ಸುನೀಲ್ ಗವಾಸ್ಕರ್‌ ಮತ್ತು ಸಚಿನ್‌ ದಾಖಲೆ ಮರಿದ ಜೋ ರೂಟ್

ಮುಂಬೈ ಡಿ 19 : ಇಂಗ್ಲೆಡ್‌ ತಂಡದ ನಾಯಕ ಜೋ ರೂಟ್‌ ಪ್ರಸಕ್ತ ಸಾಲಿನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.  ಪ್ರಸಕ್ತ ವರ್ಷದ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮುಂದುವರಿಸಿರುವ ಇಂಗ್ಲೆಂಡ್‌ ತಂಡದ ನಾಯಕ ಜೋ ರೂಟ್‌ ಭಾರತೀಯ ಬ್ಯಾಟಿಂಗ್ ದಿಗ್ಗಜರಾದ ಸಚಿನ್‌ ತೆಂಡೂಲ್ಕರ್‌ ಹಾಗೂ ಸುನೀಲ್‌ ಗವಾಸ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಕ್ಯಾಲೆಂಡರ್ ವರ್ಷದಲ್ಲಿ ಟೆಸ್ಟ್‌ ಪಂದ್ಯಗಳಲ್ಲಿ ಅತ್ಯಧಿಕ ರನ್‌ ಗಳಿಸಿದ ಐದನೇ  ಆಟಗಾರರಾಗಿದ್ದಾರೆ. ಈ ಮೂಲಕ ಟೀಂ ಇಂಡಿಯಾ ದಿಗ್ಗಜ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿದ್ದಾರೆ.  ಪ್ರತಿಷ್ಠಿತ ಆಶಸ್ ಸರಣಿಯ ಭಾಗವಾಗಿ ಆಸ್ಟ್ರೇಲಿಯಾ  ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಅವರು 1563 ರನ್‌  ಪೂರ್ಣಗೊಳಿಸಿ ದಾಖಲೆ ನಿರ್ಮಿಸಿದ್ದಾರೆ.

ಇಲ್ಲಿನ ಅಡಿಲೇಡ್‌ ಓವಲ್‌ ಮೈದಾನದಲ್ಲಿ ನಡೆಯುತ್ತಿರುವ ಆಷಸ್‌ ಟೆಸ್ಟ್‌ ಸರಣಿಯ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯದ ಮೂರನೇ ದಿನವಾದ ಶನಿವಾರ ಜೋ ರೂಟ್‌ ಈ ದಾಖಲೆಗೆ ಭಾಜನರಾಗಿದ್ದಾರೆ. ಏಕೈಕ ಕ್ಯಾಲೆಂಡರ್‌ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ರನ್‌ ಗಳಿಸಿದ ಇಂಗ್ಲೆಂಡ್‌ನ ಮೊದಲ ಬ್ಯಾಟ್ಸ್‌ಮನ್ ಎಂಬ ಸಾಧನೆಗೂ ರೂಟ್‌ ಭಾಜನರಾಗಿದ್ದಾರೆ.

2002ರಲ್ಲಿ ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್ 1,481 ರನ್‌ ಗಳಿಸಿದ್ದರು. ಇದೀಗ ವಾನ್‌ ದಾಖಲೆಯನ್ನು ಮುರಿದಿರುವ ಜೋ ರೂಟ್‌, ಭಾರತೀಯ ಕ್ರಿಕೆಟ್‌ನ ಧೃವ ತಾರೆ ಸುನೀಲ್ ಗವಾಸ್ಕರ್‌(1,555 ರನ್‌, 1979ರ ವರ್ಷ) ಹಾಗೂ 2010ರ ವರ್ಷದಲ್ಲಿ 1,562 ರನ್‌ ಗಳಿಸಿದ್ದ ಸಚಿನ್‌ ತೆಂಡೂಲ್ಕರ್‌ ಅವರನ್ನು ಹಿಂದಿಕ್ಕಿದ್ದಾರೆ.

ಕ್ಯಾಲೆಂಡರ್ ವರ್ಷದಲ್ಲಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು:
ಮೊಹಮ್ಮದ್ ಯೂಸುಫ್ (2006) – 1788 ರನ್
ವಿವಿಯನ್ ರಿಚರ್ಡ್ಸ್ (1976) – 1710 ರನ್
ಗ್ರೇಮ್ ಸ್ಮಿತ್ (2008) – 1656
ಮೈಕೆಲ್ ಕ್ಲಾರ್ಕ್ (2012) – 1595
ಜೋ ರೂಟ್ (2021) – 1563 (ಔಟಾಗದೆ)
ಸಚಿನ್ ತೆಂಡೂಲ್ಕರ್ (2010) – 1562 ರನ್
ಸುನಿಲ್ ಗವಾಸ್ಕರ್ (1979) – 1555 ರನ್

Exit mobile version