ಬೆಳ್ಳುಳ್ಳಿ ಶಾಕ್: ಈರುಳ್ಳಿ ಸರಧಿಯಾಯ್ತು, ಜನರಿಗೆ ಹೊರೆಯಾದ ಬೆಳ್ಳುಳ್ಳಿ ರೇಟ್

ಇತ್ತೀಚೆಗಷ್ಟೇ ಟೊಮೇಟೊ, ಈರುಳ್ಳಿ (Tomato, Onion) ಬೆಲೆಯ ಬಿಸಿ ತಟ್ಟಿದ್ದು, ಇನ್ನೇನು ಸುಧಾರಿಸಿಕೊಳ್ಳುವಷ್ಟರಲ್ಲಿ ಬೆಳ್ಳುಳ್ಳಿ (Increased Garlic price) ಬೆಲೆ ರೀಟೇಲ್ ಮಾರುಕಟ್ಟೆಯಲ್ಲಿ ಕಿಲೋಗೆ

300ರಿಂದ 400 ರೂ ಆಗಿದೆ. ಟೊಮೆಟೋ, ಈರುಳ್ಳಿ ಬೆಲೆ ಏರಿಕೆಯ ಬಿಸಿ ಪಡೆದಿರುವ ಜನಸಾಮಾನ್ಯರಿಗೆ ಬೆಳ್ಳುಳ್ಳಿ ಶಾಕ್ (Garlic Shock) ಕೊಟ್ಟಿದ್ದು, ಸಗಟು ಮಾರುಕಟ್ಟೆಯಲ್ಲಿ ಸಾಮಾನ್ಯ ಬೆಳ್ಳುಳ್ಳಿಯ

ಬೆಲೆ 130ರಿಂದ 140 ರೂ ಆಗಿದೆ.

ಉಚ್ಚಗುಣಮಟ್ಟದ ಬೆಳ್ಳುಳ್ಳಿ ಬೆಲೆ 250 ರೂ ಆಗಿದ್ದು, ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡರಿಂದಲೂ ಬೆಳ್ಳುಳ್ಳಿ (Garlic) ಉತ್ಪಾದನೆ ಕುಂಠಿತವಾಗಿದೆ. ಕೆಲ ಪ್ರದೇಶಗಳಲ್ಲಿ ಅದು ಕಿಲೋಗೆ 400 ರೂ ಗಡಿ

ದಾಟಿ ಹೋಗಿದೆ. ಟೊಮೆಟೋ ಮತ್ತು ಈರುಳ್ಳಿ ಬೆಲೆ ಹೆಚ್ಚಳದಿಂದ ಜನಸಾಮಾನ್ಯರು ಕಂಗೆಟ್ಟಿರುವುದು ಮಾತ್ರವಲ್ಲ, ಹಣದುಬ್ಬರ ಕೆಳಗಿಳಿಯಲು ಬಿಡದೆ ಸರ್ಕಾರಕ್ಕೂ ತಲೆ ನೋವಾಗಿದೆ. ಈಗ ಬೆಲೆ

ಏರಿಕೆಯಲ್ಲಿ ಬೆಳ್ಳುಳ್ಳಿಯೂ (Increased Garlic price) ಪಾತ್ರವಹಿಸುತ್ತಿದೆ.

ಸಗಟು ಮಾರುಕಟ್ಟೆಯಲ್ಲೇ ಬೆಳ್ಳುಳ್ಳಿ ಬೆಲೆ ಕಿಲೋಗೆ 130 ರಿಂದ 140 ರೂನಷ್ಟು ಇದೆ. ಉಚ್ಚ ಮಟ್ಟದ ಬೆಳ್ಳುಳ್ಳಿ 250 ರೂವರೆಗೂ ಮಾರಾಟವಾಗುತ್ತಿದೆ. ಇನ್ನು, ಸಾಮಾನ್ಯ ಬೆಳ್ಳುಳ್ಳಿಯು ರೀಟೇಲ್ ಮಾರುಕಟ್ಟೆಗಳಲ್ಲಿ

300-400 ರೂ ಬೆಲೆಗೆ ಮಾರಾಟವಾಗುತ್ತಿರುವುದು ಗೊತ್ತಾಗಿದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆ (Economic Times Paper) ಯಲ್ಲಿನ ವರದಿ ಆಗಿದೆ.

ಬೆಳ್ಳುಳ್ಳಿ ಬೆಲೆ ಏರಿಕೆ ಯಾಕೆ?
ಮುಂಗಾರು ಋತುವಿನಲ್ಲಿ ಸರಿಯಾಗಿ ಮಳೆಯಾಗದ ಹಿನ್ನೆಲೆಯಲ್ಲಿ ಬೆಳ್ಳುಳ್ಳಿ ಆವಕ ಬಹಳಷ್ಟು ಕಡಿಮೆ ಆಗಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡರಿಂದಲೂ ಬೆಳ್ಳುಳ್ಳಿ ಬಾಧಿತವಾಗಿದೆ. ತಮಿಳುನಾಡು

(Tamilnadu), ಆಂಧ್ರದ ಕರಾವಳಿ ಭಾಗದಲ್ಲಿ ಮಿಚಾಂಗ್ ಚಂಡಮಾರುತದ (Michaung Cyclone) ಪರಿಣಾಮ ದಕ್ಷಿಣ ಭಾರಗದ ಹಲವು ಭಾಗಗಳಲ್ಲಿ ವಿಪರೀತ ಮಳೆಯಾಗಿ ಬೆಳೆ ನಾಶವಾಗಿದ್ದಿದೆ.

ಸದ್ಯ ಬೆಳ್ಳುಳ್ಳಿ ಬೆಲೆ ಕಡಿಮೆ ಆಗುವ ಸಾಧ್ಯತೆ ಇಲ್ಲ ಎಂದು ಎಪಿಎಂಸಿ (APMC) ವರ್ತಕರು ಹೇಳುತ್ತಿದ್ದು, ‘ನಾವೀಗ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶದ ಮೇಲೆ ಅವಲಂಬಿತವಾಗಬೇಕಿದೆ.

ಇದು ತುಸು ದುಬಾರಿಯಾಗಬಹುದು ಎಂದು ವರ್ತಕರು ಹೇಳುತ್ತಿದ್ದಾರೆ. ಭಾರತದಲ್ಲಿ ಬೆಳ್ಳುಳ್ಳಿ ಅತಿಹೆಚ್ಚು ಬೆಳೆಯುವುದು ಮಧ್ಯಪ್ರದೇಶದಲ್ಲಿ. ದೇಶದ ಅರ್ಧಕ್ಕಿಂತ ಹೆಚ್ಚು ಬೆಳ್ಳುಳ್ಳಿ ಉತ್ಪಾದನೆ ಈ

ರಾಜ್ಯದಲ್ಲೇ ಆಗುತ್ತದೆ. ರಾಜಸ್ಥಾನ, ಉತ್ತರಪ್ರದೇಶ ಮತ್ತು ಗುಜರಾತ್​ (Rajasthan, Uttar Pradesh and Gujarat)ನಲ್ಲೂ ಸಾಕಷ್ಟು ಬೆಳೆಯಲಾಗುತ್ತದೆ.

ಇದನ್ನು ಓದಿ: ಪಕ್ಷನಿಷ್ಠ ಕರಸೇವಕನಿಗೆ ರಾಜಸ್ಥಾನದ ಸಿಎಂ ಪಟ್ಟ ನೀಡಿದ ಬಿಜೆಪಿ..!

Exit mobile version