ಹಿಜಾಬ್ ತೆಗೆದ ಇಬ್ಬರು ಇರಾನ್ ನಟಿಯರ ಬಂಧನ ; ಮುಂದುವರಿದ ಪ್ರತಿಭಟನೆ!

Iran : ಇಸ್ಲಾಮಿಕ್ ರಿಪಬ್ಲಿಕ್‌ನಲ್ಲಿ ಹಿಜಾಬ್(Hijab) ವಿರೋಧಿಸುತ್ತಿರುವ ಇರಾನ್ ಮಹಿಳಾ(Iran Actress Detained) ಪ್ರತಿಭಟನಾಕಾರರ ಮೇಲೆ ಪೊಲೀಸರ ದಬ್ಬಾಳಿಕೆ ನಿರಂತರವಾಗಿ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಸದ್ಯ ಪೊಲೀಸರು ಇರಾನ್‌ನ ಇಬ್ಬರು ಪ್ರಮುಖ ನಟರಾದ ಹೆಂಗಮೆಹ್ ಘಜಿಯಾನಿ ಮತ್ತು ಕಟಯೋನ್ ರಿಯಾಹಿ ಪೊಲೀಸರು ಬಂಧಿಸಿದ್ದಾರೆ.

ಇರಾನ್‌ನ ಇಬ್ಬರು ಪ್ರಮುಖ ನಟರಾದ ಹೆಂಗಮೆಹ್ ಘಜಿಯಾನಿ ಮತ್ತು ಕಟಯೋನ್ ರಿಯಾಹಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಾಕಿದ್ದ ಪೋಸ್ಟ್ ‘ಪ್ರಚೋದನಕಾರಿ’ ಎಂದು ಆರೋಪಿಸಿ ಪೊಲೀಸರು ಬಂಧಿಸಿದ್ದಾರೆ.

ಹೆಂಗಮೆಹ್ ಘಜಿಯಾನಿ ಅವರು ಬಹುಶಃ ಇದು ನನ್ನ ಕೊನೆಯ ಪೋಸ್ಟ್ ಆಗಿರಬಹುದು.

ಈ ಕ್ಷಣದಿಂದ, ನನಗೆ ಏನೇ ಆಗಲಿ, ಯಾವಾಗಲೂ, ನನ್ನ ಕೊನೆಯ ಉಸಿರು ಇರುವವರೆಗೂ ನಾನು ಇರಾನ್ ಜನರೊಂದಿಗೆ ಇರುತ್ತೇನೆ ಎಂದು ತಿಳಿಯಿರಿ ಎಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ(Instagram) ಬರೆದುಕೊಂಡಿದ್ದಾರೆ.

52 ವರ್ಷದ ಚಲನಚಿತ್ರ ನಟಿ ಜನನಿಬಿಡ ರಸ್ತೆಯಲ್ಲಿ ಕಡ್ಡಾಯವಾಗಿದ್ದ ಹಿಜಾಬ್ ಅನ್ನು ತೆಗೆದುಹಾಕಿದ್ದಾರೆ. ಈ ಪ್ರಮುಖ ಕಾರಣದಿಂದಲೇ ನಾವು ನಟಿಯನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

https://youtu.be/ZWQ_rEdzKjQ ಈ ಅಂಡರ್ ಪಾಸ್ ಕಳಪೆ ಕಾಮಗಾರಿಯನ್ನು ನೀವೇ ನೋಡಿ!

ಪಿಂಗ್ ಸ್ಟ್ರೀಟ್‌ನಲ್ಲಿ ಚಿತ್ರೀಕರಿಸಿದ ವೀಡಿಯೊದಲ್ಲಿ, ನಟಿ ಘಜಿಯಾನಿ ಅವರು ಹಿಜಾಬ್ ತೆಗೆದು ಮಾತನಾಡದೆ ಕ್ಯಾಮೆರಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಆಧಾರವಾಗಿಟ್ಟುಕೊಂಡ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ನಂತರ, ಅದೇ ಕಾರಣಕ್ಕಾಗಿ ನಟಿ ಕಟಯೋನ್ ರಿಯಾಹಿಯನ್ನು ಅವರನ್ನು ಕೂಡ ಪೊಲೀಸರು ಬಂಧಿಸಲಾಗಿದೆ ಎಂದು ರಾಜ್ಯ ಮಾಧ್ಯಮ ವರದಿಗಳು ತಿಳಿಸಿವೆ.

ಮಹ್ಸಾ ಅಮಿನಿಯ(Mahsa Amini) ಅವರ ಸಾವಿನ ನಂತರ ಇರಾನ್‌ನಲ್ಲಿ ಪ್ರತಿಭಟನೆಗಳು ಹರಡಿತು ಮತ್ತು ಕಡ್ಡಾಯವಾದ ಹಿಜಾಬ್‌ಗೆ ವಿರೋಧಕ್ಕೆ ಅವರು ಒಗ್ಗಟ್ಟನ್ನು ವ್ಯಕ್ತಪಡಿಸಿದ್ದರು.

ಸೆಪ್ಟೆಂಬರ್‌ನಲ್ಲಿ ಇರಾನ್‌ನಲ್ಲಿ 22 ವರ್ಷದ ಮಹಿಳೆ ಮಹ್ಸಾ ಅಮಿನಿ ಸಾವಿನ ನಂತರ ತೀವ್ರ ಪ್ರತಿಭಟನೆ ಭುಗಿಲೆದ್ದಿತು.

ಇದನ್ನೂ ಓದಿ : https://vijayatimes.com/actor-chetan-justifies/

ಮಹಿಳೆಯರಿಗೆ ಇಸ್ಲಾಮಿಕ್ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ನೈತಿಕತೆಯ ಪೊಲೀಸರು ಟೆಹ್ರಾನ್‌ನಲ್ಲಿ ಬಂಧಿಸಿದ ಮೂರು ದಿನಗಳ ನಂತರ ಮಾಹ್ಸಾ ಅವರು ಪೊಲೀಸರಿಂದ ಸಾವನ್ನಪ್ಪಿದರು ಎಂದು ವರದಿಯಾಗಿತ್ತು.

ಇರಾನ್‌ನ ಕುರ್ದಿಶ್-ಜನಸಂಖ್ಯೆಯ ವಾಯುವ್ಯ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿರುವ ಪ್ರತಿಭಟನೆಗಳು ರಾಷ್ಟ್ರವ್ಯಾಪಿ 50ಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳಿಗೆ ಹರಡಿತು,

ಮಹ್ಸಾ ಅಮಿನಿಯ ಸಾವು ಇಸ್ಲಾಮಿಕ್ ರಿಪಬ್ಲಿಕ್‌ನಲ್ಲಿನ ಸ್ವಾತಂತ್ರ್ಯಗಳು ಮತ್ತು ನಿರ್ಬಂಧಗಳಿಂದ ತತ್ತರಿಸುತ್ತಿರುವ ಆರ್ಥಿಕತೆ ಸೇರಿದಂತೆ ಸಮಸ್ಯೆಗಳ ಮೇಲೆ ಕೋಪವನ್ನು ಹೊರಹಾಕಿತು.

ಪ್ರತಿಭಟನೆಗಳಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದಾರೆ, ತಮ್ಮ ಹಿಜಾಬ್ ಅನ್ನು ಬೀಸಾಡುವುದು ಮತ್ತು ಸುಡುವುದು,

ಇದನ್ನೂ ಓದಿ : https://vijayatimes.com/mysterious-well-of-england/

ಸಾರ್ವಜನಿಕವಾಗಿ ತಮ್ಮ ಕೂದಲನ್ನು ಕತ್ತರಿಸುವುದು ಈ ರೀತಿ ತಮಗೆ ಅನಿಸಿದಂತೆ ಪ್ರತಿಭಟನೆಯನ್ನು ತಾರಕಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ಓಸ್ಲೋ ಮೂಲದ ಗುಂಪು ಇರಾನ್ ಮಾನವ ಹಕ್ಕುಗಳ (IHR) ಪ್ರಕಾರ ಎರಡು ತಿಂಗಳ ಪ್ರತಿಭಟನೆಗಳಲ್ಲಿ 300 ಕ್ಕೂ ಹೆಚ್ಚು ಜನರನ್ನು ಭದ್ರತಾ ಪಡೆಗಳು ಹತ್ಯೆಗೈದಿದ್ದಾರೆ ಎನ್ನಲಾಗಿದೆ.

Exit mobile version