ನೂಪುರ್ ಶರ್ಮಾ ಅವರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ : ಕಂಗನಾ ರಣಾವತ್!

Nupur sharma

ನೂಪುರ್ ಶರ್ಮ(Nupur Sharma) ಅವರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕನ್ನು(Rights) ನಮ್ಮ ಸಂವಿಧಾನ(Constitution) ನೀಡಿದೆ.

ಹೀಗಾಗಿ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು ಎಂದು ಬಾಲಿವುಡ್ ನಟಿ(Bollywood Actress) ಕಂಗನಾ ರನೌತ್(Kangana Ranaut) ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪರ ಧ್ವನಿ ಎತ್ತಿದ್ದಾರೆ. ಹಿಂದೂ ದೇವರುಗಳನ್ನು ಅವಹೇಳನ ಮಾಡಿರುವ ಪ್ರಕರಣಗಳ ವಿಚಾರಣೆ ನಿತ್ಯವೂ ನ್ಯಾಯಾಲಯಗಳಲ್ಲಿ ನಡೆಯುತ್ತಿದೆ. ಆದರೆ ನೂಪುರ್ ಶರ್ಮಾ ಹೇಳಿಕೆಗೆ ಜೀವ ಬೆದರಿಕೆ ಕರೆಗಳು ಬರುತ್ತಿದೆ. ಕೆಲವರು ಡಾನ್‍ಗಳ ರೀತಿ ವರ್ತಿಸುವುದು ಬೇಡ.

ನಿಮಗೆ ತಕರಾರುಗಳಿದ್ದರೆ ನ್ಯಾಯಾಲಯದ ಮೋರೆ ಹೋಗಬೇಕು. ನೂಪುರ್ ಶರ್ಮಾ ಅವರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕಿದೆ ಎಂದು ಕಂಗನಾ ಪ್ರತಿಪಾದಿಸಿದ್ದಾರೆ. ಇದು ಅಫ್ಘಾನಿಸ್ತಾನವಲ್ಲ.(Afghansithan) ಇಲ್ಲಿ ಪ್ರಜಾಪ್ರಭುತ್ವದ(Democracy) ಮೂಲಕ ಅಧಿಕಾರಕ್ಕೆ ಬಂದಿರುವ ಸರ್ಕಾರವಿದೆ. ಉತ್ತಮ ನ್ಯಾಯಾಂಗ ವ್ಯವಸ್ಥೆಯಿದೆ. ಇದನ್ನು ಪದೇ ಪದೇ ಮರೆಯುತ್ತಿರುವ ಜನರಿಗೆ ಇದನ್ನು ನೆನಪಿಸುತ್ತಲೇ ಇರಬೇಕಾಗುತ್ತದೆ. ಅವರ ಹೇಳಿಕೆ ಬಗ್ಗೆ ನಿಮಗೆ ಆಕ್ಷೇಪ ಇದ್ದರೆ ಕಾನೂನಿನ ಮೂಲಕ ಮುಂದುವರೆಯಿರಿ ಎಂದು ಕಂಗನಾ ಹೇಳಿದ್ದಾರೆ.

ಇನ್ನು ನೂಪುರ್ ಶರ್ಮಾ ಮಾದ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೀಗ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಕೇಂದ್ರ ಸರ್ಕಾರ ಅವರಿಗೆ ಸೂಕ್ತ ಭದ್ರತೆ ನೀಡಿದೆ. ನೂಪುರ್ ಶರ್ಮಾ ಹೇಳಿಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಸುದ್ದಿಯಾಗಿತ್ತು. ಇಸ್ಲಾಮಿಕ ರಾಷ್ಟ್ರಗಳು ಭಾರತವನ್ನು ಟೀಕಿಸಿದ್ದರು.

Exit mobile version