂಗಳವಾರವೂ ಕೂಡ ಗಳಿಕೆ ಹಾದಿಯಲ್ಲಿವೆ.
17,455 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಸಂಸ್ಥೆಯು ಹೊಂದಿದೆ.
ಇದನ್ನೂ ಓದಿ : ನಿವೃತ್ತಿಗೆ ಮುನ್ನ ಉದ್ಯೋಗಿಯು ಸಾವನ್ನಪ್ಪಿದರೆ ಅವರ ಇಪಿಎಫ್ ಹಣಕ್ಕೆ ನಾಮಿನಿ ಕ್ಲೈಮ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಬಿಎಸ್‌ಇಯಲ್ಲಿ (BSE) ಸೋಮವಾರ ಶೇ. 3.20ರಷ್ಟು ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಷೇರುಗಳು ಏರಿಕೆ ಕಂಡಿದ್ದು 81.94 ರೂ.ನಲ್ಲಿ ವಹಿವಾಟು ಕೊನೆಗೊಳಿಸಿವೆ. ಬ್ಯಾಂಕ್ ಸುಮಾರು 54,311 ಕೋಟಿ ರೂ. ಮಾರುಕಟ್ಟೆ
ಮೌಲ್ಯ ಹೊಂದಿರುವುದೊಂದಿಗೆ ಮಂಗಳವಾರ ಷೇರುಗಳು ಇಳಿಕೆ ಹಾದಿಯಲ್ಲಿದ್ದವು. ಪ್ರಸ್ತಾವಿತ ವಿಲೀನದ ಪರಿಣಾಮ ಬ್ಯಾಂಕ್‌ನ ಪ್ರತಿ ಷೇರಿನ ಸ್ವತಂತ್ರ ಪುಸ್ತಕ ಮೌಲ್ಯವು ಶೇಕಡಾ 4.9ರಷ್ಟು ಮಾರ್ಚ್
31, 2023ರ ಲೆಕ್ಕಪರಿಶೋಧಕ ಲೆಕ್ಕಾಚಾರದಂತೆ ಹೆಚ್ಚಾಗಲಿದೆ.
ಐಡಿಎಫ್‌ಸಿ ಎಫ್‌ಎಚ್‌ಸಿಎಲ್ (IDFC FHCL),ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಐಡಿಎಫ್‌ಸಿ ಲಿಮಿಟೆಡ್ ಗಳನ್ನು ವಿಲೀನದಿಂದ ಒಂದೇ ಘಟಕವಾಗಿ ಕ್ರೋಢೀಕರಿಸುವ ಮೂಲಕ ಕಾರ್ಪೊರೇಟ್ ರಚನೆಯನ್ನು
ಸರಳೀಕರಿಸಲು ಸಾಧ್ಯವಾಗುತ್ತದೆ. ಮತ್ತು ಮತ್ತು ಮೇಲೆ ಹೇಳಿರುವ ಘಟಕಗಳ ನಿಯಂತ್ರಕ ಅನುಸರಣೆಗಳನ್ನು ಸುಗಮಗೊಳಿಸಲು ಸಹಾಯವಾಗುತ್ತದೆ,” ಎಂಬುದಾಗಿ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಹೇಳಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ
ವಿಲೀನವು ಭಾರತೀಯ ರಿಸರ್ವ್ ಬ್ಯಾಂಕ್(Reserve Bank Of India), ಸೆಬಿ,ಷೇರು ವಿನಿಮಯ ಕೇಂದ್ರಗಳು, ಭಾರತದ ಸ್ಪರ್ಧಾತ್ಮಕ ಆಯೋಗ, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ,
ಮತ್ತು ಪಟ್ಟಿ ಮಾಡಲಾಗಿರುವ ಎರಡೂ ಸಂಸ್ಥೆಗಳ ಷೇರುದಾರರ ಹೊರತಾಗಿ ಇತರ ಎಲ್ಲಾ ಶಾಸನಬದ್ಧ ಮತ್ತು ನಿಯಂತ್ರಕ ಪ್ರಾಧಿಕಾರಗಳ ಅನುಮೋದನೆಗೆ ಇವುಗಳು ಒಳಪಟ್ಟಿರುತ್ತದೆ
ಎಂಬುದಾಗಿ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಹೇಳಿದೆ.

ಐಡಿಎಫ್‌ಸಿ ಲಿಮಿಟೆಡ್ ಸುಮಾರು ಶೇ. 40ರಷ್ಟು ಪಾಲನ್ನು ಐಡಿಎಫ್‌ಸಿ ಫೈನಾನ್ಶಿಯಲ್ ಹೋಲ್ಡಿಂಗ್ (IDFC Financial Holding) ಮೂಲಕ ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನಲ್ಲಿ ಹೊಂದಿದೆ.
ಶೇ. 100ರಷ್ಟು ಐಡಿಎಫ್‌ಸಿ ಲಿಮಿಟೆಡ್‌ನ ಒಡೆತನ ಸಾರ್ವಜನಿಕರದ್ದಾಗಿದೆ. ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಒಟ್ಟು 2.4 ಲಕ್ಷ ಕೋಟಿ ರೂಪಾಯಿ ಆಸ್ತಿಯನ್ನು ಮಾರ್ಚ್ ಅಂತ್ಯದ ವೇಳೆಗೆ ಹೊಂದಿದ್ದು
ಒಟ್ಟು 27,194.51 ಕೋಟಿ ರೂಪಾಯಿ ವಹಿವಾಟು ನಡೆಸಿದೆ. ಬ್ಯಾಂಕ್ 2,437.13 ಕೋಟಿ ರೂ. ನಿವ್ವಳ ಲಾಭವನ್ನೂ 2023ನೇ ಆರ್ಥಿಕ ವರ್ಷದಲ್ಲಿ ಗಳಿಸಿದೆ. ಒಟ್ಟು 9,570.64 ಕೋಟಿ
ರೂ. ಆಸ್ತಿಯನ್ನು ಐಡಿಎಫ್‌ಸಿ ಲಿ. ಹೊಂದಿದ್ದು 2,076 ಕೋಟಿ ರೂ. ವಹಿವಾಟು ನಡೆಸಿದೆ.
ರಶ್ಮಿತಾ ಅನೀಶ್