ಇಸ್ರೇಲ್ ಗಾಜಾ ಬಾಂಬ್ ದಾಳಿಯನ್ನು ಕೊನೆಗೊಳಿಸದಿದ್ದರೆ, ಯುದ್ಧವು ಇತರೆಡೆ ವಿಸ್ತರಣೆಯಾಗಬಹುದು – ಇರಾನ್

Tehran: ಇಸ್ರೇಲ್ (Israel) ಗಾಜಾಪಟ್ಟಿ ಮೇಲೆ ನಡೆಸುತ್ತಿರುವ ದಾಳಿಯನ್ನು ಹೀಗೆ ಮುಂದುವರೆಸಿದರೆ, ಈ ಯುದ್ದವು (Iran against on Israel) ಇಡೀ ಮಧ್ಯಪ್ರಾಚ್ಯದಾದ್ಯಂತ ವಿಸ್ತರಣೆಯಾಗಬಹುದು.

ಇತರ ದೇಶಗಳು ಯುದ್ದಕ್ಕಿಳಿಯುವ ಅವಕಾಶ ತೆರೆದುಕೊಳ್ಳಬಹುದು ಎಂದು ಇರಾನ್ ವಿದೇಶಾಂಗ ವ್ಯವಹಾರಗಳ ಸಚಿವ ಹುಸೇನ್ ಅಮಿರಾಬ್ದೊಲ್ಲಾಹಿಯಾನ್ ಹೇಳಿದ್ದಾರೆ.

ಇರಾನ್ನ ವಿದೇಶಾಂಗ ವ್ಯವಹಾರಗಳ ಸಚಿವ ಹುಸೇನ್ ಅಮಿರಾಬ್ದೊಲ್ಲಾಹಿಯಾನ್ (Hossein Amir-Abdollahian) ಅವರು ಗುರುವಾರ ಸಂಜೆ ಲೆಬನಾನ್ ರಾಜಧಾನಿ ಬೈರುತ್ಗೆ ಆಗಮಿಸಿದ್ದು,

ಅಲ್ಲಿ ಅವರನ್ನು ಹಮಾಸ್ (Hamas), ಪ್ಯಾಲೇಸ್ಟಿನಿಯನ್ ಇಸ್ಲಾಮಿಕ್ ಜಿಹಾದ್ನ ಪ್ರತಿನಿಧಿಗಳು ಮತ್ತು ಲೆಬನಾನಿನ ಅಧಿಕಾರಿಗಳು ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಅವರು, ಗಾಜಾದ ಮೇಲೆ

ಮುಂದುವರಿದಿರುವ ಇಸ್ರೇಲ್ನ ಆಕ್ರಮಣಶೀಲತೆ, ಯುದ್ಧ ಅಪರಾಧಗಳು ಹೀಗೆ ಮುಂದುವರೆದರೆ ಈ ಯುದ್ದವು ಇತರ ದೇಶಗಳಿಗೂ ಮತ್ತು ಇತರ ರಂಗಗಳಿಗೂ ತೆರೆದುಕೊಳ್ಳುವ ಸಾಧ್ಯತೆಯಾಗಿದೆ”

ಎಂದು ಅಮಿರಾಬ್ಡೊಲ್ಲಾಹಿಯಾನ್ ಅವರು ಪತ್ರಕರ್ತರೊಂದಿಗೆ (Iran against on Israel) ಮಾತನಾಡುತ್ತಾ ಹೇಳಿದ್ದಾರೆ.

ಇನ್ನು ಗುರುವಾರ ಮುಂಜಾನೆ, ಅಮಿರಬ್ದೊಲ್ಲಾಹಿಯಾನ್ ಇರಾಕ್ಗೆ ಭೇಟಿ ನೀಡಿದ್ದು, ಅಲ್ಲಿ ಅವರು ಇರಾಕ್ ಪ್ರಧಾನಿ ಮೊಹಮ್ಮದ್ ಶಿಯಾ ಅಲ್-ಸುಡಾನಿ (Mohammed Shia al-Sudani) ಅವರೊಂದಿಗಿನ

ಸಭೆಯ ನಂತರ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್ ಇಸ್ರೇಲ್ ಮೇಲೆ ನಡೆಸಿರುವ ದಾಳಿಯಲ್ಲಿ ಇರಾನ್ ಪಾತ್ರದ ಕುರಿತು ಅನೇಕ ಪ್ರಶ್ನೆಗಳು

ಹುಟ್ಟಿಕೊಂಡಿವೆ. ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿರುವ ದಾಳಿಯ ಹಿಂದೆ ಇರಾನ್ ಕೈವಾಡವಿದೆ.

ಈ ದಾಳಿಗೆ ಸಂಪೂರ್ಣ ಸಹಕಾರವನ್ನು ಇರಾನ್ (Iran) ಸರ್ಕಾರ ನೀಡಿದೆ ಎಂದು ಆರೋಪಿಸಲಾಗಿದೆ. ಆದರೆ ಈ ಆರೋಪವನ್ನು ಇರಾನ್ ನಿರಾಕರಿಸಿದೆ. ಇರಾನ್ ಸರ್ಕಾರ ಈ ದಾಳಿಯನ್ನು

ಆಯೋಜಿಸಿದೆ ಎಂಬುದಕ್ಕೆ ವಿಶ್ವದಾದ್ಯಂತ ಯಾವುದೇ ದೇಶವು ನೇರ ಸಾಕ್ಷ್ಯವನ್ನು ನೀಡಿಲ್ಲ. ಆದರೆ ತರಬೇತಿ, ಧನಸಹಾಯ ಮತ್ತು ಶಸ್ತ್ರಾಸ್ತ್ರಗಳನ್ನು ಇರಾನ್ಹಮಾಸ್ಗೆ ಒದಗಿಸಿದೆ ಎನ್ನಲಾಗಿದೆ.

ಇನ್ನು ಮಧ್ಯಪ್ರಾಚ್ಯದಲ್ಲಿ ಆರಂಭವಾಗಿರುವ ಈ ಸಂಘರ್ಷ ಇತರೆಡೆ ವಿಸ್ತರಣೆಯಾಗುವ ಸಾಧ್ಯತೆಗಳಿವೆ. ಅಮೇರಿಕಾ (America) ಈಗಾಗಲೇ ಪೂರ್ವಮೆಡಟೇರಿಯನ್ ಸಮುದ್ರಕ್ಕೆ ಕಾಲಿಟ್ಟಿದ್ದು,

ಇಸ್ರೇಲ್ ವಿರುದ್ದ ಇರಾನ್, ಸಿರಿಯಾ ಮತ್ತು ಲೆಬನಾನ್ ದೇಶಗಳು ಯುದ್ದಕ್ಕಿಳಿದರೆ, ಅಮೇರಿಕಾ ಮತ್ತು ಅದರ ಮಿತ್ರರಾಷ್ಟ್ರಗಳು ಕೂಡಾ ನೇರವಾಗಿ ಯುದ್ದಕ್ಕಿಳಿಯುವ ಸಾಧ್ಯತೆಗಳಿವೆ.

ಇದನ್ನು ಓದಿ: ಉಡುಪಿಯ ಪರಶುರಾಮ ಥೀಮ್‌ ಪಾರ್ಕ್ ಪ್ರಶ್ನಿಸಿ ಪ್ರಮೋದ್‌ ಮುತಾಲಿಕ್‌ ಸಲ್ಲಿಸಿದ್ದ ಅರ್ಜಿ ವಜಾ: ಹೈಕೋರ್ಟ್‌

Exit mobile version