ವಿಶ್ವದ ಯಾವುದೇ ಮಹಾಶಕ್ತಿಯೂ ಭಾರತಕ್ಕೆ ಷರತ್ತುಗಳನ್ನು ವಿಧಿಸಲು ಸಾಧ್ಯವಿಲ್ಲ : ಇಮ್ರಾನ್ ಖಾನ್!

imran khan

ಭಾರತ(India) ಜಗತ್ತಿನ ಅತ್ಯಂತ ಗೌರವಯುತ ರಾಷ್ಟ್ರವಾಗಿದೆ. ಭಾರತದ ಹಿತಾಸಕ್ತಿಗಳಿಗೆ ವಿರುದ್ದವಾಗಿ ಜಗತ್ತಿನ ಯಾವುದೇ ಮಹಾಶಕ್ತಿಯೂ ಭಾರತಕ್ಕೆ ಷರತ್ತುಗಳನ್ನು ವಿಧಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ(Pakistan) ಪ್ರಧಾನಿ(Primeminister) ಇಮ್ರಾನ್ ಖಾನ್(Imran Khan) ಹೇಳಿದ್ದಾರೆ. ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಇಂದು ಜಗತ್ತಿನ ಅತ್ಯಂತ ಬಲಿಷ್ಠ ರಾಷ್ಟ್ರವಾಗಿದೆ. ಯಾವುದೇ ರಾಷ್ಟ್ರವೂ ತನ್ನ ಹಿತಾಸಕ್ತಿಗೆ ವಿರುದ್ದವಾಗಿ ಏನನ್ನಾದರು ಮಾಡುವಂತೆ ಭಾರತವನ್ನು ಒತ್ತಾಯಿಸಲು ಸಾಧ್ಯವಿಲ್ಲ.

ಅಮೇರಿಕಾ(America) ಸೇರಿದಂತೆ ಐರೋಪ್ಯ ಒಕ್ಕೂಟದ ವಿರೋಧದ ನಡುವೆಯೂ ಭಾರತ ರಷ್ಯಾದಿಂದ ತೈಲವನ್ನು ಖರೀದಿಸುತ್ತಿದೆ. ತನ್ನ ಹಿತಾಸಕ್ತಿಗಳ ಮೇಲೆ ಭಾರತ ಕೆಲಸ ಮಾಡುತ್ತದೆ. ಯಾವುದೇ ಒತ್ತಡಗಳಿಗೆ ಭಾರತ ಮಣಿಯುವುದಿಲ್ಲ ಎಂದು ಇಮ್ರಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಭಾರತ ಏನು ಮಾಡಬೇಕು ಎಂದು ಯಾರೊಬ್ಬರೂ ಭಾರತಕ್ಕೆ ನಿರ್ದೇಶಿಸಲು ಸಾಧ್ಯವಿಲ್ಲ. ಐರೋಪ್ಯ ಒಕ್ಕೂಟದ ರಾಯಭಾರಿಗಳು ಪಾಕಿಸ್ತಾನಕ್ಕೆ ಹೇಳಿದ್ದನ್ನು, ಭಾರತಕ್ಕೆ ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಭಾರತವೂ ಸಾರ್ವಭೌಮ ರಾಷ್ಟ್ರವಾಗಿರುವುದರಿಂದ ಭಾರತಕ್ಕೆ ನೀವು ಏನನ್ನೂ ಹೇಳಲು ಸಾಧ್ಯವಿಲ್ಲ.

ಇನ್ನು ನಾನು ಭಾರತದ ವಿರೋಧಿಯಲ್ಲ. ನೆರೆಯ ದೇಶದೊಂದಿಗೆ ಉತ್ತಮ ಸಂಬಂಧ ಹೊಂದಲು ನಾನು ಸದಾ ಉತ್ಸುಕನಾಗಿದ್ದೇ, ಆದರೆ ಆರ್‍ಎಸ್‍ಎಸ್ ಮತ್ತು ಕಾಶ್ಮೀರದಲ್ಲಿ ಭಾರತ ಕೈಗೊಂಡ ಕ್ರಮಗಳಿಂದ ಭಾರತ-ಪಾಕಿಸ್ತಾನದ ನಡುವಿನ ಸಂಬಂಧ ಸುಧಾರಿಸಲು ಸಾಧ್ಯವಾಗಲಿಲ್ಲ ಎಂದರು. ಇನ್ನು ಇಮ್ರಾನ್ ಖಾನ್ ಅಮೇರಿಕಾದ ವಿರುದ್ದವಲ್ಲ. ಆದರೆ ನನ್ನ ಜನರಿಗೆ ಯಾವುದು ಒಳ್ಳೆಯದೇ ಅದನ್ನು ಮಾಡಲು ಇಚ್ಚಿಸುತ್ತೇನೆ. ಅದಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ನಾವು ಅಮೇರಿಕಾದೊಂದಿಗೆ ಸಮಾನ ಸಂಬಂಧಗಳನ್ನು ಬಯಸುತ್ತೇವೆ. ನಮ್ಮ ಸರ್ಕಾರವನ್ನು ಕಿತ್ತೊಗೆಯಲು ವಿದೇಶಿ ಷಡ್ಯಂತ್ರ ಕೆಲಸ ಮಾಡಿದೆ. ಪಾಕಿಸ್ತಾನದ ಜನತೆ ಇದರ ವಿರುದ್ದ ಹೋರಾಡಬೇಕಿದೆ.

“ನೀವು ಇಂದು ಎದ್ದು ನಿಲ್ಲದಿದ್ದರೆ ಮುಂದೆ ನಿಮ್ಮನ್ನು ರಕ್ಷಿಸಲು ಯಾರೂ ಬರುವುದಿಲ್ಲ’’ ಎಂದು ಕರೆ ನೀಡಿದ್ದಾರೆ. ಇನ್ನು ಕಳೆದ ಕೆಲ ದಿನಗಳಿಂದ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ರಾಜಕೀಯ ಅಸ್ಥಿರತೆ ತಲೆದೋರಿದೆ. ಇಮ್ರಾನ್ ಖಾನ್ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಜನರ ಬೆಂಬಲ ಕಳೆದುಕೊಂಡಿದೆ. ಹೀಗಾಗಿ ಪ್ರಧಾನಿ ಇಮ್ರಾನ್ ಖಾನ್ ಕೂಡಲೇ ರಾಜೀನಾಮೆ ನೀಡಬೇಕೆಂದು ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದ್ದವು.

ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯವನ್ನು ಎದುರಿಸುವಂತೆ ಇಮ್ರಾನ್ ಖಾನ್‍ಗೆ ವಿಪಕ್ಷಗಳು ಸವಾಲು ಹಾಕಿದ್ದವು. ಬಹುಮತ ಸಾಬೀತುಪಡಿಸಲು ಇಮ್ರಾನ್ ಖಾನ್‍ಗೆ ಸಾಧ್ಯವಾಗಿಲ್ಲ. ಹೀಗಾಗಿ ಸದ್ಯ ಪಾಕಿಸ್ತಾನದಲ್ಲಿ ರಾಜಕೀಯ ಅಸ್ಥಿರತೆ ನಿರ್ಮಾಣವಾಗಿದೆ.

Exit mobile version