ಬಿಸಿಲಿನ ತಾಪಮಾನ ಹೊಡೆತ ; `ನಾವು ಕೆಲಸ ಮಾಡದಿದ್ದರೆ, ಹೊಟ್ಟೆಗೆ ಕೂಳಿಲ್ಲ : ಬಡ ಕಾರ್ಮಿಕರ ಅಳಲು!

daily wagers

ನೋಯ್ಡಾ: ಕಟ್ಟಡ ನಿರ್ಮಾಣ ಕಾರ್ಮಿಕ ಯೋಗೇಂದ್ರ ಟುಂಡ್ರೆ ಅವರಿಗೆ ಹೊಸದಿಲ್ಲಿಯ(NewDelhi) ಹೊರವಲಯದಲ್ಲಿರುವ ಕಟ್ಟಡದ ನಿವೇಶನದಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ.

ಈ ವರ್ಷ, ದಾಖಲೆಯ ಹೆಚ್ಚಿನ ತಾಪಮಾನವು(Temparature) ಅಸಹನೀಯವಾಗಿದೆ. ಭಾರತವು ಹಿಂದೆಂದೂ ದಾಖಲಿಸದ ತಾಪಮಾನವನ್ನು ದಾಖಲಿಸಿದೆ. ಈ ಹೊಡೆತದಿಂದ, ಸಾಮಾನ್ಯವಾಗಿ ಹೊರಾಂಗಣದಲ್ಲಿ ಕೆಲಸ ಮಾಡುವ ದೇಶದ ಬಹುಪಾಲು ಬಡ ಕಾರ್ಮಿಕರು ಸುಡುವ ತಾಪಮಾನಕ್ಕೆ ಗುರಿಯಾಗುತ್ತಿದ್ದಾರೆ ಎಂಬುದು ಗಮನಾರ್ಹ.

ಹೊರವಲಯದಲ್ಲಿ ಹೆಚ್ಚು ತಾಪಮಾನವಿದೆ. ಬಿಸಿಲ ಬೇಗೆ ಎಂದು ನಾವು ಕೆಲಸ ಮಾಡದೆ ಒಳಗೆ ಕುಳಿತರೆ, ನಾವು ಏನು ತಿನ್ನಬೇಕು? ನೀವೇ ಹೇಳಿ? ಕೆಲವು ದಿನಗಳವರೆಗೆ ನಾವು ಕೆಲಸ ಮಾಡುತ್ತೇವೆ ಮತ್ತು ನಂತರ ಒಂದಿಷ್ಟು ಸಮಯ ವಿಶ್ರಾಂತಿ ಪಡೆದು ಕೆಲಸಕ್ಕೆ ಹಿಂದಿರುಗಬೇಕು. ಆ ರೀತಿ ಮಾಡಬೇಕಿದೆ ಎಂದು ಶ್ರೀ ತುಂಡ್ರೆ ಸುದ್ದಿವಾಹಿನಿಯೊಂದಕ್ಕೆ ಹೇಳಿಕೊಂಡಿದ್ದಾರೆ. ನವದೆಹಲಿ ಪ್ರದೇಶದಲ್ಲಿ ಬಿಸಿಲ ಹೊಡೆತಕ್ಕೆ ತಾಪಮಾನವು ಈ ವರ್ಷ 45 ಡಿಗ್ರಿ ಸೆಲ್ಸಿಯಸ್ (113 ಫ್ಯಾರನ್‌ಹೀಟ್) ಅನ್ನು ತಲುಪಿದೆ.

ಆಗಾಗ್ಗೆ ಶ್ರೀ ಟುಂಡ್ರೆ ಮತ್ತು ಅದೇ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುವ ಅವರ ಪತ್ನಿ ಲತಾ ಅವರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಈ ತೊಂದರೆಯಿಂದ ಅವರು ತಮ್ಮ ದಿನನಿತ್ಯದ ಆದಾಯವನ್ನು ಕಳೆದುಕೊಳ್ಳುತ್ತಿದ್ದಾರೆ. ತಾಪಮಾನದ ಕಾರಣ, ಕೆಲವೊಮ್ಮೆ ನಾವು ಕೆಲಸಕ್ಕೆ ಹೋಗುವುದಿಲ್ಲ. ನಾನು ಕೆಲ ದಿನಗಳ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ಹಲವು ಬಾರಿ, ನಿರ್ಜಲೀಕರಣದಿಂದ ಅನಾರೋಗ್ಯಕ್ಕೆ ಒಳಗಾಗುತ್ತೇನೆ ಮತ್ತು ನಂತರ ಗ್ಲೂಕೋಸ್ ಬಾಟಲಿಗಳ ಅಗತ್ಯವಿರುತ್ತದೆ ಎಂದು ಬಡ ಕಾರ್ಮಿಕರಾದ ಲತಾ ಹೇಳಿದ್ದಾರೆ.

ನವದೆಹಲಿ ಸೇರಿದಂತೆ ಅನೇಕ ಸ್ಥಳಗಳಲ್ಲಿ ತಾಪಮಾನ ಮಾಪಕವು 40 ಡಿಗ್ರಿ ಸೆಲ್ಸಿಯಸ್ ಗರಿಷ್ಠತೆಯನ್ನು ತಲುಪಿದೆ. ಮಾರ್ಚ್ ಅಂತ್ಯದಿಂದ ಹೆಚ್ಚು ಜನರು ಬಿಸಿಲಿನ ತಾಪಮಾನದ ಹೊಡೆತಗಳಿಂದ ಸಾವನ್ನಪ್ಪಿದ್ದಾರೆ ಮತ್ತು ವಿದ್ಯುತ್ ಬೇಡಿಕೆಯು ಬಹು-ವರ್ಷದ ಗರಿಷ್ಠ ಮಟ್ಟವನ್ನು ತಲುಪಿದೆ. ತೀವ್ರ ಶಾಖದ ಪ್ರಭಾವವನ್ನು ತಗ್ಗಿಸಲು ಕ್ರಮಗಳನ್ನು ರೂಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರಗಳಿಗೆ ಈಗಾಗಲೇ ಕರೆ ನೀಡಿದ್ದಾರೆ.

Exit mobile version