ಅಕ್ರಮ ಗೋ ಸಾಗಿಸುತ್ತಿದ್ದ ಕಂಟೈನರ್ ಪಲ್ಟಿ: 17 ಗೋವುಗಳ ಸಾವು, 40 ಹಸುಗಳು ಕರುಗಳು ಪಾರು

Hassan : ಅಕ್ರಮವಾಗಿ ಗೋ ಸಾಗಿಸುತ್ತಿದ್ದ ವಾಹನವೊಂದು ಪೊಲೀಸರ ಕೈಗೆ ಸಿಗದಂತೆ ತಪ್ಪಿಸಿಕೊಳ್ಳಲು ಅಡ್ಡಾದಿಡ್ಡಿಯಾಗಿ ಅಜಾಗರೂಕತೆಯಿಂದ ಚಾಲನೆ ಮಾಡಲು ಹೋಗಿ ಪಲ್ಟಿಯಾದ ಘಟನೆ (illegal transporting of cattle) ಚನ್ನರಾಯಪಟ್ಟಣದ

(Channarayapatna) ಹಿರಿಸಾವೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಈ ಘಟನೆಯ್ಲಿ 17ಕ್ಕೂ ಹೆಚ್ಚು ಗೋವುಗಳು ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಹಸು ಹಾಗೂ ಕರುಗಳನ್ನು ರಕ್ಷಿಸಲಾಗಿದೆ.


ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಬಳಿ ತಡರಾತ್ರಿ ಕಂಟೈನರ್‌ನಲ್ಲಿ (Container) ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದರು. ಇವರು ಹೊಳೆನರಸೀಪುರದಿಂದ (Holenarasipur) ಅಕ್ರಮವಾಗಿ ಗೋವುಗಳನ್ನು ಸಾಗಿಸಿ,

ಬೆಂಗಳೂರಿನತ್ತ ಬರುತ್ತಿದ್ದರು. ಅಕ್ರಮ ಗೋ ಸಾಗಾಟದ ಬಗ್ಗೆ ಪಕ್ಕಾ ಮಾಹಿತಿ ಪಡೆದ ಪೊಲೀಸರು ವಾಹನವನ್ನು ಅಡ್ಡಗಟ್ಟಲು ಯತ್ನಿಸಿದರು. ಆದರೆ, ಚಾಲಕ ವಾಹನ ನಿಲ್ಲಿಸದೆ ಸಿಕ್ಕಿ ಬೀಳುವುದನ್ನು ತಪ್ಪಿಸಲು ಯತ್ನಿಸಿದ್ದಾನೆ.

ಪೊಲೀಸರು ವಾಹನವನ್ನು ಹಿಂಬಾಲಿಸುತ್ತಿದ್ದಂತೆ, ಬ್ಯಾಟರಹಳ್ಳಿ(Byadrahalli) ಗ್ರಾಮದ ಬಳಿ ವೇಗವಾಗಿ ವಾಹನ ಚಲಾಯಿಸಿದ. ಆಗ ದೊಡ್ಡ ಗುಂಡಿಯನ್ನು ಗಮನಿಸದೆ ವಾಹನವನ್ನು ಅದರ ಮೇಲೆ ಓಡಿಸಿದ್ದಾನೆ.

ಪರಿಣಾಮವಾಗಿ, ವಾಹನ ಸಮತೋಲನವನ್ನು ಕಳೆದುಕೊಂಡು, ಮನೆಯೊಂದರ ಕಾಂಪೌಂಡ್‌ಗೆ ಬಳಿ (illegal transporting of cattle) ಪಲ್ಟಿಯಾಯಿತು.

ಇದನ್ನು ಓದಿ: ರಾಯಚೂರಲ್ಲಿ ಹೆಚ್ಚಾದ,ಶಿವಮೊಗ್ಗದಲ್ಲಿ ಇಳಿಕೆಯಾದ,ಪೆಟ್ರೋಲ್‌, ಡೀಸೆಲ್‌ ಬೆಲೆ : ಇಂದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ವಿವರ ಹೀಗಿದೆ ನೋಡಿ..

ವಾಹನದಲ್ಲಿದ 40 ಹಸುಗಳು, ಕರುಗಳು ಮತ್ತು ಎಮ್ಮೆಗಳನ್ನು ಬಿಟ್ಟು ವಾಹನದ ಚಾಲಕ ಮತ್ತು ನಿರ್ವಾಹಕರು ಪರಾರಿಯಾದ್ರು ದುರಾದೃಷ್ಟವಶಾತ್, ಈ ಅಪಘಾತದಲ್ಲಿ 17 ಗೋವುಗಳು ಸಾವನ್ನಪ್ಪಿವೆ.

ಬದುಕಿಳಿದ ಹಸುಗಳನ್ನು ಪೊಲೀಸರು ಯಶಸ್ವಿಯಾಗಿ ರಕ್ಷಿಸಿದ್ದು, ಅವುಗಳನ್ನು ಕಡೂರಿನ (Kadur) ಗೋಶಾಲೆಗೆ ವರ್ಗಾಯಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ (Hariram Shankar) ತಿಳಿಸಿದ್ದಾರೆ.

ಮೂವರು ವ್ಯಕ್ತಿಗಳು ಈ ಅಪರಾಧದ ಆರೋಪಿಗಳಾಗಿದ್ದು, ಅವರ ವಿರುದ್ಧ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಪೋಲಿಸ್ ಇಲಾಖೆ ಆಗಾಗ ಇಂತಹ ಜಾಲ ಬೇಧಿಸಿ ಪ್ರಕರಣ ದಾಖಲಿಸುತ್ತಿದೆ. ಆದ್ರೂ ಇಂಥಾ ಅಕ್ರಮ ಗೋ ಸಾಗಾಟ ದಂಧೆ ನಿರಂತರವಾಗಿ ನಡೆಯುತ್ತಲೇ ಇದೆ.

ಇದರಲ್ಲಿ ಹಿಂದಿನ ಪ್ರಕರಣಗಳಲ್ಲಿ ಶಾಮಿಲಾಗಿರುವ ಕೆಲವರು,ಮತ್ತು ಇಲ್ಲಿಯವರೆಗೂ ಪ್ರಕರಣದಲ್ಲಿ ಸಿಲುಕಿಕೊಳ್ಳದವರೂ ಸಹ ಶಾಮೀಲಾಗುತ್ತಿದ್ದಾರೆ.


ಮಳೆಗಾಲ ಆರಂಭವಾದ ಮೇಲೆ ಗೋರಕ್ಷಕರು, ಸಂಬಂಧಿತ ಇಲಾಖೆಗಳು ಊರಿನಲ್ಲಿಯೇ ಆಗಲಿ ಹೊರಗಡೆಯೇ ಆಗಲಿ ಗೋ ಕಳ್ಳರ ಮೇಲೆ ಮೇಲೆ ನಿಗಾ ಇಡಲು ಆಗುವುದಿಲ್ಲ ಅಥವಾ ವಾಹನ ತಪಾಸಣೆ ಮಾಡಲು ಕೂಡ ಕಷ್ಟ ಸಾಧ್ಯವಾಗುತ್ತದೆ,

ಇಂಥಾ ಸಂದರ್ಭಗಳು ಗೋ ಕಳ್ಳರ ಪಾಲಿಗೆ ಹಬ್ಬದೂಟದಂತಾಗಿದೆ. ಅದರಲ್ಲೂ ಕೆಲವರಂತೂ ಅಧಿಕಾರಿಗಳಿಗೆ ಅಥವಾ ಸಿಬ್ಬಂದಿಗಳಿಗೆ ಲಂಚ ನೀಡಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡು ಅವರ ಕರಾಮತ್ತು ತೋರಿಸುತ್ತಾರೆ

ಚಿಕ್ಕ ಕರುಗಳೂ ಸಹ ಕಟುಕರ ಪಾಲಾಗುತ್ತಿರುವುದು ಕೆಲವು ಕಡೆ ನಡೆಯುತ್ತಿವೆ.ಸಂಬಂಧಿತ ಇಲಾಖೆಗಳು ಮತ್ತು ಪೊಲೀಸರು ಈಗಲಾದರೂ ಎಚ್ಚೆತ್ತು ಗೋ ಕಳ್ಳರನ್ನು ಹೆಡೆಮುರಿ ಕಟ್ಟಿ, ಗೋ ರಕ್ಷಣೆಗೆ ಮುಂದಾಗಬೇಕೆಂದು ಗೋ ಪ್ರೇಮಿಗಳ ಹಾಗೂ ಸಾರ್ವಜನಿಕರ ಆಗ್ರಹವಾಗಿದೆ.

ರಶ್ಮಿತಾ ಅನೀಶ್

Exit mobile version