ಬಿಹಾರದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ; 10 ಮಂದಿ ಸಾವು!

blast

ಅಕ್ರಮವಾಗಿ ನಡೆಸುತ್ತಿದ್ದ ಪಟಾಕಿ ಕಾರ್ಖಾನೆ ಸ್ಪೋಟಗೊಂಡ ಪರಿಣಾಮ 10 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಬಿಹಾರ ರಾಜ್ಯದಲ್ಲಿ ಕೆಲ ನಿವಾಸಿಗಳು ಅಕ್ರಮ ಪಟಾಕಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು ಎಂದು ಅಧಿಕಾರಿಯೊಬ್ಬರು ಶುಕ್ರವಾರ ಸ್ಥಳೀಯ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ನಗರದ ಕಜ್ಬಲಿಚಕ್ ಪ್ರದೇಶದ ಮಹೇಂದ್ರ ಮಂಡಲ್ ಅವರ ಮನೆಯೊಳಗೆ ಮುಂಜಾನೆ ಸ್ಫೋಟ ಸಂಭವಿಸಿದೆ ಎಂದು ಭಾಗಲ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಬ್ರತ್ ಕುಮಾರ್ ಸೇನ್ ಹೇಳಿದ್ದಾರೆ.

ಅಕ್ರಮವಾಗಿ ಪಟಾಕಿ ಕಾರ್ಖಾನೆ ನಡೆಸುತ್ತಿದ್ದರು ಎಂಬುದು ಹೊರಬಿದ್ದ ಮಾಹಿತಿ ಪಟಾಕಿ ಕಾರ್ಖಾನೆ ನಡೆಸಬೇಡಿ ಎಂದು ಸ್ಥಳೀಯರು ಮನವಿ ಮಾಡಿದರು ಕೂಡ ಕೇಳದೆ ಅಕ್ರಮವಾಗಿ ನಡೆಸುತ್ತಿದ್ದರು ಎನ್ನಲಾಗಿದೆ. ಆದರೆ ಇಂದು ಸ್ಫೋಟದ ತೀವ್ರ ಪ್ರಭಾವದಿಂದ ಮಂಡಲ್ ಅವರ ಮನೆ ಮಾತ್ರವಲ್ಲದೆ, ಅಕ್ಕಪಕ್ಕದ ಎರಡು ಕಟ್ಟಡಗಳು ಭಸ್ಮವಾಗಿದೆ. ಸ್ಪೋಟದ ಶಬ್ದ ದೂರದವರೆಗೆ ಪ್ರಯಾಣಿಸಿದೆ ಎಂದು ಡಿಎಂ ಹೇಳಿದರು. ಅವಶೇಷಗಳನ್ನು ತೆರವುಗೊಳಿಸಲು ಸಾಕಷ್ಟು ಸಮಯ ಬೇಕಾಯಿತು ಎಂದು ಹೇಳಿದರು.

ಬಾಂಬ್ ನಿಷ್ಕ್ರಿಯ ದಳ ಮತ್ತು ವಿಧಿವಿಜ್ಞಾನ ತಜ್ಞರ ತಂಡಗಳು ಸ್ಫೋಟಕ್ಕೆ ಕಾರಣವಾದ ವಸ್ತುಗಳ ಪ್ರಕಾರವನ್ನು ಖಚಿತಪಡಿಸಿಕೊಳ್ಳಲು ಮಾದರಿಗಳನ್ನು ಸಂಗ್ರಹಿಸುತ್ತಿವೆ ಎಂದು ಹೇಳಿದರು. ಇಲ್ಲಿಯವರೆಗೆ ಪತ್ತೆಯಾದ 10 ಶವಗಳು ಯಾರದ್ದು ಮತ್ತು ಯಾರ ಕುಟುಂಬಕ್ಕೆ ಸೇರಿದ್ದು ಎಂಬುದನ್ನು ಗುರುತಿಸುವುದೇ ಕಷ್ಟಕರವಾಗಿದೆ. ಬದುಕುಳಿದ ಒಂಬತ್ತು ಮಂದಿಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಸೇನ್ ಹೇಳಿದರು. ಮಂಡಲ್ ಈ ಹಿಂದೆ ಅಕ್ರಮ ಪಟಾಕಿ ತಯಾರಿಕೆಯಲ್ಲಿ ತೊಡಗಿದ್ದರು ಮತ್ತು 2008 ರಲ್ಲಿ ಅವರ ಮನೆಯಲ್ಲಿ ಇದೇ ರೀತಿಯ ಸ್ಫೋಟ ಸಂಭವಿಸಿ ಅವರ ಪತ್ನಿ ಸೇರಿದಂತೆ ಮೂವರು ಸಾವನ್ನಪ್ಪಿದ್ದರು ಅವರಿಗೆ ಬುದ್ದಿ ಬಂದಿಲ್ಲ ಎಂದು ಡಿಎಂ ಹೇಳಿದರು.

Exit mobile version