Job News: ಎಸ್‌ಎಸ್‌ಎಲ್‌ಸಿ ,ಡಿಪ್ಲೊಮ, ಪಿಯುಸಿ, , ಇಂಜಿನಿಯರಿಂಗ್ (Jobs in Rail India) ಪದವಿ ಪಾಸಾದ ಅಭ್ಯರ್ಥಿಗಳಿಗೆ ಇದೀಗ ಒಂದು ಸುವರ್ಣ ಅವಕಾಶ. ಭಾರತ ಸರ್ಕಾರದ (Jobs in Rail India) ರೈಲ್ವೆ
ಸಚಿವಾಲಯದಡಿ (Ministry Of Railways) ರೈಟ್ಸ್ ಮಿನಿರತ್ನ ಕಂಪನಿ (RITES Miniratna Company) ಒಂದು ಪಬ್ಲಿಕ್ ಸೆಕ್ಟಾರ್ ಎಂಟರ್‌ಪ್ರೈಸಸ್ ಆಗಿದೆ. ಈ ರೈಟ್ಸ್ ಮಿನಿರತ್ನ ಕಂಪನಿಯಲ್ಲಿ
ನೇರ ನೇಮಕಾತಿ ಹಾಗೂ ನೇರ ಸಂದರ್ಶನದ ಮೂಲಕ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಗಳನ್ನು ಬಿಡುಗಡೆ ಮಾಡಲಾಗಿದೆ. ಹೆಚ್ಚು ಉದ್ಯೋಗ ಅವಕಾಶಗಳು ಇಂಜಿನಿಯರಿಂಗ್ ಪದವೀಧರರಿಗೆ
ಇದೆ ಆದ್ದರಿಂದ ಕಂಪನಿ ವೆಬ್‌ಸೈಟ್‌ನಲ್ಲಿ ಆಸಕ್ತರು ಅಧಿಸೂಚನೆಗಳನ್ನು ಓದಿಕೊಂಡು ಅರ್ಜಿ (Jobs in Rail India) ಸಲ್ಲಿಸಿ.

ಹುದ್ದೆಗಳ ವಿವರ
ಡ್ರಾಫ್ಟ್‌ಮನ್ : 20
ಕ್ವಾಲಿಟಿ ಅಸುರೆನ್ಸ್ ಮತ್ತು ಕಂಟ್ರೋಲ್ ಇಂಜಿನಿಯರ್ : 20
ಸೂಪರ್‌ವೈಸರ್ ಕಂ ಕಂಸ್ಟ್ರಕ್ಷನ್ ಮ್ಯಾನೇಜರ್ : 09
ಫೀಲ್ಡ್ ಕ್ವಾಲಿಟಿ ಕಂಟ್ರೋಲ್ ಇಂಜಿನಿಯರ್ : 80
ವಿವಿಧ ಹುದ್ದೆಗಳಿಗೆ ವಿವಿಧ ದಿನದಂತೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕವು ನಿಗಧಿಯಾಗಿದೆ. ಆದ್ದರಿಂದ ಅಧಿಸೂಚನೆಗಳನ್ನು ಅನುಸರಿಸಿ. ಅರ್ಜಿ ಸಲ್ಲಿಸಲು, ನೇರ ಸಂದರ್ಶನಕ್ಕೆ ಹಾಜರಾಗಲು ಜುಲೈ ತಿಂಗಳ 25 ರವರೆಗೂ ಸಹ ಅವಕಾಶಗಳು ಇವೆ.

ವಿದ್ಯಾರ್ಹತೆ : ಮೆಟ್ರಿಕ್ಯೂಲೇಷನ್ ಜತೆಗೆ ಡಿಪ್ಲೊಮ,ಐಟಿಐ ಮತ್ತು ಬಿಇ (ಸಿವಿಲ್ / ಮೆಕ್ಯಾನಿಕಲ್ / ಇಲೆಕ್ಟ್ರಿಕಲ್) ಪಾಸ್ ಮಾಡಿರಬೇಕು. ಜತೆಗೆ ರೈಟ್ಸ್ ನಿಗಧಿತ ಕಾರ್ಯಾನುಭವವನ್ನು ಹೊಂದಿರಬೇಕು.
ವಯೋಮಿತಿ
ಗರಿಷ್ಠ 40 ವರ್ಷ ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವೀಸ್ ಕಂಪನಿಯ (Rail India Technical and Economic Service Company) ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೀರಿರಬಾರದು.
ಜೂನ್ 01 ಕ್ಕೆ ವಯಸ್ಸಿನ ಅರ್ಹತೆಯನ್ನು ಪರಿಗಣಿಸಲಾಗುತ್ತದೆ. ಗರಿಷ್ಠ ವಯಸ್ಸಿನ ಅರ್ಹತೆಯನ್ನು ಈ ದಿನಾಂಕಕ್ಕೆ ಮೀರುವ ಹಾಗಿಲ್ಲ. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಇದಕ್ಕೆ ಅನ್ವಯವಾಗಲಿವೆ.
ಹುದ್ದೆವಾರು ಪೂರ್ಣವಾಗಿ ತಿಳಿಯಲು ಮತ್ತು ವಯಸ್ಸಿನ ಅರ್ಹತೆಗಳನ್ನು ತಿಳಿಯಲು ನೋಟಿಫಿಕೇಶನ್‌ಗಳನ್ನು ಓದಲು ಸೂಚಿಸಲಾಗಿದೆ.
ವೇತನ ಶ್ರೇಣಿ : ಗರಿಷ್ಠ Rs.90,000 – 2,40,000 ವರೆಗೆ ಪ್ರಸ್ತುತ ರೈಟ್ಸ್ ಬಿಡುಗಡೆ ಮಾಡಿರುವ ಹುದ್ದೆಗಳಿಗೆ ಸಂಭಾವನೆ ಸಿಗಲಿದೆ.
ರೈಟ್ಸ್ ಇತ್ತೀಚೆಗೆ ಬಿಡುಗಡೆ ಮಾಡಿರುವ ಕೆಲವು ಅಧಿಸೂಚನೆಗಳನ್ನು ಓದಲು ಮತ್ತು ಅದರಲ್ಲೂ ಮುಖ್ಯವಾಗಿ ಅಧಿಕ ಉದ್ಯೋಗ ಅವಕಾಶಗಳು ಬಿಇ ಪಾಸಾದವರಿಗೆ ಇದ್ದು, ಹುದ್ದೆಗಳ ಡೀಟೇಲ್ಸ್ / ಅಧಿಸೂಚನೆಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ.
ವಿದ್ಯಾರ್ಹತೆ ಪ್ರಮಾಣ ಪತ್ರ, ಜನ್ಮ ದಿನಾಂಕ ದಾಖಲೆ, ಕಾರ್ಯಾನುಭವ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಹಾಜರುಪಡಿಸಬೇಕು.
ರಶ್ಮಿತಾ ಅನೀಶ್