ನದಿಗಳ ಉಗಮ ತಾಣ ಕಾಡುಗಳು ; ನದಿ, ಕಾಡಿನ ಮಹತ್ವ ತಿಳಿಸಿದ `ಪರಿಸರ ಪರಿವಾರ’

international

ಇಂದು ಮಂಡ್ಯ(Mandya) ಕಬ್ಬಿನ ಗದ್ದೆಯ ಹಸಿರಿನ ಸಿರಿಯಿಂದ ನಳನಳಿಸುತ್ತಿದೆ ಎಂದರೆ, ಬೆಂಗಳೂರು(Bengaluru) ಸಿಲಿಕಾನ್ ವ್ಯಾಲಿ ಎಂದು ಹೆಸರಿಗಳಿಸಿ ವಿಶ್ವದ ಭೂಪಟದಲ್ಲಿ ವಾಣಿಜ್ಯ ನಗರಿಯಾಗಿ ಬೆಳೆಯುವಲ್ಲಿ, ದೂರದ ಕೊಡಗಿನಲ್ಲಿನ ಕಾಡಿನಲ್ಲಿ(Forest) ಹುಟ್ಟುವ ಕಾವೇರಿ(Cauvery), ಹಾಗೆಯೇ ಪಶ್ಚಿಮ ಘಟ್ಟಗಳ(Western Ghats) ಸಹಜ ಲಾಡುಗಳಲ್ಲಿ ಉಗಮವಾಗುವ ಕಬಿನಿ(kabini), ಹಾರಂಗಿ(Harangi), ಲಕ್ಷ್ಮಣತೀರ್ಥ(Lakshmana Theertha), ಹೇಮಾವತಿಯಂತಹ ಉಪನದಿಗಳಿಂದ ಭರ್ತಿಯಾಗುವ ಕೆ.ಆರ್.ಎಸ್(KRS) ಜಲಾಶಯದ ನೀರಿನ ಸೌಲಭ್ಯ ಅತ್ಯಂತ ಮಹತ್ವದ ಪಾತ್ರವಹಿಸಿದೆ.

ಉತ್ತರದ ಬಯಲುಸೀಮೆಯ ಬಿಸಿಲಿನ ಜಳದಲ್ಲೂ ಗಂಗಾವತಿ ಕರ್ನಾಟಕದ ‘ಭತ್ತದ ಕಣಜ’ ಎಂದು ಹೆಸರುಗಳಿಸಿದೆ. ಅದಕ್ಕೆ ಕಾರಣ ದೂರದ ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣ ಕಾಡಿನಲ್ಲಿ ಹುಟ್ಟುವ ತುಂಗಭದ್ರಾ ನದಿ. ಇನ್ನು ಬೀದರ್ ನಿಂದ ಚಾಮರಾಜ ನಗರದವರೆಗೆ ಪ್ರತಿ ಹಳ್ಳಿ ಹಾಗೂ ಮಹಾನಗರದವರೆಗಿನ ಜನರ ಜೀವಜಲ ಕುಡಿಯುವ ನೀರಿನ ಮೂಲ ವಿವಿಧ ನದಿ-ತೊರೆಗಳು, ಅವುಗಳಿಂದ ವೃದ್ಧಿಯಾಗಿರುವ ಅಂತರ್ಜಲ. ನಮ್ಮ ರಾಜ್ಯದ ಕೃಷಿ, ಕೈಗಾರಿಕೆ ಬೆಳವಣಿಗೆ, ಜನರ ಅತಿಮುಖ್ಯ ಮೂಲಭೂತ ಅಗತ್ಯವಾದ ಕುಡಿಯುವ ನೀರಿನ ಅಗತ್ಯ ನಿವಾರಣೆಯಲ್ಲಿ ನದಿಗಳು ಅತಿಮುಖ್ಯ ಪಾತ್ರವಹಿಸುತ್ತವೆ.

ಹೀಗಾಗಿ ನಾವು ರೈತಪರ, ಕೈಗಾರಿಕಾ ಬೆಳವಣಿಗೆ ಪರ ಎಂದರೆ ಮೊದಲು ನದಿಗಳಿಗೆ ಮೂಲವಾದ ಸಹಜ ಕಾಡುಗಳ ಪರ ಇರಬೇಕಾಗುತ್ತದೆ. ಪ್ರತಿಯೊಂದು ನದಿಗಳ ಉಗಮತಾಣ ಅದು ಅರಣ್ಯ ಮಾತ್ರ. ಅರಣ್ಯ ಸಂರಕ್ಷಣೆ, ಅರಣ್ಯಗಳ‌ ಸಮತೋಲನಕ್ಕೆ ಮೂಲವಾದ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಧ್ವನಿ ಎತ್ತದೆ, ಅವುಗಳ‌ ನಾಶದ ಬಗ್ಗೆ ಜಾಣಕುರುಡು ತೋರುತ್ತಾ, ಕೇವಲ ಆರಾಮದಾಯಕದಂತಹ ಕಸ ಎತ್ತುವುದು, ಹೊರಗೆ ನಾಲ್ಕು ಗಿಡ ನೆಡುವುದಕ್ಕೆ ನಮ್ಮ ನದಿಗಳ ಉಳಿವಿನ ಕಾಳಜಿ ಸೀಮಿತವಾದರೆ ಅದರಿಂದ ನದಿಗಳ ಉಳಿವಿಗೆ, ಪುನರುತ್ಥಾನಕ್ಕೆ ಬೇಕಾದ ಮೂಲಭೂತ ಕಾರ್ಯ ಸಾಧಿತಲಾಗಲಾರದು.

Exit mobile version