ಬೆಂಗಳೂರಿನ ಅಂತರರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ.! ಹೌದು, ಕೆಂಪೇಗೌಡ ಏರ್ಪೋರ್ಟ್ನಲ್ಲಿ ಟೇಕ್ ಆಫ್ ವೇಳೆ ಎರಡು ಇಂಡಿಗೋ ಏರ್ ವಿಮಾನಗಳು ಎದುರು-ಬದುರು ದಿಕ್ಕಿನಲ್ಲಿ ಮುಖಮುಖಿಯಾಗಿ ಬರಲು ಆರಂಭಿಸಿವೆ.! ಇದನ್ನು ಅರಿತ ಪೈಲೆಟ್ಗಳು ಕೂಡಲೇ ತಮ್ಮ ವಿಮಾನಗಳನ್ನು ನಿಲ್ಲಿಸಿದ್ದಾರೆ.
ಕೂದಲೆಳೆ ಅಂತರದಲ್ಲಿ ಭಾರೀ ಅಪಘಾತದಿಂದ ಪಾರಾಗಿವೆ. ಇನ್ನು, ಕೊಲ್ಕತ್ತಾ ಮತ್ತು ಭುವನೇಶ್ವರಕ್ಕೆ ತೆರಳುತ್ತಿದ್ದ ೬ಇ೪೫೫ ಮತ್ತು ೬ಇ೨೪೬ ಸಂಖ್ಯೆಯ ಇಂಡಿಗೋ ವಿಮಾನಗಳು ಇವಾಗಿದ್ದವು. ಎರಡೂ ವಿಮಾನಗಳಲ್ಲಿ ೪೦೦ ಹೆಚ್ಚು ಪ್ರಯಾಣಿಕರು ಇದ್ದರು.
ಸದ್ಯ ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದ್ದು, ಎರಡು ವಿಮಾನಗಳು ಮುಖಾಮುಖಿ ಆಗುತ್ತಿರೋ ಸಂದರ್ಭದಲ್ಲಿ ಬೇರೆ ಯಾವ ವಿಮಾನಗಳ ಲ್ಯಾಂಡಿಂಗ್ ಇರಲಿಲ್ಲ. ಹೀಗಾಗಿ ಸ್ವಲ್ಪದರಲ್ಲೇ ವಿಮಾನಗಳು ಬಚಾವ್ ಆಗಿವೆ ಎಂದು ಹಿರಿಯ ಅಧಿಕಾರಿಗಳು ಸರಳವಾಗಿ ತಿಳಿಸುವ ಮುಖೇನ ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ.