ತಡೆಯಾಜ್ಞೆಯನ್ನು ತೆರವುಗೊಳಿಸಿದ ಕೇ.ಹೈಕೋರ್ಟ್ ; ಇದು ದೈವದ ಶಕ್ತಿ ಎಂದ ಅಭಿಮಾನಿಗಳು

Thiruvanthapuram : ಒಂದರೆಡು ದಿನಗಳ ಹಿಂದೆಯಷ್ಟೇ ಕಾಂತಾರ(Kantara OTT War) ಓಟಿಟಿ ಚಿತ್ರದಲ್ಲಿ ‘ವರಾಹ ರೂಪಂ’ ಹಾಡನ್ನು ತೆಗೆದು ಹಾಕಿರುವ ಕುರಿತು ಕಾಂತಾರ ಚಿತ್ರದ ನಿರ್ಮಾಪಕರು ಕೇರಳ ಹೈಕೋರ್ಟ್ ಮೆಟ್ಟಿಲೇರಿದರು.

ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಥವಾ ಚಿತ್ರಮಂದಿರಗಳಲ್ಲಿ ಪ್ಲೇ ಮಾಡದಂತೆ ಕೆಳ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ತೆರವು ಮಾಡುವಂತೆ,

ಕಾಂತಾರ ಚಿತ್ರದ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್(Kerala Highcourt) ವಜಾಗೊಳಿಸಿತು.

ಕಾಂತಾರ ಚಿತ್ರದ  ‘ವರಾಹ ರೂಪಂ’(Varaha Roopam) ಹಾಡನ್ನು ತಮ್ಮ ಮೂಲ ಕೃತಿ ‘ನವರಸಂ’ ನಿಂದ ಕೃತಿಚೌರ್ಯ ಮಾಡಲಾಗಿದೆ ಎಂದು ಆರೋಪಿಸಿ ಕೇರಳ ಮೂಲದ ತೈಕ್ಕುಡಂ ಬ್ರಿಡ್ಜ್ ಎಂಬ ಮ್ಯೂಸಿಕ್ ಬ್ಯಾಂಡ್‌ ಸಂಸ್ಥೆ,

ಮನವಿ ಮಾಡಿದ ಹಿನ್ನೆಲೆಯಲ್ಲಿ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯ ಮತ್ತು ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ಕಳೆದ ತಿಂಗಳು ತಡೆಯಾಜ್ಞೆ ನೀಡಿದ್ದವು.

ಇದನ್ನೂ ಓದಿ : https://vijayatimes.com/india-produces-16-lakh-jobs/

ಅದರ ಅನ್ವಯದಂತೆ ಕೇರಳ ಹೈಕೋರ್ಟ್‌ ಕೂಡಾ ತಡೆಯಾಜ್ಞೆಯನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಹೇಳಿತು. ಕಾಂತಾರ ಚಿತ್ರದ ನಿರ್ಮಾಪಕರು ಕೆಲವು ದಿನಗಳ ಹಿಂದೆ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ,

ತಡೆಯಾಜ್ಞೆಯನ್ನು ತೆರವು ಮಾಡುವಂತೆ ಕೋರಿದ್ದರು. ಅರ್ಜಿಯನ್ನು ವಜಾಗೊಳಿಸಿದ ಕೇರಳ ಹೈಕೋರ್ಟ್, ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ.

ಕೆಳ ನ್ಯಾಯಾಲಯಗಳಲ್ಲಿ ಈ ಸಮಸ್ಯೆಯ ವಿರುದ್ಧ ಹೋರಾಡುವಂತೆ ಚಲನಚಿತ್ರ ನಿರ್ಮಾಪಕರಿಗೆ ನಿರ್ದೇಶಿಸಿತ್ತು.

ತೈಕ್ಕುಡಂ ಬ್ರಿಡ್ಜ್(Thaikkudam Bridge) ಅನ್ನು ಪ್ರತಿನಿಧಿಸುತ್ತಿರುವ ಸುಪ್ರೀಂ ಕೋರ್ಟ್ ಅಡ್ವೊಕೇಟ್ ಸತೀಶ್ ಮೂರ್ತಿ ಅವರು ಹೈಕೋರ್ಟ್ ಆದೇಶವನ್ನು ತಡೆಯಾಜ್ಞೆಯ ದೃಢೀಕರಣವೆಂದು ತಿಳಿಸಿದ್ದರು.

ಅಮೆಜಾನ್ ಪ್ರೈಮ್ ಒಟಿಟಿ ಪ್ಲಾಟ್‌ಫಾರ್ಮ್ ಪ್ರಸ್ತುತ ಹಾಡಿಲ್ಲದೆ ಚಲನಚಿತ್ರವನ್ನು ಸ್ಟ್ರೀಮ್ ಮಾಡುತ್ತಿವೆ.

ಸರಿಯಾದ ಅಂಗೀಕಾರವಿಲ್ಲದೆ ಚಿತ್ರದಲ್ಲಿನ ಹಾಡನ್ನು ಸ್ಟ್ರೀಮ್ ಮಾಡದಿರಲು ಅಮೆಜಾನ್(Amazon Prime) ಸಮಂಜಸವಾದ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದರು.

ಇದನ್ನೂ ಓದಿ : https://vijayatimes.com/highcourt-dismissed-kantara-petition/

ಕೇರಳ ಹೈಕೋರ್ಟ್ ನೀಡಿದ್ದ ವಜಾಗೊಳಿಸಿದ ಬಳಿಕ ಚಿತ್ರದ ಅಭಿಮಾನಿಗಳು ಸೇರಿದಂತೆ ಅನೇಕರು ಬೇಸರ ವ್ಯಕ್ತಪಡಿಸುತ್ತಿದ್ದರು.

ಕೇವಲ ಹಣದ ಆಸೆಗಾಗಿ ಚಿತ್ರದಲ್ಲಿ 15 ನಿಮಿಷದ ಬಲವಾದ ಮನರಂಜನಾ ಅಂಶವನ್ನು ತೆಗೆದು ಹಾಕುವಂತೆ ಮಾಡಿದ್ದೀರಾ, ಈ ನಿಮ್ಮ ನಡೆಗೆ ಧಿಕ್ಕಾರ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದರು.

ಸದ್ಯ ವಿವಾದಗಳ ಮಧ್ಯೆ ಕೃತಿಚೌರ್ಯ ಆರೋಪ ಎಸಗಿದ್ದ ಥೈಕುಡಂ ಬ್ರಿಡ್ಜ್ ಬ್ಯಾಂಡ್ ಸಂಸ್ಥೆಯ ಅರ್ಜಿಯನ್ನು ಇದೀಗ ಕೇರಳ ರಾಜ್ಯದ ಕೋಝಿಕೋಡ್ ಕೋರ್ಟ್ ವಜಾಗೊಳಿಸಿದೆ.

ಕಾಂತಾರ ಚಿತ್ರದ ವರಾಹ ರೂಪಂ ಹಾಡನ್ನು ಚಿತ್ರದಲ್ಲಿ ಮರು ಅಳವಡಿಸಿಕೊಳ್ಳಲು ಅನುಮತಿ ನೀಡಿದೆ. ಆದ್ರೆ!

ಇದನ್ನೂ ಓದಿ : https://vijayatimes.com/chetan-ahimsa-sparks/

ಮೊದಲ ಹಂತದ ಜಯ ಮಾತ್ರ ದೊರಕಿದ್ದು, ಪಾಲಕ್ಕಾಡ್ ನ್ಯಾಯಾಲಯದಲ್ಲಿ ಥೈಕುಡಂ ಬ್ರಿಡ್ಜ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇನ್ನೂ ನಡೆಯುತ್ತಿದೆ. ಹೀಗಾಗಿ ಮೂಲ ವರಾಹ ರೂಪಂ ಹಾಡನ್ನು ಬಳಸಲು ಸಾಧ್ಯವಿಲ್ಲ!

Exit mobile version