ದೆಹಲಿಯಲ್ಲಿ, ಪ್ರತಿ ಕೋವಿಡ್ ಸೋಂಕಿತ ವ್ಯಕ್ತಿಯು ಇತರ ಇಬ್ಬರಿಗೆ ಸೋಂಕು ಹರಡಿಸುತ್ತಿದ್ದಾರೆ : IIT ಮದ್ರಾಸ್ ಅಧ್ಯಯನ!

newdelhi

ಐಐಟಿ-ಮದ್ರಾಸ್‌ನ(IIT Madras) ವಿಶ್ಲೇಷಣೆಯ ಅನುಸಾರ, ಕೋವಿಡ್ -19ರ(Covid 19) ಹರಡುವಿಕೆಯನ್ನು ಸೂಚಿಸುವ ದೆಹಲಿಯ(NewDelhi) ಕೋವಿಡ್ ಮೌಲ್ಯವು ಈ ವಾರ 2.1ಕ್ಕೆ ದಾಖಲಾಗಿದೆ. ಇದು ಪ್ರತಿ ಸೋಂಕಿತ ವ್ಯಕ್ತಿಯು ರಾಷ್ಟ್ರ ರಾಜಧಾನಿಯಲ್ಲಿ ಇತರ ಇಬ್ಬರಿಗೆ ಎಂಬಂತೆ ಸೋಂಕು ಹರಡಿಸುತ್ತಿದ್ದಾರೆ ಎಂದು ಸೂಚಿಸುತ್ತದೆ.

ಕಂಪ್ಯೂಟೇಶನಲ್ ಮಾಡೆಲಿಂಗ್‌ನ ಪ್ರಾಥಮಿಕ ವಿಶ್ಲೇಷಣೆಯನ್ನು ಐಐಟಿ-ಮದ್ರಾಸ್‌ನ ಗಣಿತಶಾಸ್ತ್ರ ಮತ್ತು ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಕಂಪ್ಯೂಟೇಶನಲ್ ಮ್ಯಾಥಮ್ಯಾಟಿಕ್ಸ್ ಮತ್ತು ಡಾಟಾ ಸೈನ್ಸ್‌ನಿಂದ ಪ್ರೊ.ನೀಲೇಶ್ ಎಸ್ ಉಪಾಧ್ಯೆ ಮತ್ತು ಪ್ರೊ.ಎಸ್ ಸುಂದರ್ ನೇತೃತ್ವ ವಹಿಸಿದ್ದಾರೆ. ಇದನ್ನು ಸುದ್ದಿಪತ್ರಿಕೆ ಜೊತೆ ಹಂಚಿಕೊಳ್ಳಲಾಗಿದೆ ಮತ್ತು ಆ ವರದಿ ಪ್ರಕಾರ, ಈ ವಾರ ದೆಹಲಿಯ ಆರ್-ಮೌಲ್ಯವು 2.1 ನಲ್ಲಿ ದಾಖಲಾಗಿದೆ. ಪ್ರಸ್ತುತ ಭಾರತದ ಆರ್-ಮೌಲ್ಯವು 1.3 ರಷ್ಟಿದೆ ಎಂದು ವಿಶ್ಲೇಷಣೆಯು ಕಂಡುಹಿಡಿದಿದೆ.

ಇದು ದೆಹಲಿಯಲ್ಲಿ ಕೋವಿಡ್ -19ರ ನಾಲ್ಕನೇ ಅಲೆ ಆರಂಭವಾಗಿದೆ ಎಂದು ಊಹಿಸಬಹುದೇ ಎಂದು ಕೇಳಿದಾಗ, ಐಐಟಿ-ಮದ್ರಾಸ್‌ನ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜಯಂತ್ ಝಾ, ಇದನ್ನು ನಾಲ್ಕನೇ ಅಲೆ ಎಂದು ಈಗಲೇ ಹೇಳುವುದು ತಪ್ಪಾಗುತ್ತದೆ ಎಂದು ಹೇಳಿದರು. “ಪ್ರತಿಯೊಬ್ಬ ವ್ಯಕ್ತಿಯು ಇತರ ಇಬ್ಬರ ಮೇಲೆ ಪರಿಣಾಮ ಬೀರುತ್ತಿದ್ದಾರೆ ಎಂದು ನಾವು ಖಚಿತವಾಗಿ ಹೇಳಬಹುದು. ಆದರೆ ಇದರ ಪರಿಣಾಮ ಹೇಗೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.

ಜನವರಿಯಲ್ಲಿ ಕೋವಿಡ್ ಸೊಂಕು ಕೊಂಚ ಏರಿಕೆ ಕಂಡಿತು, ಸದ್ಯ ದೆಹಲಿಯಲ್ಲಿ ವ್ಯಾಪಕವಾಗಿ ಹರಡುತ್ತಿದೆ. ದೆಹಲಿ ಸೇರಿದಂತೆ ಇತರ ಮೆಟ್ರೋ ನಗರಗಳಾದ ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ ಎಂದು ಝಾ ಮಾಹಿತಿ ನೀಡಿದ್ದಾರೆ. ನವದೆಹಲಿಯಲ್ಲಿ ಇಂದು ಕೂಡ 2000ಕ್ಕೂ ಹೆಚ್ಚು ಕೋವಿಡ್-19 ಪ್ರಕರಣಗಳು ದಾಖಲಾಗಿದೆ.

ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ನಗರದಲ್ಲಿ ಶುಕ್ರವಾರ 1,042 ಹೊಸ ಕೋವಿಡ್ ಪ್ರಕರಣಗಳು 4.64 ಶೇಕಡವನ್ನು ತಲುಪಿದೆ.

Exit mobile version