ಉತ್ತಮ ರಾಜಕೀಯ ಭವಿಷ್ಯಕ್ಕೆ ಯಾವುದೇ ಮೈತ್ರಿಕೂಟ ಸೇರಲ್ಲ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನಿರ್ಧಾರ

Bengaluru: (ಜುಲೈ 21): ಸದ್ಯ ಬಿಜೆಪಿ(BJP) ಜತೆಗಿನ ಮೈತ್ರಿಗೆ ಸಂಬಂಧಿಸಿದಂತೆ ಜೆಡಿಎಸ್‌ (JDS not involve alliance) ಶಾಸಕರ ಒಮ್ಮತದ ಕೊರತೆಯಿಂದಾಗಿ ದಳಪತಿಗಳು ಎನ್‌ಡಿಎ (NDA)

ಮೈತ್ರಿಕೂಟದಿಂದ ದೂರ ಉಳಿದಿದ್ದಾರೆ. ಜುಲೈ 20 ರಂದು ಸಂಜೆ ಬೆಂಗಳೂರಿನಲ್ಲಿ (Bengaluru) ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ, ಒಪ್ಪಂದದ ರಾಜಕೀಯ ಬೇಡ ಎಂದು ಸ್ಪಷ್ಟಪಡಿಸಲಾಗಿದೆ.

ಮುಂದಿನ ರಾಜಕೀಯ ಭವಿಷ್ಯದ ಉದ್ದೇಶದಿಂದ ಯಾವುದೇ ರಾಜಕೀಯ ಘಟಕದೊಂದಿಗೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ನಾಯಕ ಎಚ್.ಡಿ.ದೇವೇಗೌಡ (H.D Deve Gowda) ನಿರಾಸಕ್ತಿ ವ್ಯಕ್ತಪಡಿಸಿದ್ದಾರೆ.

ನಾವು ಯಾವುದೇ ಪಕ್ಷಗಳೊಂದಿಗೆ ಯಾವುದೇ ರೀತಿಯ ಒಪ್ಪಂದ ಮಾಡಿಕೊಳ್ಳುವುದು ಬೇಡ. ಬದಲಾಗಿ ಮುಂಬರುವ ಚುನಾವಣೆಗಳಲ್ಲಿ (Election) ಸ್ವತಂತ್ರವಾಗಿ ಸಕ್ರಿಯವಾಗಿ ಭಾಗವಹಿಸೋಣ.

ಒಂದು ವೇಳೆ ರಾಜಿ ಮಾಡಿಕೊಂಡರೆ ಅದು ನಿಸ್ಸಂದೇಹವಾಗಿ ಲೋಕಸಭೆ ಚುನಾವಣೆಗೆ (Lok Sabha Election) ಸಂಘರ್ಷದ ಸಂದೇಶವನ್ನು ರವಾನಿಸುತ್ತದೆ. ಇದಲ್ಲದೆ, ಮೈತ್ರಿ ಕೂಟಕ್ಕೆ ಸೇರಿದರೆ

ಅನಿವಾರ್ಯವಾಗಿ ಕೆಲವು ಸಮುದಾಯಗಳಿಂದ ನೇರ ವಿರೋಧವನ್ನು (JDS not involve alliance) ಎದುರಿಸಬೇಕಾಗುತ್ತದೆ.

ಇದನ್ನೂ ಓದಿ : ಭಾರತದ ಅತಿ ಶ್ರೀಮಂತ ಶಾಸಕ ಡಿಕೆ ಶಿವಕುಮಾರ್ ; 20ರ ಪೈಲಿ 12 ಮಂದಿ ಕರ್ನಾಟಕದವರೇ

ಇದು, ಸ್ಥಳೀಯ ಮಟ್ಟದಲ್ಲಿ ನಮ್ಮ ಪಕ್ಷವನ್ನು ಸಂಘಟಿಸುವ ವಿಷಯದಲ್ಲಿ ಸವಾಲುಗಳನ್ನು ಒಡ್ಡುತ್ತದೆ. ಇದಲ್ಲದೆ, ಅಂತಹ ನಿರ್ಧಾರವು ನಮ್ಮ ಸಮರ್ಪಿತ ಕಾರ್ಯಕರ್ತರಲ್ಲಿ ಗೊಂದಲ ಮತ್ತು ಅನಿಶ್ಚಿತತೆಗೆ

ಕಾರಣವಾಗಬಹುದು. ಪರಿಣಾಮವಾಗಿ ಮೈತ್ರಿ ರಚನೆಗೆ ಸಂಬಂಧಿಸಿದಂತೆ ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ ಎನ್ನುವ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾಗಿವೆ.

ಸದ್ಯ ರಾಜ್ಯ ರಾಜಕಾರಣದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್(Congress) ವಿರುದ್ಧ ಜೆಡಿಎಸ್, ಬಿಜೆಪಿಯೊಂದಿಗೆ ಸೇರಿ ಸಿಡಿದೆದ್ದಿದೆ. ಕುಮಾರಸ್ವಾಮಿ (H.D Kumaraswamy) ಅವರು ಬಿಜೆಪಿ ಪರ ಪ್ರಯೊಂದು ವಿಚಾರದಲ್ಲೂ

ಸಹ ಬ್ಯಾಟಿಂಗ್ ಮಾಡುತ್ತಿದ್ದು, ಮೈತ್ರಿ ಮಾಡಿಕೊಳ್ಳುವ ಉತ್ಸಹದಲ್ಲಿದ್ದಾರೆ ಎಂದು ಸುದ್ದಿಯಾಗಿತ್ತು.ಮೈತಿಯ ವಿಚಾರವಾಗಿ ಸದ್ಯಕ್ಕೆ ಶಾಸಕರಿಂದ ಸಂಪೂರ್ಣ ಒಮ್ಮತ ಇಲ್ಲದ ಕಾರಣ ನಿನ್ನೆ ನಡೆದ ಶಾಸಕಾಂಗ ಸಭೆಯಲ್ಲಿ

ದೇವೇಗೌಡ್ರು ಬಿಜೆಪಿಯೊಂದಿಗೆ ಮೈತ್ರಿಯಿಂದ ಸದ್ಯಕ್ಕೆ ದೂರ ಉಳಿಯುವ ತೀರ್ಮಾನಕ್ಕೆ ಬಂದಿದ್ದಾರೆ.

ಇದನ್ನೂ ಓದಿ : ವಿವಾದಿತ ಎಪಿಎಂಸಿ ತಿದ್ದುಪಡಿ ವಿಧೇಯಕ ಅಂಗೀಕಾರ : ಬಿಜೆಪಿ ಮತ್ತು ಜೆಡಿಎಸ್ ಸದಸ್ಯರಿಂದ ಧರಣಿ

ಈ ಹಿಂದೆ ಕಾಂಗ್ರೆಸ್ ಪಕ್ಷದೊಂದಿಗಿನ ನೇರ ಒಪ್ಪಂದದ ಮೂಲಕ ಲೋಕಸಭೆ ಚುನಾವಣೆಯಲ್ಲಿ ನಾವು ಕೇವಲ ಒಂದು ಸ್ಥಾನಕ್ಕೆ ಮಾತ್ರ ಸೀಮಿತವಾದೆವು. ಆದ್ದರಿಂದ ಮೈತ್ರಿ ಮಾಡಿಕೊಳ್ಳುವ ಬದಲು ಸ್ವತಂತ್ರವಾಗಿ

ಸ್ಪರ್ಧಿಸುವ ಮೂಲಕ ಎರಡರಿಂದ ಮೂರು ಸ್ಥಾನಗಳನ್ನು ಪಡೆಯಲು ಅವಕಾಶವಿದೆ.

ಒಂದು ವೇಳೆ ನಾವು ಬಿಜೆಪಿ ಜೊತೆ ಕೈಜೋಡಿಸಿದರೆ ಕಾಂಗ್ರೆಸ್ಗೆ ಅಸ್ತ್ರವಾದಂತಾಗುತ್ತದೆ.ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯ ವಿಚಾರವನ್ನೇ ಅಸ್ತ್ರವಾಗಿ ಬಳಸಿಕೊಳ್ಳುತ್ತದೆ. ಮತ್ತೆ ಜೆಡಿಎಸ್ ಗೆ ಇದರಿಂದ ಹಳೆ

ಮೈಸೂರು(Mysore) ಭಾಗದಲ್ಲಿ ಹಿನ್ನಡೆ ಆಗುವ ಸಾಧ್ಯತೆ ಇದೆ ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಟ್ಟರೆ ಒಳ್ಳೆಯದು ಎಂದು ಸಭೆಯಲ್ಲಿ ಕೆಲಸ ಶಾಸಕರು ತಮ್ಮ ಅಭಿಪ್ರಾಯಗಳನ್ನು ವರಿಷ್ಠರ ಮುಂದೆ ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ದೇವೇಗೌಡ ಅವರು ಶಾಸಕರ ಅಭಿಪ್ರಾಯ ಸಂಗ್ರಹಿಸಿ ಎನ್‌ಡಿಎ ಮೈತ್ರಿಕೂಟ ಸೇರಲು ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ.

ರಶ್ಮಿತಾ ಅನೀಶ್

Exit mobile version