ಚೀನಾ ವಸ್ತುಗಳು ಬೇಡ ಎಂದಿದ್ದರು ಕೂಡ, ಕಳೆದ ವರ್ಷ 100 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳನ್ನು ಆಮದು ಮಾಡಕೊಂಡಿತ್ತು ಭಾರತ.!

2020 ರಲ್ಲೇ ಚೀನಾ ವಸ್ತುಗಳು ಬೇಡ ಎಂಬ ನಿರ್ಧಾರಕ್ಕೆ ಬಂದಿತ್ತು ಭಾರತ. ಈ ಮೂಲಕ ಚೀನಾ ದೇಶದಿಂದ ಆಮದು ಮಾಡಿಕೊಳ್ಳುವ ವಸ್ತುಗಳನೆಲ್ಲಾ ಸ್ಥಗಿತಗೊಳಿಸಬೇಕು ಎಂಬುದು ದೃಢವಾಗಿತ್ತು. ಇದಕ್ಕೆ ಮತ್ತೆ ಬಲಪಡಿಸಿದ್ದು, ಭಾರತ- ಚೀನಾ ಗಡಿಭಾಗದಲ್ಲಿ ಉಂಟಾದ ಸಂಘರ್ಷ.! ತೀವ್ರ ಬೆಂಕಿಯಂತೆ ಉದ್ಬವಗೊಂಡ ಸಂಘರ್ಷದಿಂದ ಕೆಂಡಾಮಂಡಲವಾದ ಭಾರತ ಸರ್ಕಾರ ಶೀಘ್ರವೇ ಚೀನಾದ ಎಲ್ಲಾ ಸಂಬಂಧಗಳನ್ನು ಅಳಿಸಿ ಹಾಕುವುದರ ಜೊತೆಗೆ ಚೀನಾದ ಪ್ರತಿಯೊಂದು ಆಪ್‍ಗಳನ್ನು ಬ್ಯಾನ್ ಮಾಡುವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿತ್ತು. ಈ ಮೂಲಕ ಭಾರತ ಚಿನಾದ ಜೊತೆಗೆ ಇನ್ಮುಂದೆ ಯಾವುದೇ ವ್ಯವಹಾರ, ಆಮದು ಮಾಡುವುದಿಲ್ಲ ಎಂದು ಕಡ್ಡಿ ತುಂಡಾದ ರೀತಿಯಲ್ಲಿ ಹೇಳಿತ್ತು.! ಆದರೆ ಈಗ `ದ ಪ್ರಿಂಟ್.ಇನ್’ ಎಂಬ ವರದಿ ಎಲ್ಲವನ್ನು ತಲೆಕೆಳಗಾಗುವಂತೆ ಮಾಡಿದೆ.

ಭಾರತ ಕಳೆದ ವರ್ಷದಲ್ಲಿ 100 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಮೂಲಕ ತನ್ನ ಮಾತನ್ನು ಮರೆತಿದೆ ಹಾಗೂ ಇದೊಂದು ದಾಖಲೆ ಕೂಡ ಆಗಿದೆ. ಈ ರೀತಿ ಆಮದು ಮಾಡಿಕೊಂಡ ವಸ್ತುಗಳು ಯಾವ್ಯಾವು ಎಂದು ಪರಿಶೀಲಿಸಿದಾಗ ತಿಳಿದಿದ್ದು, ಎಲೆಕ್ಟ್ರಿಕೆಲ್, ಸ್ಮಾರ್ಟ್‍ಫೋನ್, ಗ್ಯಾಡ್ಜೆಟ್ ಸಂಬಂಧಿತ ವಸ್ತುಗಳು, ಯಂತ್ರಗಳು, ಕೆಮಿಕಲ್ಸ್ ಮತ್ತು ಮೆಡಿಕಲ್ ಡ್ರಗ್ ವಸ್ತುಗಳ ಪಟ್ಟಿಗೆ ಸೇರಿಕೊಂಡಿವೆ. ಚೈನಾದ ಜನರಲ್ ಅಡ್ಮಿನಿಸ್ಟ್ರೇಷನ್ ಆಫ್ ಕಸ್ಟಮ್ಸ್ ಮೂಲ ವರದಿಗಳ ಅನುಸಾರ 2021 ರಲ್ಲಿ ಭಾರತಕ್ಕೆ 97.52 ಬಿಲಿಯನ್ ಡಾಲರ್ ಮೌಲ್ಯದ ವಸ್ತಗಳು ರಫ್ತುಗೊಳಿಸಿದ್ದರೆ, ನೆರೆದೇಶದ ದ್ವಿಪಕ್ಷೀಯ ವ್ಯಾಪಾರ ವಹಿವಾಟು 125.66 ಬಿಲಿಯನ್ ಡಾಲರ್ ಆಗಿದೆ ಎಂದು ತಿಳಿಸಿದೆ.

ಕೈಗಾರಿಕಾ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ ವರ್ಷದ ಮೊದಲಿನ ಎಂಟು ತಿಂಗಳಲ್ಲಿ ಚೀನಾದಿಂದ ಭಾರತ ಪಡೆದುಕೊಂಡಿದ್ದು ಕಚ್ಚಾ ತೈಲ, ವಜ್ರ, ಹವಳ, ಕಲಿದ್ದಲು ಪ್ರಮುಖವಾಗಿವೆ. ಒಟ್ಟಾರೆ ಇದರ ಬೆಲೆ 60 ಡಾಲರ್ ಆಗಿದೆ ಎಂದು ತಿಳಿಸಿದೆ. ಈ ಮೂಲಕ ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ಗ್ಲೋಬಲ್ ಟೈಮ್ಸ್ ವರದಿ ಮಾಡಿರುವುದು ಹೀಗೆ.! ಭಾರತ ಮತ್ತು ಚೀನಾ ಎರಡು ದೇಶಗಳ ನಡುವೆ ವೈರತ್ವ ಹಬ್ಬಿಕೊಂಡಿದೆ. ಈ ನಡುವೆ ಕೂಡ ಭಾರತ ಚೀನಾದ ಉತ್ಪನ್ನಗಳ ಮೇಲೆ ಇಷ್ಟು ಅವಲಂಬೀತರಾಗಿರುವುದು ಅಶ್ಚರ್ಯ.! ಮತ್ತು ವ್ಯಾಪಾರ ವಹಿವಾಟು ಇನ್ನು ಕಡಿತವಾಗಿಲ್ಲ ಎಂಬುದಕ್ಕೆ ಈ ಏರಿಕೆಯೇ ಸಾಕ್ಷಿ ಎಂದು ತಿಳಿಸಿದೆ.

Exit mobile version