ಇಂಡಿಯಾ ಟಿವಿ-ಸಿಎನ್ಎಕ್ಸ್ ಸಮೀಕ್ಷೆ ; ಲೋಕಸಮರದಲ್ಲಿ ಏನಾಗಲಿದೆ ಬಿಜೆಪಿ ಭವಿಷ್ಯ..?!

New Delhi: ಈಗ ಲೋಕಸಭೆ ಚುನಾವಣೆ ನಡೆದರೆ ಏನಾಗಲಿದೆ ಎಂದು ಇಂಡಿಯಾ ಟಿವಿ (India TV and CNX survey) -ಸಿಎನ್ಎಕ್ಸ್ (CNX) ಅಭಿಪ್ರಾಯ ಸಂಗ್ರಹದ ಪ್ರೊಜೆಕ್ಷನ್, ಅದರ ಫಲಿತಾಂಶಗಳನ್ನು

ಪ್ರಸಾರ ಮಾಡಲಾಗಿದೆ. ಇಂಡಿಯಾ ಟಿವಿ-ಸಿಎನ್ಎಕ್ಸ್ ಸಮೀಕ್ಷೆಯ ಪ್ರಕಾರ, ಸದ್ಯ ಚುನಾವಣೆ ನಡೆದರೆ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್

(ಎನ್ಡಿಎ) ಮೈತ್ರಿಕೂಟ 318 ಲೋಕಸಭಾ ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತವನ್ನು ಗಳಿಸಬಹುದು. ಇನ್ನು ಕಾಂಗ್ರೆಸ್ (Congress) ನೇತೃತ್ವದ ಪ್ರತಿಪಕ್ಷಗಳು 175 ಸ್ಥಾನಗಳನ್ನು ಪಡೆಯಬಹುದು

ಮತ್ತು ಇತರ ಪ್ರಾದೇಶಿಕ ಪಕ್ಷಗಳು 50 ಸ್ಥಾನಗಳನ್ನು (India TV and CNX survey) ಪಡೆಯಬಹುದು.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ (BJP) ಏಕಾಂಗಿಯಾಗಿ 303 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ 290 ಸ್ಥಾನಗಳಲ್ಲಿ ಗೆಲ್ಲುವ ಮೂಲಕ 13 ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ಇನ್ನೊಂದೆಡೆ 2019ರಲ್ಲಿ 52 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ (Congress) ಈ ಬಾರಿ 6 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿಗೆ ಎಂದು ಸಮೀಕ್ಷೆ ಹೇಳಿದೆ. ಇನ್ನು ರಾಜ್ಯವಾರು ಯಾವ ಮೈತ್ರಿಕೂಟ

ಎಷ್ಟು ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ನೋಡುವುದಾದರೆ,

ಉತ್ತರ ಪ್ರದೇಶ (Uttar Pradesh) (80): NDA 73, INDIA 7

ಬಿಹಾರ(Bihar) (40): NDA 24, INDIA 16

J&K ಲಡಾಖ್ (6): NDA 3, INDIA 2, ಇತರೆ 1

ಹಿಮಾಚಲ ಪ್ರದೇಶ (Himachal Pradesh) (4): NDA 3, INDIA 1

ಮಣಿಪುರ (Manipur) (2): NDA 0, INDIA 2
ಮಹಾರಾಷ್ಟ್ರ (Maharashtra) (48): NDA 24, INDIA 24

ತಮಿಳುನಾಡು (Tamil Nadu) (39): NDA 9 INDIA 30

ಪಶ್ಚಿಮ ಬಂಗಾಳ (42): NDA 12, INDIA 30

ಕರ್ನಾಟಕ (Karnataka) (28): NDA 20, INDIA 7, ಇತರೆ 1

ರಾಜಸ್ಥಾನ (Rajasthan) (25): NDA 21, INDIA 4

ಆಂಧ್ರ ಪ್ರದೇಶ (Andhra Pradesh) (25): NDA 0, INDIA 0, ಇತರೆ 25

ಒಡಿಶಾ (Odisha) (21): NDA 8, INDIA 0, ಇತರೆ 13
ಗುಜರಾತ್ (Gujurat) (26): NDA 26, INDIA 0

ಕೇರಳ (Kerala) (20): NDA 0 , INDIA 20

ಮಧ್ಯಪ್ರದೇಶ (Madhya Pradesh) (29): NDA 24, INDIA 5

ತೆಲಂಗಾಣ (Telangana) (17): NDA 6, INDIA 2, ಇತರೆ 9

ಅಸ್ಸಾಂ (Assam) (14): NDA 12, INDIA 1, ಇತರೆ 1

ಛತ್ತೀಸ್ಗಢ (Chhattisgarh) (11): NDA 7, INDIA 4

ದೆಹಲಿ (Delhi) (7): NDA 5, INDIA 2

ಜಾರ್ಖಂಡ್ (Jharkand) (14): NDA 13, INDIA 1

ಹರಿಯಾಣ (Haryana) (10): NDA 8, INDIA 2

ಪಂಜಾಬ್ (Punjab) (13): NDA 0, INDIA 13

ಉತ್ತರಾಖಂಡ (Uttarakhand) (5): NDA 5, INDIA 0

ಇತರೆ NE ರಾಜ್ಯಗಳು (9): NDA 9, INDIA 0

ಗೋವಾ (Goa) (2): NDA 2 , INDIA 0

ಉಳಿದ UT ಸ್ಥಾನಗಳು ಲಡಾಖ್ (6): NDA 4, INDIA 2

ಒಟ್ಟು 543, NDA 318, INDIA 175, ಇತರೆ 50

ಪ್ರಮುಖ ಪಕ್ಷವಾರು ವಿಭಜನೆ: ಬಿಜೆಪಿ 290, ಕಾಂಗ್ರೆಸ್ 66, ಎಎಪಿ 10, ಟಿಎಂಸಿ (TMC) 29, ಬಿಜೆಡಿ 13, ಸಮಾಜವಾದಿ ಪಕ್ಷ 4, ಬಹುಜನ ಸಮಾಜ ಪಕ್ಷ 0, ರಾಷ್ಟ್ರೀಯ ಜನತಾ ದಳ 7,

ಜನತಾದಳ-ಯು 7, ಡಿಎಂಕೆ (DMK) 19 , ಎಐಎಡಿಎಂಕೆ 8, ವೈಎಸ್ಆರ್ ಕಾಂಗ್ರೆಸ್ 18, ಟಿಡಿಪಿ 7, ಎಡರಂಗ 8, ಬಿಆರ್ಎಸ್ 8 ಸ್ಥಾನಗಳನ್ನು ಪ್ರಾದೇಶಿಕ ಪಕ್ಷಗಳು ಗೆಲ್ಲಲಿವೆ.

Exit mobile version