2022 ರಲ್ಲಿ ಬಾಕ್ಸ್ ಆಫೀಸ್ ಚಿಂದಿ ಮಾಡಿದ ಚಿತ್ರದ ನಾಯಕರು ಇವರೇ ನೋಡಿ

India : 2022ರ ವರ್ಷ ಭಾರತೀಯ ಚಿತ್ರರಂಗಕ್ಕೆ (Indian box office movies 2022) ಅಭೂತಪೂರ್ವ ಬೆಂಬಲ ಹಾಗೂ ಉತ್ತಮ ಗಳಿಕೆ ತಂದೊಡ್ಡಿದ ವರ್ಷ ಎಂದರೇ ಖಂಡಿತ ತಪ್ಪಾಗಲಾರದು.

ಒಂದು ದೇಶ ಹಲವು ಭಾಷೆ ಎಂಬಂತೆ, ಹಲವು ಭಾಷೆಯ ಚಿತ್ರರಂಗದ ಹಲವು ಅದ್ಭುತ ಸಿನಿಮಾಗಳು, ಹಲವು ಅದ್ಭುತ ನಟರು ಮೋಡಿ ಮಾಡಿದ ವರ್ಷ 2022 ಎಂಬುದು ಸಿನಿಮಾ ರಂಗಕ್ಕೆ ಒಂದು ಕಿರೀಟ ತೊಡಿಸಿದಂತಾಗಿದೆ.

ಸದ್ಯ ಪ್ರಸಕ್ತ 2022 ರಲ್ಲಿ ಜಗ ಮೆಚ್ಚಿದ, ಬಾಕ್ಸ್ ಆಫೀಸ್ ಕಲೆಕ್ಷನ್ ಕಬಳಿಸಿದ (indian box office movies 2022) ಸಿನಿಮಾಗಳು ಯಾವುದು, ಆಯಾ ಸಿನಿಮಾಗಳ ನಾಯಕ ನಟರು ಯಾರು?

ಎಂಬ ಮಾಹಿತಿಯನ್ನು ಲಭ್ಯವಾಗಿರುವ ವರದಿ ಅನುಸಾರ ತಿಳಿಯೋಣ.

ಚಿತ್ರ : ಬೂಲ್ ಬೂಲಾಯ 2(ಬಾಲಿವುಡ್)
ನಾಯಕ : ಕಾರ್ತಿಕ್ ಆರ್ಯನ್

ಬಾಲಿವುಡ್ (Bollywood) ಅಂಗಳದಲ್ಲಿ ಕಾಮಿಡಿ, ಹಾರರ್ ಜಾನರ್ ಮೂಲಕ ಚಿತ್ರ ರಸಿಕರ ಕಣ್ಮುಂದೆ ಮೇ 20 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಈ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಉತ್ತಮ ಹೆಸರು ಗಳಿಸಿತು.

ಇದರೊಟ್ಟಿಗೆ ಸಿನಿಮಾದ ನಾಯಕ ಕಾರ್ತಿಕ್ ಆರ್ಯನ್ (Kartik Aaryan) ಮತ್ತು ನಾಯಕಿ ಕಿಯಾರಾ ಅಡ್ವಾನಿ (Kiara Advani) ಜೋಡಿ ಮಾಡಿದ ಮೋಡಿಗೆ ಸಿನಿಪ್ರಿಯರು ಫಿದಾ ಆಗಿ ಪೂರ್ತಿ ಅಂಕಗಳನ್ನು ಕೊಟ್ಟು ಸಿನಿಮಾವನ್ನು ಯಶಸ್ವಿಗೊಳಿಸಿದರು.

ಈ ಚಿತ್ರದ ಮೂಲಕ ನಟ ಕಾರ್ತಿಕ್ ಆರ್ಯನ್ ಸಾಕಷ್ಟು ಖ್ಯಾತಿ ಗಳಿಸದಲ್ಲದೇ, ಜನ ಮಚ್ಚಿದ ನಾಯಕ ಎಂಬ ಸ್ಥಾನವನ್ನು ಕೂಡ ಅಲಂಕರಿಸಿದರು.

ಚಿತ್ರ : ಕಾಂತಾರ(ಕನ್ನಡ/ಸ್ಯಾಂಡಲ್ವುಡ್)
ನಟ : ರಿಷಬ್ ಶೆಟ್ಟಿ

ಈ ವರ್ಷದಲ್ಲಿ ಸೆ.30 ರಂದು ರಾಜ್ಯಾದ್ಯಂತ ಬಿಡುಗಡೆಗೊಂಡ ರಿಷಬ್ ಶೆಟ್ಟಿ (Rishab Shetty) ನಿರ್ದೇಶಿಸಿ, ನಟಿಸಿದ ಕಾಂತಾರ (kantara) ಸಿನಿಮಾ ಊಹೆಗೂ ಮೀರಿ, ಕನ್ನಡ ಚಿತ್ರರಂಗದಲ್ಲೇ ನೂತನ ದಾಖಲೆಯನ್ನು ನಿರ್ಮಿಸಿತು.

ತದನಂತರದಲ್ಲಿ ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು, ಮಲೆಯಾಳಂ, ತುಳು ಭಾಷೆಗಳಲ್ಲಿಯೂ ಸಹ ಈ ಚಿತ್ರ ಬಿಡುಗಡೆಯಾಗಬೇಕು

ಎಂಬ ಆಗ್ರಹ ಕೇಳಿಬಂದ ಬೆನ್ನಲ್ಲೇ ಚಿತ್ರತಂಡ ಉಳಿದ ಪ್ರಮುಖ ಭಾಷೆಗಳಲ್ಲಿ ದೇಶಾದ್ಯಂತ ಬಿಡುಗಡೆಗೊಳಿಸಿತು.

ಇದಾದ ಬಳಿಕ ಕೇಳಿಬಂದ ಸುದ್ದಿ ಕೇವಲ ಗೆಲುವು, ಗೆಲುವಿನ ಮಂತ್ರ ಮಾತ್ರ ಎಂಬುದು ಕನ್ನಡ ಚಿತ್ರರಂಗಕ್ಕೆ ಒಲಿದ ಸನ್ಮಾನ ಎಂದೇ ಹೇಳಬಹುದು.

ಕನ್ನಡ ಮಾತ್ರವಲ್ಲದೇ ಅನ್ಯ ಭಾಷೆಯ ಬಾಕ್ಸ್ ಆಫೀಸ್ ನಲ್ಲಿ (Box office) ಅತ್ಯುತ್ತಮ ಕಲೆಕ್ಷನ್ ಕಂಡ ಕಾಂತಾರ, ಒಂದು ದಂತಕಥೆ ಎಂಬುದನ್ನು ಸಿನಿಪ್ರೇಕ್ಷಕರು ಸಾಬೀತು ಪಡಿಸಿದರು.

ಕಾಂತಾರ ಚಿತ್ರವನ್ನು ಗೆಲ್ಲಿಸುವುದರ ಜೊತೆಗೆ ರಿಷಬ್ ಶೆಟ್ಟಿ ನಟನೆ, ನಿರ್ದೇಶನವನ್ನು ಮೆಚ್ಚಿ ಉತ್ತುಂಗಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖರಾದರು.

ಪಂಚೆ ತೊಡುವ ನಾಯಕ ನಟ ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗವನ್ನು ಅನ್ಯ ಭಾಷೆಯ ಚಿತ್ರರಂಗದವರು ತಮ್ಮತ್ತ ತಿರುಗಿ ನೋಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದು ಕನ್ನಡಿಗರಿಗೆ, ಕನ್ನಡ ಭಾಷೆಗೆ, ಕನ್ನಡ ಚಿತ್ರರಂಗಕ್ಕೆ ಒಲಿದ ಗೆಲುವು ಎಂಬುದರಲ್ಲಿ ಕಿಂಚಿತ್ತು ಅನುಮಾನವೇ ಬೇಡ!

ಇದನ್ನೂ ನೋಡಿ : https://fb.watch/ho7wju_Ejk/ ರಿಯಾಲಿಟಿ ಚೆಕ್ ನಲ್ಲಿ ಬಯಲಾಯಿತು ಆಂಬ್ಯುಲೆನ್ಸ್ ಡ್ರೈವರ್ ನ ಅಜಾಗರೊಕತೆ!.

ಚಿತ್ರ : ವಿಕ್ರಮ್(ತಮಿಳು)
ನಾಯಕ : ಕಮಲ್ ಹಾಸನ್

ತಮಿಳು ಚಿತ್ರರಂಗದಲ್ಲಿ ಕಮಲ್ ಹಾಸನ್ (Kamal Hassan) ನಟಿಸಿದ ವಿಕ್ರಮ್ ಚಿತ್ರ ಮಾಡಿದ ‘ಕಮಾಲ್’ಗೆ (Kamal) ಚಿತ್ರ ರಸಿಕರು ನಿಬ್ಬೆರಗಾಗಿದ್ದಂತೂ ಅಕ್ಷರಶಃ ಸತ್ಯ.

ತಮಿಳು ಭಾಷೆಯಲ್ಲಿ ಬಿಡುಗಡೆಗೊಂಡ ವಿಕ್ರಮ್ (Vikram) ಸಿನಿಮಾವನ್ನು ಜನರು ಎಷ್ಟು ಮೆಚ್ಚಿಕೊಂಡರೋ, ಅದಕ್ಕೂ ಮೀರಿ ಮೆಚ್ಚಿ, ಸಂಭ್ರಮಿಸಿದ್ದು ಕಮಲ್ ಹಾಸನ್ ಅವರ ನಟನೆಯನ್ನು! ಕಮಲ್ ಹಾಸನ್ ಅವರ ಮುಖದಲ್ಲಿ ಸುಕ್ಕು ಮೂಡಿದರು,

ನಟನೆಯ ವಿಷಯದಲ್ಲಿ ಮಾತ್ರ ಒಂದಿಂಚು ಸುಕ್ಕು ಮೂಡದೇ ಇರುವುದು ಅಭಿಮಾನಿಗಳು ಹಾಗೂ ಸಿನಿಪ್ರೇಕ್ಷಕರಲ್ಲಿ ಇಂದಿಗೂ ಪ್ರಶ್ನಾರ್ಥಕವಾಗಿಯೇ ಉಳಿದಿದೆ.

ಬಾಕ್ಸ್ ಆಫೀಸ್ ನಲ್ಲಿ ವಿಕ್ರಮ್ ಸಿನಿಮಾ ಪ್ರಾರಂಭದಲ್ಲಿ ಮಾಡಿದ ಸದ್ದು ತದನಂತರದ ದಿನಗಳಲ್ಲಿ ಅಷ್ಟೇನೂ ಮಾಡಲಿಲ್ಲ.

ಆದರೂ, ವಿಕ್ರಂ ಚಿತ್ರದಲ್ಲಿ ಕಮಲ್ ಹಾಸನ್ ಚಿರ ಯುವಕನಂತೆ ಅಭಿನಯಿಸಿದ್ದು, ಸಿನಿಪ್ರೇಕ್ಷಕರಲ್ಲಿ ಇಂದಿಗೂ ಪದೇ ಪದೇ ಮಾತನಾಡುವ ಸಂಗತಿಯಾಗಿ ಉಳಿದಿರುವುದು ಅಚ್ಚರಿಯ ಸಂಗತಿಯೇ ಸರಿ!

ಚಿತ್ರ : ಕೆ.ಜಿ.ಎಫ್ 2(ಕನ್ನಡ)
ನಾಯಕ : ಯಶ್

2022ರ ಏಪ್ರಿಲ್ ತಿಂಗಳಲ್ಲಿ ದೇಶಾದ್ಯಂತ ಪ್ರಮುಖ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆ.ಜಿ.ಎಫ್ (KGF) 2 ಹಿಂದಿನ ಎಲ್ಲಾ ದಾಖಲೆಗಳನ್ನು ಪುಡಿ ಮಾಡಿ,

ತನ್ನದೇ ನೂತನ ದಾಖಲೆಯನ್ನು ಬರೆಯುವ ಮುಖೇನ ಇತಿಹಾಸ ನಿರ್ಮಿಸಿತು.

ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ಅನ್ಯ ಭಾಷೆಗಳ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ಬ್ಲಾಕ್ ಬಸ್ಟರ್ ಸಿನಿಮಾ.

ಬರೋಬ್ಬರಿ 1200 ಕೋಟಿ ಗಳಿಕೆ ಮಾಡುವ ಮೂಲಕ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಧೂಳಿಪಟ ಮಾಡಿದ ಏಕೈಕ ಚಿತ್ರ ಎಂಬ ಹೆಗ್ಗಳಿಕೆಗೆ ಕೆಜಿಎಫ್ 2 ಚಿತ್ರ ಪಾತ್ರವಾಯಿತು.

ಈ ಚಿತ್ರದ ಮೂಲಕ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯಕ್ಕೆ, ಖದರ್ ಲುಕ್, ಮಾಸ್ ಡೈಲಾಗ್ ಡೆಲಿವರಿಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದು,

ಇಂದಿಗೂ ಸಿನಿಪ್ರೇಕ್ಷಕರ ಸಿನಿ ಚರ್ಚೆಯಲ್ಲಿ ಈ ವಿಷಯ ಪ್ರಮುಖವಾಗಿದೆ. ಸದ್ಯ 2022 ರಲ್ಲಿ ಸಿನಿ ಇತಿಹಾಸದಲ್ಲಿ ಕೆಜಿಎಫ್ 2 ಬರೆದ ದಾಖಲೆ ಕನ್ನಡ ಚಿತ್ರರಂಗಕ್ಕೆ ಒಂದು ಮೈಲಿಗಲ್ಲು ನೀಡಿದೆ.

ಚಿತ್ರ : RRR
ನಾಯಕ : ಜೂ.ಎನ್.ಟಿ.ಆರ್, ರಾಮ್ ಚರಣ್ ತೇಜಾ

2022 ರಲ್ಲಿ ಮಾರ್ಚ್ 24 ರಂದು ದೇಶಾದ್ಯಂತ ಏಕಕಾಲಕ್ಕೆ ಬಿಡುಗಡೆಗೊಂಡ RRR (RRR) ಸಿನಿಮಾ, ಮೊದಲ ಎರಡು ದಿನಗಳಲ್ಲೇ ಬಾಕ್ಸ್ ಆಫೀಸ್ ನಲ್ಲಿ ಊಹೆಗೂ ಮೀರಿದ ಕಲೆಕ್ಷನ್ ಮಾಡಿತು.

ಟಾಲಿವುಡ್ ಸೂಪರ್ ಸ್ಟಾರ್ ನಟರಾದ ರಾಮ್ ಚರಣ್ ತೇಜಾ (Ram Charan Teja) ಹಾಗೂ ಜೂ. ಎನ್.ಟಿ.ಆರ್ (Junior NTR) ಜೋಡಿ ಮಾಡಿದ ಮೋಡಿಗೆ ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ಹುಚ್ಚೆದ್ದು ಕುಣಿದು ಸಂಭ್ರಮಿಸಿದ ಕ್ಷಣ ಇಂದಿಗೂ ಚಿತ್ರತಂಡಕ್ಕೆ ಅಮೋಘ ನೆನಪು ಎಂದೇ ಹೇಳಬಹುದು.

RRR ಚಿತ್ರದಲ್ಲಿ ಬಳಸಿದ ಗ್ರಾಫಿಕ್ಸ್, ಸಾಹಸ ದೃಶ್ಯಗಳು, ಕಲಾವಿದರ ಅದ್ಭುತ ನಟನೆ ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣ. ಈ ಒಂದು ಚಿತ್ರ 200 ಕೋಟಿ ಕಲೆಕ್ಷನ್ ಕಂಡು ಭಾರತೀಯ ಚಿತ್ರರಂಗದಲ್ಲಿ ದಾಖಲೆಗಳ ಪುಟಕ್ಕೆ ಸೇರಿತು.

ಇದನ್ನೂ ನೋಡಿ : https://fb.watch/ho7wju_Ejk/ ರಿಯಾಲಿಟಿ ಚೆಕ್ ನಲ್ಲಿ ಬಯಲಾಯಿತು ಆಂಬ್ಯುಲೆನ್ಸ್ ಡ್ರೈವರ್ ನ ಅಜಾಗರೊಕತೆ!.

ಚಿತ್ರ : ಪೊನ್ನಿ ಸೆಲ್ವನ್( ತಮಿಳು)
ನಾಯಕ : ಕಾರ್ತಿ

2022ರ ಸೆಪ್ಟೆಂಬರ್ 30 ರಂದು ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಗೊಂಡ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರದ ದಿನದಂದೇ

ನಿರ್ದೇಶಕ ಮಣಿರತ್ನಂ (Mani Ratnam) ಅವರ ಗರಡಿಯಲ್ಲಿ ತಯಾರಾದ ಪೊನ್ನಿ ಸೆಲ್ವಂ (Ponniyin Selvan) ಭಾಗ ೧ ಸಿನಿಮಾ ಕೂಡ ಏಕಕಾಲಕ್ಕೆ ಬಿಡುಗಡೆಗೊಂಡಿತು.

ಪೈಪೋಟಿಗಳ ನಡುವೆ ಬಿಡುಗಡೆಗೊಂಡ ಈ ಸಿನಿಮಾ ಮೊದ ಮೊದಲು ಉತ್ತಮ ಕಲೆಕ್ಷನ್ ಕಾಣದೇ ಹೋದರೂ ತದನಂತರ ಉತ್ತಮ ಪ್ರದರ್ಶನದ ಜೊತೆಗೆ ಉತ್ತಮ ಕಲೆಕ್ಷನ್ ಕಂಡು ಟಾಪ್ ಸಿನಿ ಪಟ್ಟಿಯಲ್ಲಿ ಸ್ಥಾನ ಪಡೆದು ನಿರ್ದೇಶಕರಿಗೆ ಹಾಗೂ ಚಿತ್ರತಂಡಕ್ಕೆ ಗೆಲುವು ತಂದುಕೊಟ್ಟಿತು.

ಚಿತ್ರ : 777 ಚಾರ್ಲಿ
ನಾಯಕ : ರಕ್ಷಿತ್ ಶೆಟ್ಟಿ

2022 ವರ್ಷ ಮಂಗಳೂರಿನ ಶೆಟ್ರಿಗೆ ಅದ್ದೂರಿ ದಿನಗಳು, ಅದೃಷ್ಟದ ವರ್ಷ ಎಂದೇ ಹೇಳಬಹುದು. ವರ್ಷದ ಪ್ರಾರಂಭದಲ್ಲಿ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ (Charlie 777) ವಿಭಿನ್ನವಾಗಿ ಸಿನಿಪ್ರೇಕ್ಷಕರ ಮನ ಗೆದ್ದರೇ,

ವರ್ಷದ ಅಂತ್ಯದ ವೇಳೆಗೆ ರಿಷಬ್ ಶೆಟ್ಟಿ ನಟಿಸಿದ ಕಾಂತಾರ ದಾಖಲೆಯನ್ನು ನಿರ್ಮಿಸಿತು.

ಈ ಪೈಕಿ ಸದಾ ವಿಭಿನ್ನ ಕಥಾಹಂದರವನ್ನು ಹೆಕ್ಕಿ ಸಿನಿಮಾ ರೂಪಿಸುವ ರಕ್ಷಿತ್ ಶೆಟ್ಟಿ (Rakshit shetty), ಕಿರಣ್ ರಾಜ್ (Kiran Raj) ರಚಿಸಿದ ಕಥೆಯಲ್ಲಿ ಸರಳವಾಗಿ ನಟಿಸಿ, ಜನರ ಮೆಚ್ಚುಗೆಗೆ ಪಾತ್ರರಾದರು.

ಮೂಕ ಪ್ರಾಣಿ ಶ್ವಾನವನ್ನು ಬಳಸಿಕೊಂಡು ಕೂಡ ಸಿನಿಮಾ ತಯಾರು ಮಾಡಬಹುದು.

ಮನುಷ್ಯ-ಪ್ರಾಣಿಗಳು ನಡುವೆ ಇರುವ ಸಂಬಂಧ, ಭಾವನೆಗಳು ಹೇಗಿರುತ್ತದೆ ಎಂಬುದನ್ನು ಮನಮುಟ್ಟುವಂತೆ ಚಿತ್ರಿಕರಿಸಿದ ಪರಿಗೆ ಸಿನಿಮಾ ಯಶಸ್ಸಿನ ಹಾದಿ ತಲುಪಿತು.

ರಕ್ಷಿತ್ ಶೆಟ್ಟಿ ಅವರ 777 ಚಾರ್ಲಿ ಚಿತ್ರವು ಉತ್ತಮ ದಾಖಲೆಯನ್ನು ಪಡೆದು, ಟಾಪ್ 10ರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ.

ಇದನ್ನೂ ಓದಿ : https://vijayatimes.com/vasanthi-nalidaga-kannada-movie/

ಚಿತ್ರ : ಜನ ಗಣ ಮನ(ಹಿಂದಿ/ಬಾಲಿವುಡ್)
ನಾಯಕ : ಪೃಥ್ವಿರಾಜ್

ಚಿತ್ರರಸಿಕರ ಪಾಲಿಗೆ ಹಿಂದಿ ಭಾಷೆಯಲ್ಲಿ ಬಿಡುಗಡೆಗೊಂಡ ಜನ ಗಣ ಮನ (Jana Gana Mana) ಚಿತ್ರವು ಸಾಕಷ್ಟು ರೋಚಕ ಹಾಗೂ ಅರ್ಥಪೂರ್ಣ ಎಂಬುದನ್ನು ಅದ್ಭುತ ಕಥಾಹಂದರದ ಮುಖೇನ ತಿಳಿಸಿಕೊಟ್ಟಿತು.

ಚಿತ್ರದಲ್ಲಿ ನಾಯಕ ನಟನಾಗಿ ಮಿಂಚಿದ ಪೃಥ್ವಿರಾಜ್ (Prithviraj Sukumaran), ಈ ವರ್ಷದಲ್ಲಿ ಬರೋಬ್ಬರಿ 5 ಸಿನಿಮಾಗಳಲ್ಲಿ ನಟಿಸಿದರು. 5 ಸಿನಿಮಾಗಳ ಪೈಕಿ 2 ಸಿನಿಮಾಗಳು ಮಾತ್ರ ಯಶಸ್ವಿಯಾಯಿತು.

ಇದನ್ನೂ ನೋಡಿ : https://fb.watch/hoaBzjyjrr/ ಭಯಾನಕ ಛಾಪಾ ಹಗರಣ ಬಯಲು !

ಜನ ಗಣ ಮನ ಚಿತ್ರ ಒಳ್ಳೆ ಕಲೆಕ್ಷನ್ ಕಾಣುವುದರ ಜೊತೆಗೆ ನಾಯಕ ಪೃಥ್ವಿರಾಜ್ ಅವರ ಸಿನಿ ಭವಿಷ್ಯಕ್ಕೆ ಭದ್ರ ಅಡಿಪಾಯ ಒದಗಿಸಿತು ಎಂದು ಬಾಲಿವುಡ್ ಚಿತ್ರರಂಗದವರು ಮಾತನಾಡಿಕೊಳ್ಳುತ್ತಾರೆ.

ಈ ಮೂಲಕ ಮತ್ತಷ್ಟು ಒಳ್ಳೆ ಕಥಾಹಂದರದ ಸಿನಿಮಾಗಳನ್ನು ರೂಪಿಸಬೇಕು ಎಂಬ ಯೋಜನೆಗಳು ಬಾಲಿವುಡ್ ಅಂಗಳದಲ್ಲಿ ಚರ್ಚೆಯಾಗುವ ವಿಷಯವೇ ಸರಿ.

Exit mobile version