ಯಾರಿಗೆ ಸಿಗುತ್ತೆ ದೇಶದ ಚುಕ್ಕಾಣಿ : ಇಂಡಿಯಾ ಟುಡೇ-ಸಿವೋಟರ್ ಸಮೀಕ್ಷೆಯಲ್ಲಿ  ಬಯಲಾಯ್ತು ಅಚ್ಚರಿಯ ಫಲಿತಾಂಶ

New Delhi : ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್(India today cvoter released) ಸಮೀಕ್ಷೆ ಬಿಡುಗಡೆಯಾಗಿದೆ. ಈ ಸಮೀಕ್ಷೆಯಲ್ಲಿ  ದೇಶದ ಜನರ ನಾಡಿಮಿಡಿತವನ್ನು ಅರಿಯುವ ಪ್ರಯತ್ನ ಮಾಡಲಾಗಿದೆ. ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಈ ಸಮೀಕ್ಷೆಯೂ ಅತ್ಯಂತ ಮಹತ್ವದ ಅಂಶಗಳ ಮೇಲೆ ಬೆಳಕು ಚೆಲ್ಲಿದೆ.

ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಪ್ರಕಾರ, ಇಂದು ಲೋಕಸಭೆ ಚುನಾವಣೆ ನಡೆದರೆ ಕಾಂಗ್ರೆಸ್(Congress)  ಮೈತ್ರಿಕೂಟ 191 ಸ್ಥಾನಗಳನ್ನು ಗಳಿಸಬಹುದು .

ಅದೇ ರೀತಿ ನರೇಂದ್ರ ಮೋದಿ(Narendra Modi) ನೇತೃತ್ವದ ಭಾರತೀಯ ಜನತಾ ಪಕ್ಷ (ಬಿಜೆಪಿ)(BJP) 284 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೂ ದೇಶದ ಅತ್ಯಂತ ಜನಪ್ರಿಯ ನಾಯಕರಾಗಿ ಉಳಿದಿದ್ದಾರೆ ಎಂದು ಸಮೀಕ್ಷೆಯು ಹೇಳಿದೆ.

ಶೇಕಡಾ 72 ಪ್ರತಿಶತದಷ್ಟು ಜನರು ಪ್ರಧಾನಿಯವರ ಕಾರ್ಯವೈಖರಿಯಿಂದ ತೃಪ್ತರಾಗಿದ್ದಾರೆ.

ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಭಾರತ್ ಜೋಡೋ(Bharath Jodo) ಯಾತ್ರೆಯನ್ನು ಮುನ್ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರನ್ನು  ಶೇಕಡಾ 37ರಷ್ಟು ಜನರು ಬೆಂಬಲಿಸಿದ್ದಾರೆ.

ಭಾರತ್ ಜೋಡೋ ಯಾತ್ರೆಯು ದೇಶದಲ್ಲಿ ಸಂಚಲನವನ್ನು ಸೃಷ್ಟಿಸಿದೆ ಎಂದು 37 ಪ್ರತಿಶತದಷ್ಟು ಜನರು ನಂಬಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್‌ ಈಗ ಕರ್ನಾಟಕದಲ್ಲೂ ಕೊನೆ ಉಸಿರೆಳೆಯುತ್ತಿದೆ ; ಬಿಜೆಪಿ ಲೇವಡಿ

ಸಮೀಕ್ಷೆಯ ಪ್ರಮುಖ ಅಂಶಗಳು ಇಲ್ಲಿವೆ:

ಶೇ. 67 ಪ್ರತಿಶತದಷ್ಟು ಜನರು 2023ರ ಜನವರಿಯಲ್ಲಿ ಮೋದಿಯವರ ಕಾರ್ಯಕ್ಷಮತೆ ತೃಪ್ತಿಕರವಾಗಿದೆ ಎಂದು ಹೇಳಿದ್ದಾರೆ. ಇದು ಆಗಸ್ಟ್ 2022ಕ್ಕೆ ಹೋಲಿಸಿದರೆ ಶೇಕಡಾ 11ರಷ್ಟು  ಹೆಚ್ಚಳವಾಗಿದೆ.

ಆಗಸ್ಟ್ 2022ರಲ್ಲಿ ಶೇಕಡಾ 37ರಷ್ಟು  ಜನರು ಎನ್‌ಡಿಎ(NDA) ಸರ್ಕಾರವನ್ನು ಬೆಂಬಲಿಸಿದ್ದರು. ಈಗ ಶೇಕಡಾ 18ಕ್ಕೆ ಅದರ ಪ್ರಮಾಣ ಕುಸಿದಿದೆ.

ಶೇ. 20 ಪ್ರತಿಶತದಷ್ಟು ಜನರು ಕೋವಿಡ್ -19(Covid 19) ಸಾಂಕ್ರಾಮಿಕ ರೋಗವನ್ನು ನಿಭಾಯಿಸಿರುವುದು ಎನ್‌ಡಿಎಯ ಅತಿದೊಡ್ಡ ಸಾಧನೆ ಎಂದು ನಂಬಿದ್ದರೆ, ಶೇ. 14 ಪ್ರತಿಶತ ಜನರು ಆರ್ಟಿಕಲ್ 370ರ ಹಿಂಪಡೆಯುವಿಕೆ ದೊಡ್ಡ ಸಾಧನೆ ಎಂದು ಭಾವಿಸಿದ್ದಾರೆ.

ಅದೇ ರೀತಿ ಅಯೋಧ್ಯೆಯಲ್ಲಿ(Ayodhya) ರಾಮಮಂದಿರ ನಿರ್ಮಾಣವೇ ಈಗಿನ ಸರ್ಕಾರದ ದೊಡ್ಡ ಸಾಧನೆ ಎಂದು ಸಮೀಕ್ಷೆಗೆ ಒಳಗಾದವರಲ್ಲಿ ಶೇ.12 ಮಂದಿ ಹೇಳಿದ್ದಾರೆ.

 ಎನ್ಡಿಎ ಸರ್ಕಾರದ ಅತಿದೊಡ್ಡ ವೈಫಲ್ಯದ ಬಗ್ಗೆ ಪ್ರತಿಕ್ರಿಯಿಸಿದವರಲ್ಲಿ 25 ಪ್ರತಿಶತದಷ್ಟು ಜನರು ಬೆಲೆ ಏರಿಕೆ ಎಂದು ಹೇಳಿದ್ದಾರೆ, ಆದರೆ 17 ಪ್ರತಿಶತ ಜನರು ನಿರುದ್ಯೋಗ ಎಂದು ಹೇಳಿದ್ದಾರೆ.

ಶೇ. 26 ಪ್ರತಿಶತದಷ್ಟು ಜನರು ಕಾಂಗ್ರೆಸ್ ಅನ್ನು ಪುನರುಜ್ಜೀವನಗೊಳಿಸಲು ರಾಹುಲ್ ಗಾಂಧಿ ಸೂಕ್ತ ಎಂದು ನಂಬಿದ್ದಾರೆ. ಆದರೆ  ಶೇ. 17 ಪ್ರತಿಶತ ಜನರು ಸಚಿನ್ ಪೈಲಟ್(Sachin Pilot) ಪಾತ್ರಕ್ಕೆ ಒಲವು ತೋರಿದ್ದಾರೆ.

Exit mobile version