ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (NMDC) ಅಪ್ರೆಂಟಿಸ್ ತರಬೇತುದಾರರ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ವಿವಿಧ ಟ್ರೇಡ್ನಲ್ಲಿ ಹುದ್ದೆಗಳನ್ನು ನೇಮಕಾತಿ ಮಾಡಲಿದ್ದು, ITI ವಿದ್ಯಾರ್ಹತೆಯನ್ನು ಸಂಬಂಧಿಸಿದ ಟ್ರೇಡ್ನಲ್ಲಿ ಪಡೆದವರು ನೇರ ಸಂದರ್ಶನಕ್ಕೆ ಹಾಜರಾಗಬಹುದು.
ನೇಮಕಾತಿ ಪ್ರಾಧಿಕಾರ : ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (NMDC)
ಹುದ್ದೆಗಳ ಹೆಸರು: ಅಪ್ರೆಂಟಿಸ್ ತರಬೇತುದಾರರು.
ಹುದ್ದೆಗಳ ಸಂಖ್ಯೆ : 120
ವಿದ್ಯಾರ್ಹತೆ : ITI ಪಾಸ್ (ವಿವಿಧ ಟ್ರೇಡ್ಗಳಲ್ಲಿ NCVT / SCVT ಪ್ರಮಾಣ ಪತ್ರ ಪಡೆದಿರಬೇಕು).
ಟ್ರೇಡ್ವಾರು ಹುದ್ದೆಗಳ ವಿವರ
ಮೆಕ್ಯಾನಿಕ್ ಡೀಸೆಲ್ : 25
ಫಿಟ್ಟರ್ : 20
ಇಲೆಕ್ಟ್ರೀಷಿಯನ್ : 30
ವೆಲ್ಡರ್ (ಇಲೆಕ್ಟ್ರಿಕಲ್) : 20
ಮೆಕ್ಯಾನಿಕ್ (ಮೋಟಾರು ವೆಹಿಕಲ್) : 20
ಮಷಿನಿಸ್ಟ್ : 05
ನೇರ ಸಂದರ್ಶನ ದಿನಾಂಕ : 22-02-2024 ರಿಂದ 26-02-2024 ರವರೆಗೆ. ಸಂದರ್ಶನಕ್ಕೆ ಹಾಜರಾಗುವ ಆಭ್ಯರ್ಥಿಗಳು ಆಧಾರ್ ಕಾರ್ಡ್, SSLC ಅಂಕಪಟ್ಟಿ, ITI NCVT / SCVT ಪ್ರಮಾಣ ಪತ್ರ ಹಾಗೂ ಇತರೆ ದಾಖಲೆಗಳನ್ನು ಪ್ರಸ್ತುತಪಡಿಸಬೇಕು.
ಆಯ್ಕೆ ವಿಧಾನ: SSLC ಮತ್ತು ITI ಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ನಂತರ ಸಂದರ್ಶನಕ್ಕೆ ಕರೆಯಲಾಗುತ್ತದೆ.
ಸೂಚನೆ : 1961ರ ಅಪ್ರೆಂಟಿಸ್ ಕಾಯ್ದೆ ಅನ್ವಯ ಮಾಸಿಕ ಸ್ಟೈಫಂಡ್ ಅನ್ನು ನೀಡಲಾಗುತ್ತದೆ. ಈ ಹುದ್ದೆಯ ಅವಧಿ ಒಂದು ವರ್ಷ ಇರುತ್ತದೆ.
ಅಧಿಕೃತ ಅಧಿಸೂಚನೆ: https://www.nmdc.co.in/cms-admin/Upload/Career_Documents/15e30c76c8b7444785e942cebe1ba5c1_20240131110022060.pdf