JN.1 ಕೋವಿಡ್ ರೂಪಾಂತರ ಉಲ್ಬಣ ; ರಾಜ್ಯಗಳಿಗೆ ಎಚ್ಚರಿಕೆ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯ

New Delhi : ಭಾರತದಲ್ಲಿ JN.1 ಕೋವಿಡ್ ರೂಪಾಂತರ (JN1 Covid variant surge) ಉಲ್ಬಣವಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 358 ಹೊಸ ಸಕ್ರಿಯ ಕೋವಿಡ್ ಪ್ರಕರಣಗಳು ವರದಿಯಾಗಿವೆ.

ಹೀಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ (Union Ministry of Health) ಎಚ್ಚರಿಕೆ ನೀಡಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಕೋವಿಡ್ -19 (Covid 19) ಪ್ರಕರಣಗಳಲ್ಲಿ ಏರಿಕೆ ಕಂಡಿವೆ. ಕಳೆದ 24 ಗಂಟೆಗಳಲ್ಲಿ 358 ಹೊಸ ಸೋಂಕುಗಳು ದಾಖಲಾಗಿವೆ.

ಕೇರಳದಲ್ಲಿ ಮೊದಲು ಪತ್ತೆಯಾದ ಕೋವಿಡ್ ರೂಪಾಂತರ JN.1ರ ಪ್ರಕರಣಗಳು ಹೆಚ್ಚುತ್ತಿವೆ. 24 ಗಂಟೆಗಳ ಅವಧಿಯಲ್ಲಿ ಕೇರಳದಿಂದ (Kerala) ಮೂರು ಸಾವುಗಳು ವರದಿಯಾಗುವುದರೊಂದಿಗೆ ಸಾವಿನ

ಸಂಖ್ಯೆ 5,33,327 ಕ್ಕೆ ದಾಖಲಾಗಿದೆ. ಅದೇ ರೀತಿ ಹೊಸ ಪ್ರಕರಣಗಳು ಮುಖ್ಯವಾಗಿ ಕೇರಳ, ಕರ್ನಾಟಕ, ಗುಜರಾತ್, ತಮಿಳುನಾಡು ಮತ್ತು ಮಹಾರಾಷ್ಟ್ರದಿಂದ (Karnataka, Gujarat, Tamil Nadu and

Maharashtra) ವರದಿಯಾಗಿದೆ. ಆರೋಗ್ಯ ಸಚಿವಾಲಯದ ವೆಬ್ಸೈಟ್ ಪ್ರಕಾರ, ರೋಗದಿಂದ ಚೇತರಿಸಿಕೊಂಡ ಜನರ ಸಂಖ್ಯೆ 4,44,70,576ಕ್ಕೆ ಏರಿದೆ ಮತ್ತು ರಾಷ್ಟ್ರೀಯ ಚೇತರಿಕೆಯ ದರವನ್ನು

ಶೇಕಡಾ 98.81 ಕ್ಕೆ (JN1 Covid variant surge) ನಿಗದಿಪಡಿಸಲಾಗಿದೆ.

ದೇಶದ ಹಲವಾರು ಭಾಗಗಳಲ್ಲಿ ಕೋವಿಡ್ -19 ಪ್ರಕರಣಗಳು ಮತ್ತು ಸಾವುಗಳ ಹಠಾತ್ ಹೆಚ್ಚಳವನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಸಚಿವಾಲಯ ಸಭೆ ನಡೆಸಿತು. ಸಭೆಯ ಅಧ್ಯಕ್ಷತೆಯನ್ನು ಕೇಂದ್ರ

ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಅವರು ಕೋವಿಡ್ -19 ರ ಹೊಸ ತಳಿಗಳ ವಿರುದ್ಧ ಎಚ್ಚರವಾಗಿರುವುದು ಮತ್ತು ಸಿದ್ಧರಾಗಿರುವುದು ಮುಖ್ಯ. ಕೇಂದ್ರ ಮತ್ತು ರಾಜ್ಯಗಳ

ನಡುವೆ ಜಂಟಿ ಪ್ರಯತ್ನಗಳ ಅವಶ್ಯಕತೆಯಿದೆ. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಮಾಕ್ ಡ್ರಿಲ್ಗಳನ್ನು (Mock drills) ಕೈಗೊಳ್ಳೋಣ ಮತ್ತು ಉತ್ತಮ ಅಭ್ಯಾಸಗಳನ್ನು

ಹಂಚಿಕೊಳ್ಳೋಣ ಎಂದು ಅವರು ಹೇಳಿದರು. ದೇಶಾದ್ಯಂತ ಹೊಸ ಕರೋನ ವೈರಸ್ನ ರೂಪಾಂತರ JN.1 ಗೆ ಸದ್ಯ ನೀಡಲಾಗುತ್ತಿರುವ ಚಿಕಿತ್ಸೆಗಳು (Treatment) ಪರಿಣಾಮಕಾರಿಯಾಗಿರುತ್ತವೆ.

ಇದರ ಸೋಂಕು ಸೌಮ್ಯವಾಗಿದ್ದು, ಎಲ್ಲಾ ವೈರಸ್ಗಳು ರೂಪಾಂತರಗೊಳ್ಳುತ್ತವೆ ಎಂದು ತಜ್ಞರು ಹೇಳಿದ್ದಾರೆ. ಸೋಂಕಿತರಲ್ಲಿ ಸುಮಾರು 91 ರಿಂದ 92 ಪ್ರತಿಶತದಷ್ಟು ಜನರು ಮನೆಯಲ್ಲೇ

ಚಿಕಿತ್ಸೆಯನ್ನು ಆರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಸೋಂಕಿನ ಕುರಿತು ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಇದನ್ನು ಓದಿ: ಮೂರು ಮಾದರಿಗೆ 3 ನಾಯಕರು: ಆಫ್ರಿಕಾ ಪ್ರವಾಸಕ್ಕೆ ಟೀಂ ಇಂಡಿಯಾ ಆಟಗಾರರ ಪಟ್ಟಿ ಬಿಡುಗಡೆ

Exit mobile version