Jacqueline Fernandez : 200 ಕೋಟಿ ವಂಚನೆ ಆರೋಪ ; ದೆಹಲಿ ಪೊಲೀಸರ ಮುಂದೆ ಹಾಜರಾದ ನಟಿ ಜಾಕ್ವೆಲಿನ್ ಫರ್ನಾಂಡೀಸ್

Extortion Case

New Delhi : ಸುಕೇಶ್ ಚಂದ್ರಶೇಖರ್ ಅವರನ್ನು ಒಳಗೊಂಡ 200 ಕೋಟಿ ರೂಪಾಯಿ ವಂಚನೆ(Extortion Case) ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲಾದ ನಟಿ ಜಾಕ್ವೆಲಿನ್ ಫರ್ನಾಂಡೀಸ್(Jacqueline Fernandez) ಅವರು ಇಂದು ಸೆಪ್ಟೆಂಬರ್ 14 ರಂದು ದೆಹಲಿ ಪೊಲೀಸರ(Delhi Police) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ನಟಿ ಜಾಕ್ವಲಿನ್ಗೆ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗದ(EOW) ನೀಡಿರುವ ಮೂರನೇ ಸಮನ್ಸ್(Summons) ಇದಾಗಿದೆ. ಇದಕ್ಕೂ ಮುನ್ನ ದೆಹಲಿ ಪೊಲೀಸರು ಆಗಸ್ಟ್ 29 ಮತ್ತು ಸೆಪ್ಟೆಂಬರ್ 12 ರಂದು ಎರಡು ಬಾರಿ ವಿಚಾರಣೆಗೆ ಸಮನ್ಸ್ ರವಾನಿಸಿದ್ದರು.

ದೆಹಲಿ ಪೊಲೀಸರು ಸುಕೇಶ್ ಚಂದ್ರ ಶೇಖರ್ ಅವರೊಂದಿಗಿನ ಸಂಬಂಧ ಮತ್ತು ಅವರಿಂದ ಪಡೆದ ಉಡುಗೊರೆಗಳ ಬಗ್ಗೆ ಜಾಕ್ವಲಿನ್ ಫರ್ನಾಂಡಿಸ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಸುಕೇಶ್ ಅವರನ್ನು ವೈಯಕ್ತಿಕವಾಗಿ ಎಷ್ಟು ಬಾರಿ ಭೇಟಿಯಾಗಿದ್ದಾರೆ ಮತ್ತು ಅವರೊಂದಿಗೆ ಎಷ್ಟು ಬಾರಿ ಫೋನ್ ಸಂಭಾಷಣೆ ನಡೆಸಿದ್ದಾರೆ ಎಂದು ಕೇಳಲಾಗುತ್ತದೆ.

ಇದನ್ನೂ ಓದಿ : https://vijayatimes.com/tips-to-care-brain-health/

ಸುಕೇಶ್ ಜಾಕ್ವೆಲಿನ್ ಜೊತೆ ಸಂಪರ್ಕದಲ್ಲಿರಲು ಸಹಾಯ ಮಾಡಿದ ಪಿಂಕಿ ಇರಾನಿಯನ್ನು ಸಹ EOW ಕರೆದಿದೆ. ಮೂಲಗಳ ಪ್ರಕಾರ ಜಾಕ್ವೆಲಿನ್ ಮತ್ತು ಪಿಂಕಿ ಅವರನ್ನೂ ಮುಖಾಮುಖಿಯಾಗಿ ಕೂರಿಸಿ ವಿಚಾರಣೆ ನಡೆಸಲಿದ್ದಾರೆ. ದೆಹಲಿ ಪೊಲೀಸರು ಜಾಕ್ವೆಲಿನ್ ಅವರ ಸುದೀರ್ಘ ವಿಚಾರಣೆಗೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಾಳೆ ಗುರುವಾರ ಸೆಪ್ಟೆಂಬರ್ 15 ರಂದು ಕೂಡ ನಟಿ ಜಾಕ್ವಲಿನ್ ಫರ್ನಾಂಡಿಸ್ ಅನ್ನು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಈ ಪ್ರಕರಣದಲ್ಲಿ ಕೆಲ ದಿನಗಳ ಹಿಂದೆ ದೆಹಲಿ ಪೊಲೀಸರ ತಂಡ ಬಾಲಿವುಡ್ ನಟಿ ನೂರಾ ಫತೇಹಿ ಅವರನ್ನು ಸುಮಾರು ಆರು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.

ಇದನ್ನೂ ಓದಿ : https://vijayatimes.com/goa-politics-gets-a-point/

ಜಾಕ್ವೆಲಿನ್ ಅವರನ್ನು ಪ್ರಶ್ನಿಸುವ ಅಧಿಕಾರಿಗಳ ಪೈಕಿ ಇಒಡಬ್ಲ್ಯು ಜಂಟಿ ಆಯುಕ್ತ ಛಾಯಾ ಶರ್ಮಾ ಮತ್ತು ವಿಶೇಷ ಆಯುಕ್ತ ರವೀಂದ್ರ ಯಾದವ್ ಸೇರಿದ್ದಾರೆ. ನಟಿಯನ್ನು ವಿಚಾರಣೆಗೆ ಒಳಪಡಿಸುವ ತಂಡದಲ್ಲಿ ಸುಮಾರು 5-6 ಅಧಿಕಾರಿಗಳು ಇದ್ದಾರೆ ಎಂದು ಹೇಳಲಾಗಿದೆ.

Exit mobile version