ಇತ್ತೀಚೆಗೆ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವ ವಿಡಿಯೋವೊಂದರಲ್ಲಿ ಕನ್ನಡದಲ್ಲಿ ಮಾತನಾಡಿ, ‘ಮಾತೃ’ಭಾಷಾ ಪ್ರೇಮ ಮೆರೆದು, ಕನ್ನಡಿಗರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದ ತೆಲುಗು ಖ್ಯಾತ ನಟ ಜೂ. ಎನ್ಟಿಆರ್ ಅವರಿಗೂ ಈಗ ಕೊರೊನಾ ಸೋಂಕು ತಗುಲಿದೆ.
ಈ ಬಗ್ಗೆ ಟ್ವೀಟ್ ಮಾಡಿ ತಿಳಿಸಿರುವ ಜೂ. ಎನ್ಟಿಆರ್ ನನಗೂ ಕೊರೊನಾ ಬಂದಿದೆ. ಆದರೆ ಅಭಿಮಾನಿಗಳೂ ಅತಂಕಪಡುವುದು ಬೇಡ. ನಾನು ಆರೋಗ್ಯವಾಗಿದ್ದೇನೆ. ನಾನೂ ಮತ್ತು ನನ್ನ ಕುಟುಂಬಸ್ಥರು ಮನೆಯಲ್ಲೇ ಕ್ವಾರೆಂಟೈನ್ ಆಗಿದ್ದೇವೆ. ವೈದ್ಯರ ನಿಗಾದಲ್ಲಿ ನಾವೆಲ್ಲ ಸಮರ್ಪಕವಾಗಿ ಚಿಕಿತ್ಸೆ ಪಡೆಯುತ್ತಿದ್ದೇವೆ. ಇತ್ತೀಚೆಗೆ ನಮ್ಮ ಸಂಪರ್ಕಕ್ಕೆ ಬಂದವರು ಟೆಸ್ಟ್ ಮಾಡಿಸಿಕೊಳ್ಳಿ ಮತ್ತು ಜಾಗ್ರತೆ ವಹಿಸಿ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 13ರಂದು ಆರ್ಆರ್ಆರ್ ಚಿತ್ರ ತೆರೆಗೆ ತರುವುದಾಗಿ ರಾಜಮೌಳಿ ಘೋಷಣೆ ಮಾಡಿದ್ದರು. ಈ ವಿಚಾರ ಕೇಳಿ ಅಭಿಮಾನಿಗಳು ಕೂಡ ಸಖತ್ ಖುಷಿಯಾಗಿದ್ದರು. ಆದರೆ, ಈಗ ಅಭಿಮಾನಿಗಳಿಗೆ ಬ್ಯಾಡ್ನ್ಯೂಸ್ ಒಂದು ಸಿಕ್ಕಿದೆ. ಆರ್ಆರ್ಆರ್ ಸಿನಿಮಾ ರಿಲೀಸ್ ದಿನಾಂಕ 2022ಕ್ಕೆ ಮುಂದೂಡಲ್ಪಟ್ಟಿದೆಯಂತೆ. ಬಾಹುಬಲಿ ಖ್ಯಾತಿಯ ರಾಜಮೌಳಿಯ ಅವರ ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಆದರೆ, ಪದೇಪದೇ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಡುತ್ತಿರುವುದು ಅಭಿಮಾನಿಗಳಿಗೆ ಬೇಸರ ಉಂಟಾಗುತ್ತಿದೆ.