ಹಿರೋಶಿಮಾ ಮೇಲಿನ ಅಣುಬಾಂಬ್ ದಾಳಿಗೆ ಇಂದಿಗೆ 76 ವರ್ಷ

ಜಪಾನ್, ಆ. 06: ಜಾಗತಿಕ ನಾಯಕರು ಹೇಗೆ ಕೊರೊನಾದ ವಿರುದ್ಧ ಒಗ್ಗೂಡಿದ್ದಾರೋ ಅದೇ ರೀತಿ ಪರಮಾಣು ಶಸ್ತ್ರಾಸ್ತ್ರಗಳನ್ನು ತೆಗೆದು ಹಾಕಲು ಒಂದಾಗಬೇಕು ಎಂದು ಹಿರೋಶಿಮಾದ ಮೇಯರ್ ಕಝಮಿ ಮಾಟ್ಸುಯಿ ಒತ್ತಾಯಿಸಿದರು.

ಹಿರೋಶಿಮಾ ಮೇಲೆ ನಡೆದ ವಿಶ್ವದ ಮೊದಲ ಅಣುಬಾಂಬ್ ದಾಳಿಯ 76ನೇ ವರ್ಷದ ಅಂಗವಾಗಿ ಶಾಂತಿ ಸ್ಮಾರಕ ಉದ್ಯಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಯುದ್ಧಗಳನ್ನು ಗೆಲ್ಲಲು ಸಿದ್ಧಗೊಳಿಸುವ ಈ ಶಸ್ತ್ರಾಸ್ತ್ರ ಅತಿ ಅಪಾಯಕಾರಿಯಾಗಿದೆ. ಎಲ್ಲಾ ರಾಷ್ಟ್ರಗಳು ಒಂದಾದರೆ, ಇದನ್ನು ನಾವು ಅಂತ್ಯಗೊಳಿಸಬಹುದು. ಈ ಶಸ್ತ್ರಾಸ್ತ್ರಗಳಿಂದ ಸ್ಥಿರ ಸಮಾಜವನ್ನು ರೂಪಿಸಲು ಸಾಧ್ಯವಿಲ್ಲ’ ಎಂದರು.

ಅಲ್ಲದೆ ಜಪಾನ್‌ ಸರ್ಕಾರವು ಪರಮಾಣು ಶಸ್ತ್ರಾಸ್ತ್ರ ನಿಷೇಧ ಒಪ್ಪಂದಕ್ಕೆ ಸಹಿ ಹಾಕಬೇಕು ಎಂದು ಅವರು ಒತ್ತಾಯಿಸಿದರು. ಜಪಾನ್‌ ಪ್ರಧಾನಿ ಯೋಶಿಹಿದೆ ಸುಗಾ ಅವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Exit mobile version