ಇಸ್ರೋದ ಹೊಸ ಮೈಲಿಗಲ್ಲು: ಯಶಸ್ವಿಯಾಗಿ ರನ್‌ವೇಗೆ ಬಂದಿಳಿದ ಉಪಗ್ರಹ ಉಡಾವಣಾ ವಾಹನ

Chitradurga: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿರುವ ನಾಯಕನಹಟ್ಟಿ(Nayakanahatti) ಬಳಿ ಇರುವ ಏಟಿಆರ್ (ಏರೋನಾಟಿಕ್ ಟೆಸ್ಟ್ ರೇಂಜ್) ನಲ್ಲಿ ನಡೆದ ಉಪಗ್ರಹ ಉಡಾವಣಾ ವಾಹನದ ಸ್ವಯಂ (ISRO new launch) ಪ್ರೇರಿತ ಲ್ಯಾಂಡಿಂಗ್ ಪ್ರಯೋಗ ಶೇಕಡಾ 100% ಯಶಸ್ಸನ್ನು ಸಾಧಿಸಿದೆ.

ಭಾನುವಾರ ನಡೆದ ಉಪಗ್ರಹ ಉಡಾವಣಾ ವಾಹನ ಮರುಬಳಕೆ ಮಾಡಬಹುದಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹೊಸ ಮೈಲುಗಲ್ಲನ್ನು (ISRO new launch) ಸಾಧಿಸಿದೆ.

ಗಂಟೆಗೆ 350 ಕಿ ಮೀ ವೇಗದಲ್ಲಿ ಧಾವಿಸಿ ಬಂದ ಉಪಗ್ರಹ ಉಡಾವಣಾ ವಾಹನವು ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲದೆ ರನ್ ವೇಯನ್ನು ಮುಟ್ಟಿತು.

ಇದೊಂದು ಮರುಬಳಕೆ ಮಾಡಬಹುದಾದ ಸುಧಾರಿತ ರಾಕೆಟ್ (Rocket) ಎಂದರೆ ತಪ್ಪಾಗಲಾರದು ಇದರಿಂದ ಬಹಳಷ್ಟು ದುಡ್ಡು ಉಳಿತಾಯ ಮಾಡಬಹುದಾಗಿದೆ ಇದು ನೋಡಲು ಪುಟ್ಟ ವಿಮಾನದಂತಿದೆ.

ಈ ಯಶಸ್ವಿ ಪ್ರಯೋಗವು ಪ್ರತಿ ಬಾರಿಯೂ ಇಸ್ರೋಗೆ (ISRO) ಉಪಗ್ರಹಗಳ ಉಡಾವಣೆಗೆ ರಾಕೆಟ್ ಅಭಿವೃದ್ಧಿ ಪಡಿಸುವುದು ತಪ್ಪಲಿದೆ.

ಮಾನವನನ್ನು ಬಾಹ್ಯಾಕಾಶಕ್ಕೆ ಕಳಿಸುವ ಯೋಜನೆಗೆ ಇದು ದೊಡ್ಡ ಮಟ್ಟದಲ್ಲಿ ಅನುಕೂಲವಾಗಿದೆ.

ಇದು ಗಾಳಿಯ ವೇಗದಲ್ಲಿ ಬಂದು ನಿಂತಿತ್ತು. ಗಂಟೆಗೆ 350 ಕೀ ಮೀ ವೇಗದಲ್ಲಿ ಧಾವಿಸಿ ಬಂದ ಉಪಗ್ರಹ ಉಡಾವಣಾ ವಾಹನವು ತಾಂತ್ರಿಕ ಸಮಸ್ಯೆಯ ಅಳುಕಿಲ್ಲದೆ ಬಂದು ಭೂಮಿಯನ್ನು ಸ್ಪರ್ಶಿಸಿತ್ತು.

ಹೆಲಿಕಾಪ್ಟರ್ ನಿಂದ ಸಮುದ್ರ ಮಟ್ಟದಿಂದ 4.5ಕೀ. ಮೀ ಎತ್ತರದ ಆಕಾಶದಲ್ಲಿ ಆರ್.ಎಲ್.ವಿ ಬಿಡುಗಡೆ.ಇದು 6.5 ಮೀಟರ್ ಉದ್ದ 3.6 ಮೀಟರ್ ಅಗಲವನ್ನು ಹೊಂದಿರುವ ಉಡಾವಣಾ ವಾಹನ ಚಿಕ್ಕ ವಿಮಾನದಂತಿದೆ.


ಬಿರುಗಾಳಿ ವೇಗದಲ್ಲಿ ಬಂದ ಉಪಗ್ರಹ ಉಡಾವಣಾ ವಾಹನ ಬಂದು ಲ್ಯಾಂಡ್ (Land) ಆಗುತ್ತಿದ್ದಂತೆ ತಂತ್ರಜ್ಞರು ವಿಜ್ಞಾನಿಗಳು ಹಾಗೂ ಸಿಬ್ಬಂದಿಗಳಿಗೂ ಕುಣಿದು ಸಂಭ್ರಮಿಸಿದರು ಮತ್ತು ಸಿಹಿಯನ್ನು ಹಂಚಿಕೊಂಡು ಇಸ್ರೋದ ಜಾಗತಿಕ ವಿಕ್ರಮಕ್ಕೆ ಸಾಕ್ಷಿಯಾದರು.

ಇಸ್ರೋ ಅಧ್ಯಕ್ಷರಾದ ಎಸ್ ಸೋಮನಾಥ್ (S.Somnath) ರವರು ತಂತ್ರಜ್ಞರು ಮತ್ತು ಸಿಬ್ಬಂದಿಗಳನ್ನು ಅಭಿನಂದಿಸಿದರು.

Exit mobile version