ಬೆಂಗಳೂರು ಕೃಷಿ ವಿಜ್ಞಾನಗಳ ವಿವಿಯಲ್ಲಿ ಬೋಧಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Bengaluru: ಬೆಂಗಳೂರು ಕೃಷಿ ವಿಜ್ಞಾನಗಳ ವಿವಿಯಲ್ಲಿ (Bangalore University of Agricultural Sciences) ಖಾಲಿ ಇರುವ (Job Vacancy in UAS Blore) ವಿವಿಧ ಬೋಧಕ ಹುದ್ದೆಗಳ

ನೇಮಕಾತಿಗೆ ಅಧಿಕೃತ ಅರ್ಜಿ ಆಹ್ವಾನಿಸಲಾಗಿದೆ. ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದ್ದು, ಆಸಕ್ತ ಹಾಗೂ ಅಭ್ಯರ್ಥಿಗಳಿಂದ ಅರ್ಜಿ

ಸಲ್ಲಿಸಲು ಕೋರಲಾಗಿದೆ.

ನೇಮಕಾರಿ ಪ್ರಾಧಿಕಾರ : ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ
ಹುದ್ದೆಗಳ ವಿವರ

ಅಸೋಸಿಯೇಟ್ ಪ್ರೊಫೆಸರ್ : 5
ಅಸಿಸ್ಟಂಟ್ ಪ್ರೊಫೆಸರ್ : 50

ಜೆನೆಟಿಕ್ಸ್ ಮತ್ತು ಪ್ಲಾಂಟ್ ಬ್ರೀಡಿಂಗ್ (Genetics and Plant Breeding), ಆಗ್ರೋನಮಿ, ತೋಟಗಾರಿಕೆ ವಿಷಯ, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ, ಪ್ಲಾಂಟ್ ಪೇಥಾಲಜಿ, ನ್ಯೂಟ್ರಿಷನ್

(Plant Pathology, Nutrition), ಪ್ಲಾಂಟ್ ಬಯೋಟೆಕ್ನಾಲಜಿ, ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ, ಸಿರಿಕಲ್ಚರ್, ಆಹಾರ ವಿಜ್ಞಾನಗಳು ಮತ್ತು, ಫಿಶೆರೀಸ್ ವಿಷಯಗಳಿಂದ ಸ್ವಾತಕೋತ್ತರ ಪದವಿ ಪಡೆದವರು

ಅರ್ಜಿ ಸಲ್ಲಿಸಬಹುದು.

ಹುದ್ದೆವಾರು ವೇತನ ಶ್ರೇಣಿ
ಅಸೋಸಿಯೇಟ್ ಪ್ರೊಫೆಸರ್ : 1,31,400-2,17,100.ರೂ.ಗಳು
ಅಸಿಸ್ಟಂಟ್ ಪ್ರೊಫೆಸರ್ : 57,700-1,82,400. ರೂ.ಗಳು

ವಿದ್ಯಾರ್ಹತೆ
ಬೋಧಕ ಹುದ್ದೆಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಜತೆಗೆ ಪಿಹೆಚ್ಡಿ ಪದವಿ ಮಾಡಿರಬೇಕು. ಬೋಧನಾ ಕಾರ್ಯಾನುಭವವನ್ನು ಹೊಂದಿರಬೇಕು.

ಸೂಚನೆ : ಈ ಹಿಂದೆ ಅರ್ಜಿ ಸಲ್ಲಿಸಲು ಮಾರ್ಚ್ (March) 26 ರವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಏಪ್ರಿಲ್ 4 ರವರೆಗೆ ಅರ್ಜಿ ಸಲ್ಲಿಸಲು (Job Vacancy in UAS Blore) ಅವಕಾಶ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 04-04-2024

ಶುಲ್ಕ ವಿವರ
ಅಸೋಸಿಯೇಟ್ ಪ್ರೊಫೆಸರ್ (Associate Professor), ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗಳಿಗೆ GM, OBC ಅಭ್ಯರ್ಥಿಗಳಿಗೆ ರೂ.2000. SC / ST ವರ್ಗದ ಅಭ್ಯರ್ಥಿಗಳಿಗೆ ರೂ.1000.

ಅರ್ಜಿ ಸಲ್ಲಿಸಲು ಬೆಂಗಳೂರು ಕೃಷಿ ವಿಜ್ಞಾನಗಳ ವಿವಿಯ ವೆಬ್ ವಿಳಾಸ https://www.uasbangalore.edu.in/index.php/notifications-en ಕ್ಕೆ ಭೇಟಿ ನೀಡಿ.

ಇದನ್ನು ಓದಿ: ಹಿಂದೂಗಳ ಹೆಸರಿನಲ್ಲಿ ನಕಲಿ ಐಡಿ ಕಾರ್ಡ್: ರಾಮೇಶ್ವರಂ ಕೆಫೆ ಸ್ಪೋಟದ ಉಗ್ರರ ಭಯಾನಕ ಪ್ಲ್ಯಾನ್

Exit mobile version