ಕನಿಷ್ಠ 7 ಭಾರತೀಯ ಕೆಮ್ಮು ಸಿರಪ್ ಗಳು ವಿಷಕಾರಿಯಾಗಿವೆ : ವಿಶ್ವ ಆರೋಗ್ಯ ಸಂಸ್ಥೆ

New Delhi: ವಿಶ್ವ ಆರೋಗ್ಯ ಸಂಸ್ಥೆಯು (Indian cough syrups poisonous) ಇತ್ತೀಚಿನ ವರದಿಗಳಲ್ಲಿ ಭಾರತದಲ್ಲಿ ತಯಾರಾಗಿರುವ ಕನಿಷ್ಠ ಏಳು ಕೆಮ್ಮು ಸಿರಪ್ ಗಳು ವಿಷಕಾರಿಯಾಗಿವೆ ಎಂದು

ಬೆಟ್ಟು ಮಾಡಿದೆ. 300ಕ್ಕೂ ಅಧಿಕ ಸಾವಿಗೆ ಈ ಸಿರಪ್ ಗಳು ಕಾರಣವಾಗಿವೆ ಎಂಬ ಆರೋಪಗಳು ಬಂದಿತ್ತು. ಈ ಹಿನ್ನೆಲೆಯಲ್ಲಿ ಆ ಔಷಧಿಗಳ ಬಗ್ಗೆ ತನಿಖೆ ನಡೆಸಲಾಗಿತ್ತು. ಈ ತನಿಖೆಯಲ್ಲಿ ಕನಿಷ್ಠ ಏಳು

ಕೆಮ್ಮು ಸಿರಪ್ ಗಳು ವಿಷಕಾರಿಯಾಗಿವೆ ಎಂದು ಇದೀಗ ನಿರ್ಣಯಕ್ಕೆ (Indian cough syrups poisonous) ಬಂದಿದೆ.

ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರ ಕ್ರಿಶ್ಚಿಯನ್ ಲಿಂಡ್ಡೆಯರ್ ಹೇಳಿರುವ ಪ್ರಕಾರ ಭಾರತ (India) ಮತ್ತು ಇಂಡೋನೇಶ್ಯವು (Indonesia) ಔಷಧಿಗಳನ್ನು ತಯಾರಿಸುವ ಒಟ್ಟು 15 ಕಂಪೆನಿಗಳು ತಯಾರಿಸಿರುವ

20 ಔಷಧಿಗಳನ್ನು ವಿಷಕಾರಿ ಎಂಬುದಾಗಿ ಗುರುತಿಸಲಾಗಿದೆ ಎಂದು ಹೇಳಿದ್ದರೆ.

ಈ 20 ಔಷಧಿಗಳಲ್ಲಿ ಪ್ಯಾರಾಸಿಟಮಾಲ್ (Paracetamol), ಕೆಮ್ಮು ಸಿರಪ್ ಗಳು, ಮತ್ತು ವಿಟಮಿನ್ ಗಳು (Vitamin) ಸೇರಿವೆ. ಒಟ್ಟು 20 ಔಷಧಿಗಳಲ್ಲಿ ಸಿರಪ್ ಗಳ ಸಂಖ್ಯೆ 15 ಆಗಿದೆ.

ಭಾರತದ ಪಂಜಾಬ್ ನ(Punjab) ಕ್ಯೂಪಿ ಫಾರ್ಮಾಕಮ್, ಹರ್ಯಾಣದ ಮೇಡನ್ ಫಾರ್ಮಾಲ್ಯೂಟಿಕಲ್ಸ್, ಮತ್ತು ನೋಯ್ಡಾದ ಮರಿಯೊನ್ ಬಯೋಟೆಕ್ ಕಂಪೆನಿಗಳು ಈ ಪೈಕಿ ಏಳು ಸಿರಪ್ ಗಳನ್ನು ತಯಾರಿಸಿವೆ.

ಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆಯು ವಿಷಯುಕ್ತ ಕೆಮ್ಮು ಸಿರಪ್ ಗಳಿಂದ ಉದ್ಭವಿಸಿರುವ ಜಾಗತಿಕ ಬೆದರಿಕೆ ಬಗ್ಗೆ ತಾನು ತನಿಖೆ ನಡೆಸುತ್ತಿರುವುದಾಗಿ ಹೇಳಿತ್ತು. ಕಳೆದ ವರ್ಷದ ಅಕ್ಟೋಬರ್ ನಲ್ಲಿ ಪಶ್ಚಿಮ

ಆಫ್ರಿಕಾದ (West Africa) ದೇಶ ಗಾಂಬಿಯದಲ್ಲಿ ಕೆಮ್ಮು ಸಿರಪ್ ಗಳನ್ನು ಸೇವಿಸಿ 66 ಮಂದಿ ಮೃತಪಟ್ಟಿದ್ದರು. ಈ ಕೆಮ್ಮು ಸಿರಪ್ ಗಳನ್ನು ಹರ್ಯಾಣದ (Haryana) ಮೇಡನ್ ಫಾರ್ಮಾಲ್ಯೂಟಿಕಲ್ಸ್

ತಯಾರಿಸಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿತ್ತು.

ಇದನ್ನೂ ಓದಿ : ಇಂದಿರಾ ಕ್ಯಾಂಟೀನ್‌ ಊಟದ ಮೆನು ಬದಲಾವಣೆ : ಹೊಸ ಸೇರ್ಪಡೆ ಪಟ್ಟಿ ಇಲ್ಲಿದೆ ನೋಡಿ

ಬಳಿಕ ಕಳೆದ ಡಿಸೆಂಬರ್ ನಲ್ಲಿ ಉದ್ಭಕಿಸ್ತಾನದಲ್ಲಿ 18 ಮಕ್ಕಳು ಕೆಮ್ಮು ಸಿರಪ್ ಸೇವಿಸಿ ಪ್ರಾಣ ಕಳೆದುಕೊಂಡಿದ್ದರು.ಈ ಕೆಮ್ಮು ಸಿರಪ್ ಗಳನ್ನು ನೋಯ್ಡಾದ (Noida) ಮರಿಯೊನ್ ಬಯೋಟೆಕ್ ತಯಾರಿಸಿತ್ತು

ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿತ್ತು. ಇನ್ನು ಎಪ್ರಿಲ್ ನಲ್ಲಿವಿಷಯುಕ್ತ ಕೆಮ್ಮು ಸಿರಪ್ ಗಳನ್ನು ಮಾರ್ಶಲ್ ಐಲ್ಯಾಂಡ್ಸ್ ಮತ್ತು ಮೈಕ್ರೋನೇಶ್ಯಕ್ಕೆ ಭಾರತೀಯ ಔಷಧ ತಯಾರಿಕಾ ಸಂಸ್ಥೆಯು

ರಫ್ತು ಮಾಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿತ್ತು.

ರಶ್ಮಿತಾ ಅನೀಶ್

Exit mobile version