ಸರೋವರದ ಮಧ್ಯೆ ನೆಲೆಸಿರುವ ಈ ವಿಶೇಷ ದೇವಾಲಯ ಎಲ್ಲಿದೆ ಗೊತ್ತಾ?

kalijai

ನಮ್ಮಲ್ಲಿನ ಹಲವು ಪ್ರಮುಖ ದೇವಾಲಯಗಳು ಬೆಟ್ಟದ ಮೇಲೆ, ಕಾಡಿನೊಳಗೆ, ನದಿಗಳ ದಂಡೆಯ ಮೇಲೆ ಸ್ಥಾಪಿತವಾಗಿವೆ. ಆದರೆ ನದಿ/ಸರೋವರದ ದ್ವೀಪದ ಮಧ್ಯೆ ಇರುವ ದೇವಾಲಯಗಳ ಸಂಖ್ಯೆ ಬಹಳ ಅಪರೂಪ.

ಅಂತಹ ಅಪರೂಪದ ದೇವಾಲಯಗಳಲ್ಲಿ ಒರಿಸ್ಸಾದ(Odissha) ಕಾಳಿಜೈ(Kalijai) ದೇವಾಲಯ ಪ್ರಮುಖವಾದದ್ದು. ಒರಿಸ್ಸಾದ ಕಾಳಿಜೈ ದೇವಾಲಯ ಭಾರತದ ಅತ್ಯಂತ ದೊಡ್ಡ, ಹಾಗೆಯೇ ವಿಶ್ವದ ಎರಡನೇ ದೊಡ್ಡ ಉಪ್ಪುನೀರಿನ ಸರೋವರ(Lagoon) ಎಂಬ ಖ್ಯಾತಿಯ ಚಿಲ್ಕಾ(Chilka) ಸರೋವರದೊಳಗಿನ ದ್ವೀಪದಲ್ಲಿದೆ‌. ಈ ಚಿಲ್ಕಾ ಸರೋವರ 1260 ಚ.ಕಿ.ಮೀ ನಷ್ಟು ವಿಶಾಲವಾದ ವಿಸ್ತೀರ್ಣದಲ್ಲಿದ್ದು, ಜೀವವೈವಿಧ್ಯತೆ, ಪ್ರವಾಸೋದ್ಯಮ ಎಲ್ಲಾ ಹಿನ್ನಲೆಯಲ್ಲಿಯೂ ಅತ್ಯಂತ ಮಹತ್ವದ ಸ್ಥಳವಾಗಿದೆ.

ಯುನೆಸ್ಕೋ ಗುರುತಿಸುವ ಜಗತ್ತಿನ ಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಹೆಗ್ಗಳಿಕೆ ಹೊಂದಿದೆ. ಇಂತಹ‌ ಸ್ಥಳದಲ್ಲಿರುವ ಕಾಳಿಜೈ ದೇವಾಲಯ ಚಿಲ್ಕಾಕ್ಕೆ ಪ್ರವಾಸಿಗರ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ದೇವಾಲಯ ಜೀರ್ಣೋದ್ಧಾರ ಯೋಜನೆಯನ್ನು ಚಿಲ್ಕಾ ಅಭಿವೃದ್ಧಿ ಪ್ರಾಧಿಕಾರ ಕೈಗೆತ್ತುಕೊಂಡಾಗ, ಜೀರ್ಣೋದ್ಧಾರದ ಪರಿಕಲ್ಪನೆ ಯೋಜನೆಯನ್ನು ಸಿದ್ದಪಡಿಸಿದವರು ಭಾರತೀಯ ಅರಣ್ಯ ಸೇವೆಯ ಅಧಿಕಾರಿಯಾದ ಸುಶಾಂತನಂದ ಸರ್ ರವರು ಎಂಬುದು ವಿಶೇಷ.

ವರ್ಷ ವರ್ಷ ನೂರಾರು ಬಗೆಯ ಸಾವಿರಾರು ವಲಸೆ ಪಕ್ಷಿಗಳು, ಹಲವು ಬಗೆಯ ಅಪರೂಪದ ಸಸ್ಯ ಪ್ರಭೇದಗಳಿಗೆ ತವರಾಗಿರುವ ಚಿಲ್ಕಾ ಸರೋವರದ ಜೀವವೈವಿಧ್ಯತೆ ಧಕ್ಕೆಯಾಗದಂತೆ ಈ ದ್ವೀಪದೊಳಗಿನದ್ವೀಪದೊಳಗಿನ ಅಪರೂಪದ ಸುಂದರ ದೇವಾಲಯನ್ನು‌ ಇಲ್ಲಿ ನಿರ್ಮಿಸಲಾಗಿದೆ.

Exit mobile version