Mumbai : ICC Ranking ನಲ್ಲಿ ಟೀಮ್ ಇಂಡಿಯಾ ಹೊಸ ದಾಖಲೆಯನ್ನು ನಿರ್ಮಿಸಿದೆ. ನಿನ್ನೆಯಿಂದ (india ranked first in icc) ಆರಂಭವಾಗಿರುವ ಆಸ್ಟ್ರೇಲಿಯಾದೊಂದಿಗಿನ ಏಕದಿನ
ಸರಣಿಯ ಮೊದಲ ಪಂದ್ಯದಲ್ಲಿ 5 ವಿಕೆಟ್ಗಳ (Wicket) ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತ ತಂಡ ಕ್ರಿಕೆಟ್ನ ಮೂರು ಮಾದರಿಗಳಲ್ಲಿ ನಂಬರ್ 1 ಸ್ಥಾನಕ್ಕೇರಿದೆ.

ನಿನ್ನೆ ನಡೆದ ಆಸ್ಟ್ರೇಲಿಯಾದೊಂದಿಗೆ (Australia) ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಟೀಮ್ ಇಂಡಿಯಾ (Team India) ಏಕದಿನ ಕ್ರಿಕೆಟ್ನಲ್ಲಿ ನಂಬರ್ ಸ್ಥಾನಕ್ಕೇರಿತು.
ಇದಕ್ಕೂ ಮುನ್ನ ಟಿ-20 ಮತ್ತು ಟೆಸ್ಟ್ ಕ್ರಿಕೆಟ್ನಲ್ಲೂ ಟೀಮ್ ಇಂಡಿಯಾ ನಂಬರ್ 1 ಸ್ಥಾನದಲ್ಲಿತ್ತು. ಇದೀಗ ಟೀಮ್ ಇಂಡಿಯಾ ಏಕಕಾಲದಲ್ಲಿ ಮೂರು ಮಾದರಿಯ ಕ್ರಿಕೆಟ್ನಲ್ಲಿ ನಂಬರ್ 1 ಸ್ಥಾನಕ್ಕೇರಿದೆ.
ಈ ಮೂಲಕ ಕ್ರಿಕೆಟ್ ಲೋಕದಲ್ಲೇ ಹೊಸ (india ranked first in icc) ಇತಿಹಾಸ ನಿರ್ಮಿಸಿದೆ.
ಟೀಮ್ ಇಂಡಿಯ 42 ಪಂದ್ಯಗಳಿಂದ 4,864 ಅಂಕಗಳು ಹಾಗೂ 116 ಶ್ರೇಯಾಂಕದೊಂದಿಗೆ ಏಕದಿನ ಕ್ರಿಕೆಟ್ನಲ್ಲಿ, 59 ಪಂದ್ಯಗಳಿಂದ 15,589 ಅಂಕಗಳು ಹಾಗೂ 264 ಶ್ರೇಯಾಂಕದೊಂದಿಗೆ ಟಿ-20 ಕ್ರಿಕೆಟ್ನಲ್ಲಿ,
ಮತ್ತು 29 ಪಂದ್ಯಗಳಿಂದ 3,434 ಅಂಕಗಳು ಹಾಗೂ 118 ಶ್ರೇಯಾಂಕದೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ (Test Cricket) ನಂಬರ್ 1 ಸ್ಥಾನಕ್ಕೇರಿದೆ.

ಟಿ-20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಮೊದಲ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ (England) ತಂಡವು 2ನೇ ಸ್ಥಾನ, ಪಾಕಿಸ್ತಾನ 3ನೇ ಸ್ಥಾನ, ನ್ಯೂಜಿಲೆಂಡ್(New Zealand) 4ನೇ ಸ್ಥಾನ ಹಾಗೂ ದಕ್ಷಿಣ
ಆಫ್ರಿಕಾ 5ನೇ ಸ್ಥಾನದಲ್ಲಿದೆ. ಅದೇ ರೀತಿ ಏಕದಿನ ಕ್ರಿಕೆಟ್ನಲ್ಲಿ ಪಾಕಿಸ್ತಾನ 2ನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 3ನೇ ಸ್ಥಾನ, ದಕ್ಷಿಣ ಆಫ್ರಿಕಾ 4ನೇ ಸ್ಥಾನದಲ್ಲಿ ಹಾಗೂ ಇಂಗ್ಲೆಂಡ್ 5ನೇ ಸ್ಥಾನದಲ್ಲಿದೆ. ಇನ್ನು ಟೆಸ್ಟ್
ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ 115 3ನೇ ಸ್ಥಾನ, ದಕ್ಷಿಣ ಆಫ್ರಿಕಾ 4ನೇ ಸ್ಥಾನ ನ್ಯೂಜಿಲೆಂಡ್ 5ನೇ ಸ್ಥಾನದಲ್ಲಿದೆ.
ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಿರುವ ಆಸ್ಟ್ರೇಲಿಯಾ ತಂಡ ಮುಂಬರುವ ವಿಶ್ವಕಪ್ ಟೂರ್ನಿಗೆ ಭರ್ಜರಿ ಸಿದ್ದತೆ ನಡೆಸಿದೆ. ಇದು ವಿಶ್ವಕಪ್ ಟೂರ್ನಿಗೆ ಪೂರ್ವ
ತಯಾರಿಯೂ ಆಗಿದ್ದು, ಮೊದಲ ಪಂದ್ಯದಲ್ಲೇ 5 ವಿಕೆಟ್ಗಳ ಭರ್ಜರಿ ಗೆಲುವನ್ನು ಟೀಮ್ ಇಂಡಿಯಾ ಸಾಧಿಸಿದೆ.
ಇದನ್ನು ಓದಿ: ಮುಂದುವರೆದ ಪಿಡಿಒ ವರ್ಗಾವಣೆ ಸರಣಿ: ಶೇ. 25ರಷ್ಟು ದಾಟಿದ ವರ್ಗಾವಣೆ ಪ್ರಮಾಣ !