ರಾಜ್ಯದಲ್ಲಿ ಇನ್ನು ಐದು ದಿನ ಮಳೆಯಾಗುವ ಸಾದ್ಯತೆ: ಕೆಲವೆಡೆ ಯೆಲ್ಲೋ ಅಲರ್ಟ್‌ !

Bengaluru : ಹಲವು ದಿನಗಳಿಂದ ಬಿಸಿಲ ಹೊಡೆತಕ್ಕೆ ಕಂಗಾಲಾಗಿದ್ದ ಜನರಿಗೆ ಮಳೆ ಸ್ವಲ್ಪ ಸಮಾಧಾನ ನೀಡಿದೆ, ರಾಜ್ಯ ಹಲವೆಡೆ ಉತ್ತಮ ಮಳೆಯಾಗಿದ್ದು ಕೆಲವೆಡೆ ಯೆಲ್ಲೋ ಅಲರ್ಟ್ (Yellow alert) ಕೂಡ ನೀಡಲಾಗಿದೆ. ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ (IMD Issues Yellow Alert) ಇದೀಗಾಗಲೇ ಮಳೆ ಸುರಿದಿದ್ದು , ಸೆಖೆಯಿಂದ ಜನ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗುವ ಸಾಧ್ಯತೆ!

ಏ.27 ರಿಂದ ಮೇ 1 ರವರೆಗೆ ಕರಾವಳಿಯ ಉತ್ತರ ಕನ್ನಡ (Uttara Kannada), ಉಡುಪಿ ಮತ್ತು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ

ಮಳೆಯಾಗಲಿದೆ. ಏ.27, ಏ. 28 ಮತ್ತು ಮೇ 1 ರಂದು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು,

ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಿಟ್ಟುಸಿರು ಬಿಟ್ಟ ಕರಾವಳಿ ಜನ

ಬಿಸಿಲ ಬೇಗೆಗೆ ಬಳಲಿದ್ದ ಕರಾವಳಿಯಂತು ಮಳೆಯ ತಂಪಿಗೆ ಜನ ಕುಷ್ ಆಗಿದ್ದಾರೆ, ಸುಳ್ಯದ ಹಲವೆಡೆ ಭರ್ಜರಿ

ಮಳೆಯಾಗಿದ್ದು, ಉಪ್ಪಿನಂಗಡಿ , ಬೆಳ್ಳಾರೆ ,ಕಡಬದಲ್ಲಿ ಸಾಧಾರಣ ಮಳೆಯಾಗಿದೆ.

ಎಲ್ಲೆಡೆ ಮಳೆ ಇಲ್ಲದೆ ನದಿ ನೀರು ಬತ್ತಿ ಹೋಗಿತ್ತು, ಮಳೆಯಿಂದಾಗಿ ಸ್ವಲ್ಪ ಮಟ್ಟಿಗೆ ಇಳೆ (IMD Issues Yellow Alert) ತಂಪಾಗಿ, ನೀರಿನ ತತ್ವಾರ ಕಡಿಮೆ ಆಗಿದೆ .

ಇದನ್ನೂ ಓದಿ : https://vijayatimes.com/urfijaved-fight-with-manager/

ನೆಲಕ್ಕುರುಳಿದ ಮರ ,ವಿದ್ಯುತ್ ಕಡಿತ

ಹಲವೆಡೆ ಭಾರಿ ಮಳೆಯಿಂದಾಗಿ ಮರಗಳು ನೆಲಕ್ಕುರುಳಿವೆ,ಮರ ಬಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಇದರಿಂದ ಹಲವೆಡೆ ವಿದ್ಯುತ್ ಕಡಿತಗೊಳಿಸಲಾಗಿದೆ

ಮಲೆನಾಡಿನಲ್ಲಿ ಉತ್ತಮ ಮಳೆ

ಮಲೆನಾಡಿನಲ್ಲಿ ಕೂಡ ಉತ್ತಮ ಮಳೆಯಾಗಿದ್ದು ,ಗುಡುಗು ಸಿಡಿಲಿನಿಂದ ಕೂಡಿದ ಅನಿರೀಕ್ಷಿತ ಮಳೆಯಿಂದಾಗಿ ಬೀದಿ ಬದಿಯ ವ್ಯಾಪಾರಿಗಳು ಪರದಾಡುವಂತೆ ಆಗಿದೆ.

ಅಲ್ಪ ಸಮಯ ಜನ ಪರದಾಡುವ ಸ್ಥಿತಿ ಉಂಟಾಗಿದೆ. ಕಡಂಗ, ಮೂರ್ನಾಡು, ಮಡಿಕೇರಿ (Madikeri) ಕಾಲೇಜು ರೋಡ್ ಇನ್ನಿತರ ಕಡೆಗಳಲ್ಲಿ ಮಳೆ ಸುರಿದಿದೆ.

ಇದನ್ನೂ ಓದಿ : https://vijayatimes.com/sexual-harassment-by-rapido-driver/


ಬೀದರ್, ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲೆಯಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಆಗಿದೆ ಅಲ್ಲದೆ ಕರಾವಳಿ ಮಲೆನಾಡು ಪ್ರದೇಶದಲ್ಲಿ ಇನ್ನೂ ಐದು ದಿನ ಮಳೆಯಾಗುವ ಸಾದ್ಯತೆ ಇದೆ. ಬೆಳಗಾವಿ, ಬಾಗಲಕೋಟೆ (Bagalkote), ಬೀದರ್, ಧಾರವಾಡ, ಯಾದಗಿರಿಯಲ್ಲಿ ಸ್ವಲ್ಪ ಮಳೆಯಾಗುವ ಸಾದ್ಯತೆ ಇದೆ,

Exit mobile version