ಗಂಡನಿಂದ ನಡೆದ ಬಲವಂತದ ಸಂಭೋಗ ಅತ್ಯಾಚಾರಕ್ಕೆ ಸಮ : ಹೈಕೋರ್ಟ್!

highcourt

ಗಂಡನಿಂದ ಬಲವಂತವಾಗಿ ನಡೆದ ಸಂಭೋಗವು ಕೂಡಾ ಅತ್ಯಾಚಾರಕ್ಕೆ ಸಮನಾಗಿದೆ. ಹೆಂಡತಿ ಮತ್ತು ಮಹಿಳೆ ನಡುವೆ ತಾರತಮ್ಯ ಸರಿಯಲ್ಲ. ವಿವಾಹ(Marriage) ಎಂಬುದು ಪತ್ನಿಯ ಮೇಲೆ ಎಲ್ಲ ರೀತಿಯ ದೌರ್ಜನ್ಯ ಎಸಗಲು ನೀಡುವ ಪರವಾನಗಿ(Licence) ಅಲ್ಲ ಎಂದು ಕರ್ನಾಟಕ ಹೈಕೋರ್ಟ್(Karnataka Highcourt) ಅಭಿಪ್ರಾಯಪಟ್ಟಿದೆ.

ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಹೆಂಡತಿ ಎಂಬ ಕಾರಣದಿಂದ ಒತ್ತಾಯ ಪೂರ್ವಕವಾಗಿ ಗಂಡನು ಸಂಭೋಗ ಮಾಡಬಹುದು. ಇದಕ್ಕೆ ಯಾವುದೇ ಶಿಕ್ಷೆಯನ್ನು ವಿಧಿಸಲು ಸದ್ಯದ ಕಾನೂನಿನಲ್ಲಿ ಅವಕಾಶವಿಲ್ಲ. ಈ ಕುರಿತು ಶಾಸಕಾಂಗ ಚಿಂತನೆ ನಡೆಸಬೇಕಿದೆ. ೧೮೬೧ ರಲ್ಲಿ ರಚನೆಯಾದ ಭಾರತೀಯ ದಂಡಸಂಹಿಂತೆಯಲ್ಲಿಯೂ ಈ ರೀತಿಯ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲು ಅವಕಾಶ ಇರಲಿಲ್ಲ. ಆದರೆ ಇತ್ತೀಚೆಗೆ ಇಂಗ್ಲೆಂಡ್ ನಲ್ಲಿ ಒತ್ತಾಯ ಪೂರ್ವಕವಾಗಿ ಗಂಡನು ಹೆಂಡತಿಯನ್ನು ಸಂಭೋಗ ಮಾಡಿದರೆ, ಅದನ್ನು ಅತ್ಯಾಚಾರ ಎಂದೇ ಪರಿಗಣಿಸಲಾಗುತ್ತಿದೆ.

ಈ ನಿಟ್ಟಿನಲ್ಲಿ ನಮ್ಮಲ್ಲೂ ಬದಲಾವಣೆ ಅಗತ್ಯ ಎಂದು ನ್ಯಾಯಪೀಠ ಹೇಳಿದೆ. ಇನ್ನು ಪುರುಷ ಪುರುಷನೇ ಸರಿ. ಅತ್ಯಾಚಾರ ಎಂಬುದು ಅತ್ಯಾಚರವೇ ಸರಿ. ಹೀಗಿದ್ದಾಗ ಗಂಡನೆಂಬ ಪುರುಷನಿಂದ ಒತ್ತಾಯಪೂರ್ವಕವಾಗಿ ಸಂಭೋಗ ನಡೆದರೆ ಅದನ್ನು ಭಿನ್ನವಾಗಿ ಹೇಗೆ ಪರಿಗಣಿಸಲು ಸಾಧ್ಯ ಎಂಬುದು ಕೋರ್ಟ್​ ತರ್ಕ. ಆದರೆ ಶಾಸಕಾಂಗವು ಹೆಂಡತಿಯ ಮೇಲೆ ಒತ್ತಾಯಪೂರ್ವಕವಾಗಿ ಸಂಭೋಗ ನಡೆಸುವ ಗಂಡನ ವಿಚಾರಣೆಗೆ ಒಳಪಡಿಸುವುದಕ್ಕೆ ಒಪ್ಪುವುದಿಲ್ಲ.

ಗಂಡ ಎಂಬ ಪುರುಷನಿಗೆ, ಆತ ಗಂಡ ಎಂಬ ಏಕೈಕ ಕಾರಣದಿಂದ ರಕ್ಷಣೆ ನೀಡಲು ಬಯಸುತ್ತದೆ. ಆದರೆ ಗಂಡ ತನ್ನ ಹೆಂಡತಿಯನ್ನು ಲೈಂಗಿಕವಾಗಿ ಬಳಸಿಕೊಂಡರೆ ಅದು ಸಂಭೋಗವೇ ಆಗುತ್ತದೆ. ಅಂದರೆ ಸಂಭೋಗವೆನ್ನುವುದು ಅತ್ಯಾಚಾರ ಅರ್ಥ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಬಲವಂತದ ಸಂಭೋಗವನ್ನು ಅತ್ಯಾಚಾರ ಎಂದು ಪರಿಗಣಿಸಿ, ಅತ್ಯಾಚಾರ ಮಾಡುವುದು ಅಪರಾಧವೆಂದು ಪರಿಗಣಿಸಿದಾಗ ಅದು ಶಿಕ್ಷಾರ್ಹವಾಗುತ್ತದೆ ಎಂದು ನ್ಯಾ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಹೇಳಿದೆ.

Exit mobile version