ನೋಡಿದ್ದೀರಾ ‘ಚಿನ್ನದ ಹುಲಿ’? ; ಈ ಗೋಲ್ಡನ್ ಟೈಗರ್ ಬಗ್ಗೆ ಮಾಹಿತಿ ಇಲ್ಲಿದೆ ಓದಿ

Golden

ಇಡೀ ವಿಶ್ವದ ಕೇವಲ 13 ದೇಶಗಳಲ್ಲಿ ಮಾತ್ರವೇ ಹುಲಿ(Info about Golden Tiger of india) ಸಂತತಿ ಇದೆ ಎನ್ನುವುದು ಆಶ್ಚರ್ಯಕರ ಸಂಗತಿ.

ಅದರಲ್ಲೂ ಭಾರತ(India) ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ದೇಶವಾಗಿದೆ. ವಿಶ್ವದ ಹುಲಿ ಜನಸಂಖ್ಯೆಯ 75% ಹುಲಿಗಳನ್ನು ಭಾರತದಲ್ಲಿ ಕಾಣಬಹುದು.

ಆದರೆ ಈ ಹುಲಿಗಳ ಸಂರಕ್ಷಣೆಗೆ ಸರಕಾರ (Info about Golden Tiger of india)ಎಷ್ಟೇ ಕ್ರಮಗಳನ್ನು ಕೈಗೊಂಡರೂ ದೇಶದಲ್ಲಿ ಹುಲಿಗಳ ಸಾವಿನ ಸಂಖ್ಯೆ ಕಡಿಮೆಯಾಗುತ್ತಿಲ್ಲ ಎಂದು ಕೇಂದ್ರ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿಅಂಶಗಳು ಮತ್ತೊಮ್ಮೆ ಸ್ಪಷ್ಟಪಡಿಸಿವೆ.

ದೇಶದಲ್ಲಿ ಅತಿ ಹೆಚ್ಚು ಹುಲಿಗಳಿರುವ ರಾಜ್ಯಗಳ ಪೈಕಿ ಮಧ್ಯಪ್ರದೇಶವು 526 ಹುಲಿಗಳನ್ನು ಹೊಂದಿದ್ದರೆ, ಕರ್ನಾಟಕದಲ್ಲಿ 524 ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ಹುಲಿ ಸಂತತಿಯಲ್ಲಿಯೇ ಅತೀ ಅಪರೂಪವಾಗಿರುವ ‘ಚಿನ್ನದ ಹುಲಿ’ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿದೆ.

https://vijayatimes.com/state-congress-tweets-against-bc-nagesh/

ಇದರ ಚಿತ್ರವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿಯೊಬ್ಬರು ಹಂಚಿಕೊಂಡಿದ್ದಾರೆ. ಈ ಉದ್ಯಾನದಲ್ಲಿ ಮೂರು ಹುಲಿಗಳು ಚಿನ್ನದ ಬಣ್ಣದಿಂದ ಕೂಡಿರುವುದು ಕಂಡುಬಂದಿದೆ. ಆದ್ರೆ, ಚಿನ್ನದ ಬಣ್ಣದ ಹುಲಿ ಕಾಣಿಸಿರುವುದು ಸಂಭ್ರಮದ ವಿಚಾರ ಅಲ್ಲ, ಇದು ಹುಲಿ ಸಂತತಿಯ ಭವಿಷ್ಯ ಮಸುಕಾಗಿದೆ ಎಂಬುದರ ಸಂಕೇತ ಎಂಬುದು ಅಧಿಕಾರಿಗಳ ಅಭಿಪ್ರಾಯ. 

ಏಕೆಂದರೆ, ಕಾಡಿನ ಹುಲಿಗಳ ಅಸಾಮಾನ್ಯ ಬಣ್ಣ ವಿರೂಪಕ್ಕೆ ಚಿನ್ನದ ಹುಲಿ ಒಂದು ಉದಾಹರಣೆ. ನಿಕಟ ಸಂಬಂಧಿ ಹುಲಿಗಳ ಮಿಲನದಿಂದಾದ ಸಂತಾನೋತ್ಪತ್ತಿಯಿಂದ ಹೀಗಾಗಿರಬಹುದು. ಹುಲಿಗಳ ಆವಾಸಸ್ಥಾನ ನಾಶ ಅಥವಾ ಪರಸ್ಪರ ಸಂಪರ್ಕ ಕಡಿತ ಇದಕ್ಕೆ ಕೆಲವು ಕಾರಣಗಳು. ಇರುವ ಸಂಖ್ಯೆಯಲ್ಲೇ ಸಂತಾನೋತ್ಪತ್ತಿ ನಡೆಯುವುದರಿಂದ ವಂಶವಾಹಿನಿಯಲ್ಲಿ ಈ ರೀತಿಯ ಬದಲಾವಣೆಗಳು ಕಂಡುಬರುತ್ತವೆ ಎಂದು ಕಾಜಿರಂಗ ಹುಲಿ ರಕ್ಷಿತಾರಣ್ಯದ ಸಂಶೋಧಕ ಅಧಿಕಾರಿ ರಾಬಿನ್ ಶರ್ಮಾ ತಿಳಿಸಿದ್ದಾರೆ.

ಹೀಗೆ ನಿಕಟ ಸಂಬಂಧದಲ್ಲಿಯೇ ಹೆಚ್ಚಿನ ಸಂತಾನೋತ್ಪತ್ತಿ ನಡೆಯುತ್ತಿರುವುದು ಅರಣ್ಯದಲ್ಲಿ ಹುಲಿಯ ಸಂತಾನ ಕಡಿಮೆಯಾಗುತ್ತಿದೆ ಎಂಬುದರ ಸೂಚನೆ. ಹಾಗಾಗಿ ಇದು ಕಳವಳಕಾರಿ ಎಂದು ಅವರು ಹೇಳಿದ್ದಾರೆ. ಹುಲಿಯ ಈ ಬಣ್ಣ ಮುಂದಿನ ಸಂತಾನಕ್ಕೆ ವರ್ಗಾವಣೆಯಾಗುತ್ತದೆಯೋ, ಇಲ್ಲವೋ ಎಂಬ ಬಗ್ಗೆ ಸಂಶೋಧನೆ ಆಗಬೇಕಿದೆ ಎಂದು ವನ್ಯಜೀವಿ ಜೀವಶಾಸ್ತ್ರಜ್ಞ ಕಮಲ್ ಆಜಾದ್ ಅಭಿಪ್ರಾಯಪಟ್ಟಿದ್ದಾರೆ. ಈ ಹುಲಿಗಳು, ಹಳದಿ ಮಿಶ್ರಿತ ಚರ್ಮ, ಕಪ್ಪು ಪಟ್ಟೆಗಳು, ಹೊಟ್ಟೆಯ ಭಾಗದಲ್ಲಿ ಬಿಳಿ ಪಟ್ಟೆಗಳನ್ನು ಹೊಂದಿರುತ್ತವೆ.

2014ರಲ್ಲಿ ಮೊದಲ ಬಾರಿಗೆ ಕ್ಯಾಮೆರಾದಲ್ಲಿ ಈ ರೀತಿಯ ಹುಲಿಗಳು ಸೆರೆಯಾಗಿದ್ದವು. ಸಾಮಾನ್ಯವಾಗಿ ಪ್ರತೀ ವರ್ಷ ಇವು ಕ್ಯಾಮೆರಾ ಕಣ್ಣಿಗೆ ಸಿಗುತ್ತವೆ ಎಂದು ವರದಿ ಹೇಳುತ್ತದೆ.
Exit mobile version