Hassan: ಹಾಸನ (illegal activities in jail) ಜೈಲಿನಲ್ಲಿ ಖೈದಿಗಳ ತಲೆಹರಟೆ ಪದೇಪದೇ ಬಯಲಾಗುತ್ತಿದ್ದರೂ ಕಡಿವಾಣ ಮಾತ್ರ ಬೀಳುತ್ತಿಲ್ಲ. ಎಂಟು ತಿಂಗಳ ಹಿಂದೆ ಪೊಲೀಸ್ ರೈಡ್
ಮಾಡಿದಾಗ ಗಾಂಜಾ ಪತ್ತೆಯಾಗಿತ್ತು. ಇದೀಗ ಮತ್ತೊಮ್ಮೆ ರೈಡ್ (Ride) ಮಾಡಿದಾಗಲೂ ಖೈದಿಗಳ ಬಳಿಯಲ್ಲಿ ಆಂಡ್ರಾಯ್ಡ್ ಫೋನ್‌ಗಳು, ಮಾಂಸದೂಟ, ಗಾಂಜಾ ಪತ್ತೆಯಾಗಿದೆ.
ಅಲ್ಲದೆ ಕಾರಾಗೃಹದ ಸಾಮರ್ಥ್ಯಕ್ಕಿಂತ ಹೆಚ್ಚಿನ (illegal activities in jail) ಖೈದಿಗಳು ಜೈಲಲ್ಲಿದ್ದಾರೆ.

ಬ್ರಿಟಿಷರ ಕಾಲದ ಜಿಲ್ಲಾ ಉಪಕಾರಾಗೃಹದಲ್ಲಿ ಆಳಕ್ಕೆ ಇಳಿದಷ್ಟು ಗಾಂಜಾದ ಅಮಲು ನೆತ್ತಿಗೇರುತ್ತಿದೆ. ಖೈದಿಗಳ ಹತ್ತಿರ ಆಂಡ್ರಾಯ್ಡ್ ಮೊಬೈಲ್ ಫೋನ್ (Android Mobile Phone),,
ಹೊರಗಿನಿಂದ ಬರುವ ಮಾಂಸದೂಟ ಎಲ್ಲವೂ ದೊರಕುತ್ತಿದ್ದರೆ ಮೋಜಿನ ಜೀವನಕ್ಕೆ ಇನ್ನೇನು ಬೇಕು ಅನ್ನುವಂತಿದೆ. ಸುಮಾರು 144 ವರ್ಷದ ಇತಿಹಾಸ ಹೊಂದಿರುವ ಈ ಕಾರಾಗೃಹವು ಹಾಸನ
ನಗರದ ಹೃದಯ ಭಾಗದಲ್ಲಿದ್ದು, ಕಾಂಪೌಂಡ್‌ಗೆ ಅಣತಿ ದೂರದಲ್ಲಿ ಶ್ರೀನಗರ (Shrinagar) ಕೊಳಚೆ ಪ್ರದೇಶ, ವರ್ಕ್ಶಾಪ್ (Workshop) ಹಾಗೂ ವಸತಿ, ವಾಣಿಜ್ಯ ಪ್ರದೇಶವಿದ್ದು, ಆ ಭಾಗದಿಂದ
ಗಾಂಜಾ ಪೊಟ್ಟಣ ಜೈಲಿನ ಒಳಭಾಗಕ್ಕೆ ತೂರಿಬರುತ್ತದೆ ಎಂಬ ಸಂಗತಿಯನ್ನು ಜೈಲಿನ (Jail) ಅಧಿಕಾರಿಗಳೇ ಹಿಂದೆ ಹೇಳಿದ್ದಾರೆ.
ಗಾಂಜಾ ಪೊಟ್ಟಣ ಸಿಬ್ಬಂದಿ ಕೈಗೆ ಸಿಕ್ಕರೆ ಇನ್ನೊಂದಷ್ಟು ಖೈದಿಗಳ ಪಾಲಾಗುತ್ತಿದೆ. ಇದನ್ನು ತಡೆಯಲು ನಡೆಯುತ್ತಿರುವ ಪ್ರಯತ್ನದಲ್ಲಿ ಸಫಲತೆ ಕಂಡಿಲ್ಲ. ಇನ್ನು ಮೊಬೈಲ್ ಬಳಕೆ, ಪ್ರಭಾವಿ
ಖೈದಿಗಳಿಗೆ ಹೋಟೆಲ್‌ನ (Hotel) ಮಾಂಸದೂಟ ಸರಬರಾಜು ಆಗುತ್ತದೆ ಎಂಬ ದೂರು ಕೂಡ ಇದೆ. 1879ರಲ್ಲಿ ನಿರ್ಮಾಣವಾದ ಕಾರಾಗೃಹ ಸುರಕ್ಷಿತವಾಗಿಲ್ಲ. ಅಲ್ಲದೆ ಅಗತ್ಯಕ್ಕಿಂತ ಹೆಚ್ಚಿನ
ವಿಚಾರಣಾಧೀನ ಖೈದಿಗಳನ್ನು ಅನಿವಾರ್ಯವಾಗಿ ಇರಿಸಿಕೊಂಡಿರುವುದು ಸಮಸ್ಯೆಗಳಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಇನ್ನು ಈ ಕಾರಾಗೃಹದ ಸಾಮರ್ಥ್ಯ 210 ಪುರುಷ ಹಾಗೂ 19 ಮಹಿಳಾ ಖೈದಿಗಳಿಗಷ್ಟೇ ಸ್ಥಳಾವಕಾಶ ಕಲ್ಪಿಸಲು ಸಾಧ್ಯವಿದ್ದರೂ ಪ್ರಸ್ತುತ 353 ಪುರುಷ, 14 ಮಹಿಳಾ ಖೈದಿಗಳನ್ನು ಇರಿಸಲಾಗಿದ್ದು,
ಹೆಚ್ಚಿನ ಸಂಖ್ಯೆಯ ವಿಚಾರಣಾಧೀನ ಖೈದಿಗಳ ಚಲನ-ವಲನದ ಮೇಲೆ ಹದ್ದಿನ ಕಣ್ಣಿಟ್ಟರೂ, ಕೆಲವೊಬ್ಬರಿಗೆ ಅಗತ್ಯ ಸೌಲಭ್ಯಗಳೆಲ್ಲ ಜೈಲಿನಲ್ಲೇ (Jail) ದೊರೆಯುತ್ತದೆ ಎಂಬ ಅಚ್ಚರಿ ಸಂಗತಿಯೊಂದಿಗೆ
ಭದ್ರತಾ ವ್ಯವಸ್ಥೆಯ ಮೇಲೆ ಸಂಶಯದ ದೃಷ್ಟಿಇಡುವಂತಾಗಿದೆ.

ಜಿಲ್ಲೆಯ ಈ ಕಾರಾಗೃಹ ಎಂದರೆ ಬೇಲೂರು (Beluru)-ಆಲೂರು (Aluru) ಭಾಗದ ಆರೋಪಿಗಳಿಗೆ ಹಾಗೂ ಪೊಲೀಸರಿಗೆ ಅಚ್ಚುಮೆಚ್ಚು ಎನ್ನಲಾಗುತ್ತಿದೆ. ಹಾಸನದ ಕಾರಾಗೃಹದ
ಒತ್ತಡ ಕಡಿಮೆ ಮಾಡಲು ಸಕಲೇಶಪುರದಲ್ಲಿ(Sakaleshpura) 40 ಜನರನ್ನು ಇರಿಸುವ ಸಾಮರ್ಥ್ಯದ ಉಪ ಕಾರಾಗೃಹ ಇದ್ದರೂ ಪೊಲೀಸರು ಬಂಧಿತ ಆರೋಪಿಗಳನ್ನು ನೇರವಾಗಿ ಹಾಸನಕ್ಕೆ
ಕರೆತಂದು ಇಲ್ಲೇ ಇಟ್ಟುಕೊಳ್ಳಿ ಎನ್ನುತ್ತಾರೆ ಎಂದರೆ ಈ ಜೈಲಿಗೆ ಎಷ್ಟರಮಟ್ಟಿಗೆ ಡಿಮ್ಯಾಂಡ್ (Demand) ಇದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಇಲ್ಲಿಗೆ ಶಿಫಾರಸು ಮಾಡುತ್ತಾರೆ ಎಂಬುದು
ಮತ್ತೊಂದು ಅಚ್ಚರಿಯ ಸಂಗತಿ ಎಂದು ಜನರು ಹೇಳುತ್ತಾರೆ.
2 ಬಾರಿ ದಾಳಿ
ಜನವರಿಯಲ್ಲಿ ಕಾರಾಗೃಹದ ಮೇಲೆ ಎಸ್.ಪಿ ಹರಿರಾಂ ಶಂಕರ್ (S.P Hariram Shankar) ಸೂಚನೆ ಅನ್ವಯ ಎಎಸ್‌ಪಿ ತಮ್ಮಯ್ಯ (ASP Tammaiah) ನೇತೃತ್ವದ 60 ಮಂದಿ ಪೊಲೀಸರ
ತಂಡ ದಾಳಿ ಮಾಡಿ ಅಲ್ಲಿಂದ ಗಾಂಜಾ, ಮೊಬೈಲ್ (Mobile) ವಶಪಡಿಸಿಕೊಂಡು ಎಫ್‌ಐಆರ್ (FIR) ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಬೆಳವಣಿಗೆಗಳೇ ಜೈಲಿನಲ್ಲಿ
ಏನೆಲ್ಲಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬುದನ್ನು ಸಾಕ್ಷೀಕರಿಸಿತ್ತು. ಇದಾದ ಎಂಟು ತಿಂಗಳಲ್ಲೇ ಮತ್ತೊಮ್ಮೆ ದಾಳಿ ಮಾಡಿದಾಗ ಅಕ್ರಮ ಪತ್ತೆಹಚ್ಚಲಾಗಿದ್ದು, ಇದು ಆತಂಕಕಾರಿ ಸಂಗತಿಯಾಗಿದೆ.
ಹಾಸನ (Hassan) ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ದೇವರಾಜೇಗೌಡ (Devarajegowda) ಅವರು ಹಾಸನ ಜೈಲ್ (Hassan Jail) ಎಂಬುದು ಆರೋಪಿಗಳ ಪಾಲಿಗೆ ಸುಖದ ಸುಪ್ಪತ್ತಿಗೆ
ಆಗಿದೆ. ಹೊರ ಪ್ರಪಂಚದ ಸಂಪರ್ಕ ಸಾಧಿಸಿ ಅಪರಾಧಕೃತ್ಯ ಎಸಗಿ ಪಾರಾಗುತ್ತಿದ್ದಾರೆ. ಗಾಂಜಾ, ಮದ್ಯ, ಮಾಂಸ ಸರಬರಾಜು ಆಗುತ್ತಿದೆ. ಈ ಸಂಬಂಧ ಜೈಲ್ (Jail) ಅಧಿಕಾರಿಗಳ
ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ.
ಭವ್ಯಶ್ರೀ ಆರ್.ಜೆ