ಏಷ್ಯನ್ ಗೇಮ್ಸ್: ವಿಶ್ವ ದಾಖಲೆ ಬರೆದ ಪುರುಷರ 10 ಮೀಟರ್ ಏರ್ ರೈಫಲ್ ತಂಡ..!

China: ಪ್ರಸ್ತುತ ಚೀನಾದ ಹಾಂಗ್ಝೌನಲ್ಲಿ (Hangzhou) ನಡೆಯುತ್ತಿರುವ ಏಷ್ಯನ್ ಗೇಮ್ಸ್ (Asian Games) 2023ರಲ್ಲಿ ಭಾರತದ ಪುರುಷರ 10 ಮೀಟರ್ ಏರ್ ರೈಫಲ್ ತಂಡವು ಮೊದಲ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ವಿಶ್ವ ದಾಖಲೆಯನ್ನು ಮುರಿದಿದೆ.

ರುದ್ರಂಕ್ಷ್ ಬಾಳಾಸಾಹೇಬ್ ಪಾಟೀಲ್ (Rudranksh Balasaheb Patil), ದಿವ್ಯಾಂಶ್ ಸಿಂಗ್ ಪನ್ವಾರ್ ಮತ್ತು ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಅವರನ್ನು ಒಳಗೊಂಡ ತಂಡವು ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಲ್ಲದೆ, ಈ ವಿಭಾಗದಲ್ಲಿ ವಿಶ್ವದಾಖಲೆಯನ್ನು ಮುರಿದಿದೆ.

ಈ ಮೂವರು ವೈಯಕ್ತಿಕ ಅರ್ಹತಾ ಸುತ್ತಿನಲ್ಲಿ ಒಟ್ಟು 1893.7 ಅಂಕಗಳನ್ನು ಗಳಿಸಿದರು, ಬಾಕು ವಿಶ್ವ ಚಾಂಪಿಯನ್ಶಿಪ್ನಲ್ಲಿ ಆ ವರ್ಷದ ಆರಂಭದಲ್ಲಿ ಚೀನಾ ನಿರ್ಮಿಸಿದ ಹಿಂದಿನ ವಿಶ್ವ ದಾಖಲೆಯನ್ನು ಸರಿಗಟ್ಟಿದರು. ದಕ್ಷಿಣ ಕೊರಿಯಾ (South koria) 1890.1 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಚೀನಾ ಒಟ್ಟು 1888.2 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಟೀಮ್ ಈವೆಂಟ್ನಲ್ಲಿ (Teem Event) ಭಾರತವು ಮೊದಲ ಚಿನ್ನದ ಪದಕವನ್ನು ಗೆದ್ದುಗೊಂಡಿದೆ. ರುದ್ರಂಕ್ಷ್ ಪಾಟೀಲ್, ಒಲಿಂಪಿಯನ್ ದಿವ್ಯಾಂಶ್ ಪನ್ವಾರ್ ಮತ್ತು ಐಶ್ವರಿ ಪ್ರತಾಪ್ ಸಿಂಗ್ ತೋಮರ್ ತಂಡ 1893.7 ಅಂಕಗಳಿಸಿ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಆದರೆ ಎಲ್ಲಾ ಮೂವರು ಶೂಟರ್ಗಳು 10 ಮೀಟರ್ ಏರ್ ರೈಫಲ್ (Air Riffle) ಸ್ಪರ್ಧೆಯಲ್ಲಿ ಟಾಪ್-8 ಗೆ ಅರ್ಹತೆ ಪಡೆದರು. ಆದರೆ, ಏಷ್ಯನ್ ಗೇಮ್ಸ್ (Asian Games) ನಿಯಮಗಳ ಪ್ರಕಾರ, ಪ್ರತಿ ದೇಶದಿಂದ ಇಬ್ಬರು ಮಾತ್ರ ಫೈನಲ್ಗೆ ಅರ್ಹತೆ ಪಡೆಯಬಹುದು, ಇದರಿಂದಾಗಿ ರುದ್ರಂಕ್ಷ್ ಮತ್ತು ಐಶ್ವರಿ ಫೈನಲ್ಗೆ ಮುನ್ನಡೆದರು. ವೈಯಕ್ತಿಯ ಹಣಾಹಣಿ ನಡೆಯಲಿದ್ದು, ರುದ್ರಂಕ್ಷ್ ಮತ್ತು ಐಶ್ವರಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಪುರುಷರ ರೋಯಿಂಗ್ನಲ್ಲಿ ಭಾರತ ಕಂಚಿನ ಪದಕವನ್ನು ಗೆದ್ದುಕೊಂಡಿದ್ದು, ಪ್ರಸ್ತುತ 1 ಚಿನ್ನ, 3 ಬೆಳ್ಳಿ, 5 ಕಂಚಿನ ಪದಕ ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. 27 ಚಿನ್ನ, 11 ಬೆಳ್ಳಿ, 5 ಕಂಚು ಸೇರಿ ಒಟ್ಟು 43 ಪದಕ ಪಡೆದಿರುವ ಚೀನಾ ಮೊದಲ ಸ್ಥಾನದಲ್ಲಿದೆ.

Exit mobile version