ಒಂದು ದಿನಕ್ಕೆ ಸುಮಾರು 2000 ಮೊಟ್ಟೆಯಿಡುವ ರಾಣಿ ಜೇನಿನ ಜೀವನವೇ ವಿಸ್ಮಯಗಳ ಗೂಡು!

Honey Bee

ಜೇನು(Honey Bee) ಸವಿಯದ ಮನುಷ್ಯನಿಲ್ಲ, ನಮ್ಮ ಆಯುರ್ವೇದ(Ayurveda) ಪಂಡಿತರಿಗಂತೂ ಮೂಲಿಕೆಗಳ ಜೊತೆ ತೇಯ್ದು ಕೊಡಲು ಜೇನು ಬೇಕೇಬೇಕು. ಜೇನು ನೋಣ ನೋಡಲು ಸಣ್ಣ ಜೀವಿ, ಆದರೆ ಅದು ಸಂಘಜೀವಿಯಾಗಿ ಕೆಲಸ ಮಾಡುತ್ತದೆ. ಜೇನು ನೊಣ ಬೇರೆ ಕೀಟಗಳಿಗಿಂತ ವಿಭಿನ್ನ. ಹೂಗಳ ಮಕರಂದ ಹೀರುವ ಕೆಲಸ ಮಾಡುವ ಇವು ರೋಮಗಳಿಂದ ಮಕರಂದ ಹೊತ್ತೊಯ್ಯುತ್ತವೆ. ಜೇನು ಹುಳಕ್ಕೆ ಮೂರು ಜೋಡಿಯ ಕಾಲುಗಳಿವೆ, ಕೊನೆಯ ಕಾಲುಗಳಲ್ಲಿ ಪರಾಗ ಬುಟ್ಟಿ ಇರುತ್ತದೆ. ಬೇರೆ ಕೀಟಗಳಲ್ಲಿ ಇದು ಇರುವುದಿಲ್ಲ ಎನ್ನುವುದು ವಿಶೇಷ.


ಇನ್ನು, ಫಲೋತ್ಪಾದಕ ಮೊಟ್ಟೆಗಳಿಂದ ರಾಣಿ ಜೇನುನೊಣ ಅಥವಾ ಕೆಲಸಗಾರ ನೊಣಗಳು ಉತ್ಪತ್ತಿಯಾಗುತ್ತವೆ. ಫಲವತ್ತತೆಯಿಲ್ಲದ ಮೊಟ್ಟೆಗಳಿಂದ ಗಂಡುಜೇನು ನೊಣಗಳು ಉತ್ಪತ್ತಿಯಾಗುತ್ತವೆ. ಕುಟುಂಬಕ್ಕೆ ಅನುಗುಣವಾಗಿ ರಾಣಿ ನೊಣವು ಎರಡು ರೀತಿಯ ಮೊಟ್ಟೆಗಳನ್ನು ಇಡುತ್ತದೆ. ನಿತ್ಯ ಇಡುವ ಮೊಟ್ಟೆಗಳ ಸಂಖ್ಯೆಯು ಗೂಡಿನ ಸುತ್ತಮುತ್ತಲಿನಲ್ಲಿ ದೊರಕುವ ಜೇನುನೊಣಗಳ ಆಹಾರವನ್ನು ಅವಲಂಬಿಸಿರುತ್ತದೆ. ಮಕರಂದ ಮತ್ತು ಪರಾಗ ಹೆಚ್ಚಿನ ಪ್ರಮಾಣದಲ್ಲಿ ದೊರಕುತ್ತಿದ್ದರೆ ರಾಣಿಜೇನು ನೊಣವು ಹೆಚ್ಚಿನ ಸಂಖ್ಯೆಯಲ್ಲಿ ಮೊಟ್ಟೆಯನ್ನು ಇಡುವುದರಿಂದ ಮರಿ ಹುಳುಗಳ ಸಂಖ್ಯೆಯೂ ಹೆಚ್ಚಾಗಿರುತ್ತದೆ.

ಆಹಾರದ ಕೊರತೆ ಇರುವಂತ ಕಾಲದಲ್ಲಿ ಅತಿ ಕಡಿಮೆ ಮೊಟ್ಟೆ ಇಡುತ್ತವೆ ಅಥವಾ ಮರಿ ಬೆಳೆಸುವ ಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತವೆ. ಗಂಡು ಜೇನು ನೊಣಕ್ಕೆ ಇಡೀ ಕುಟುಂಬದಲ್ಲಿ ಹೆಚ್ಚಿನ ಜವಾಬ್ದಾರಿ ಇರುವುದಿಲ್ಲ. ಯಾವುದಾದರೂ ಹೊಸ ಕುಟುಂಬದಲ್ಲಿ ಹೊಸ ರಾಣಿ ಜೇನಿನ ಜತೆ ಮಿಲನ ನಡೆಸುತ್ತದೆ. ಇದು ಕೇವಲ ಎರಡರಿಂದ ಮೂರು ತಿಂಗಳು ಬದುಕಿರುತ್ತದೆ. ಕೆಲಸಗಾರ ಜೇನುನೊಣಗಳ ಸಂಖ್ಯೆ ಸುಮಾರು 100-150 ಇರುತ್ತದೆ. ಇವುಗಳನ್ನು ಬಂಜೆ ಹುಳುಗಳು ಎನ್ನುತ್ತಾರೆ, ಇದರ ಜೀವಿತಾವಧಿ ಒಂದೂವರೆಯಿಂದ ಎರಡು ತಿಂಗಳು ಮಾತ್ರ.


ಇನ್ನು ರಾಣಿಜೇನು ಜೇನು ಕುಟುಂಬಕ್ಕೆ ತಾಯಿ ಇದ್ದಂತೆ. ಇದರ ಕೆಲಸ ಕೇವಲ ಮೊಟ್ಟೆ ಇಡುವುದು, ಜೊತೆಗೆ ಇದು ಬೇರೆ ರಾಣಿ ನೊಣ ಬರಲು ಅವಕಾಶ ಮಾಡಿಕೊಡುವುದಿಲ್ಲ. ಇದು ಒಂದು ದಿನಕ್ಕೆ ಸುಮಾರು 200-2000 ಸಾವಿರ ಮೊಟ್ಟೆ ಇಡುತ್ತದೆ. ರಾಣಿ ಜೇನು ಕೆಲಸಗಾರ ಹುಳುಗಳಿಗೆ ಆಹಾರ ತಿನ್ನಿಸುತ್ತದೆ. ಕಣಗಳನ್ನು ಸ್ವಚ್ಚ ಮಾಡುತ್ತದೆ ನಂತರ ಮೊಟ್ಟೆ ಇಡುತ್ತದೆ. ರಾಣಿಜೇನು ಸುಮಾರು ಮೂರರಿಂದ ನಾಲ್ಕು ವರ್ಷ ಬದುಕುತ್ತದೆ. ರಾಣಿಜೇನು ತನ್ನ ಇಡೀ ಜೀವನಪರ್ಯಂತ ಫಲವತ್ತಾಗಿರುತ್ತದೆಯಾದರೂ, ವೃದ್ದಾಪ್ಯದಲ್ಲಿ ಉತ್ಪಾದಕತೆ ಕುಸಿಯುತ್ತದೆ.

ಈ ಸಂದರ್ಭಗಳಲ್ಲಿ ಅಥವಾ ರಾಣಿ ಜೇನುನೊಣ ಸತ್ತಾಗ ಕೆಲಸಗಾರ ಜೇನುನೊಣಗಳು ಹೊಸ ರಾಣಿಯನ್ನು ಹುಡುಕುವ ಕೆಲಸ ಮಾಡುತ್ತವೆ.

Exit mobile version