ಎಲ್‌ಕೆಜಿ ಪ್ರವೇಶಕ್ಕೆ 4 ವರ್ಷ ವಯೋಮಿತಿ ಕಡ್ಡಾಯವಾಗಿರಬೇಕು : ಸರ್ಕಾರದ ನಿರ್ಧಾರಕ್ಕೆ ಪಾಲಕರಿಂದ ವಿರೋಧ

Bengaluru : ಪೂರ್ವ ಪ್ರಾಥಮಿಕ ತರಗತಿಗಳ ಪ್ರವೇಶಾತಿಗೆ ಕರ್ನಾಟಕ ರಾಜ್ಯದ ಶಿಕ್ಷಣ ಇಲಾಖೆಯು (Karnataka State Education Department) ವಯೋಮಿತಿ ನಿಗದಿ ಮಾಡಿದೆ, ಆ ಪ್ರಕಾರ ಜೂನ್ 1ಕ್ಕೆ ಅನ್ವಯವಾಗುವಂತೆ ಎಲ್‌ಕೆಜಿ (LKG) ತರಗತಿಗೆ ಪ್ರವೇಶಿಸಬೇಕಾದರೆ ಮಕ್ಕಳಿಗೆ 4 ವರ್ಷಗಳು ಆಗಿರಲೇ ಬೇಕು. ಆದ್ರೆ ಶಿಕ್ಷಣ ಇಲಾಖೆಯ ನಿರ್ಧಾರಕ್ಕೆ ಪಾಲಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಕಡ್ಡಾಯವಾಗಿ ಜೂ.1ಕ್ಕೆ 6 ವರ್ಷ ಪೂರ್ಣಗೊಂಡಿರಬೇಕು :

ಇನ್ನು ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ಮಗುವಿನ ವಯೋಮಿತಿಯು ಜೂ.1ಕ್ಕೆ ಕಡ್ಡಾಯವಾಗಿ 6 ವರ್ಷ ಪೂರ್ಣಗೊಂಡಿರಬೇಕು. ಈ ನಿಯಮವನ್ನು ಶಿಕ್ಷಣ ಹಕ್ಕು ಕಾಯ್ದೆ (Right to Education Act) 2009 ಹಾಗೂ ಕಡ್ಡಾಯ ಶಿಕ್ಷಣ ನಿಯಮಗಳು 2012 ನಿಗದಿಪಡಿಸಿವೆ. ಈ ನಿಯಮವನ್ನು ರಾಜ್ಯದಲ್ಲಿ ಜಾರಿಗೊಳಿಸಲು ಈಗಾಗಲೇ ಆದೇಶ ಹೊರಡಿಸಿಯಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ.

ಈ ಹಿನ್ನೆಲೆಯಲ್ಲಿ ಇನ್ನು ಮುಂದೆ 2023-24ನೇ ಸಾಲಿನಿಂದ ಮಕ್ಕಳು ಎಲ್‌ಕೆಜಿ ತರಗತಿಗೆ ದಾಖಲಾತಿ ಹೊಂದಬೇಕಾದರೆ 2023ರ ಜೂ.1ಕ್ಕೆ ಕಡ್ಡಾಯವಾಗಿ 4 ವರ್ಷಗಳ ವಯೋಮಿತಿಯನ್ನುಹೊಂದಿರಲೇಬೇಕು ಎಂದು ನಿಗದಿ ಮಾಡಿ, ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕರು ಜ್ಞಾಪನ ಪತ್ರವನ್ನು ಹೊರಡಿಸಿದ್ದಾರೆ.

ಇದನ್ನೂ ಓದಿ : https://vijayatimes.com/the-kerala-story-2/

ಸರ್ಕಾರದ ಈ ನಿರ್ಧಾರಕ್ಕೆ ಪಾಲಕರ ವಿರೋಧ :
ಶಾಲಾ ಪ್ರವೇಶಾತಿಯನ್ನು 6 ವರ್ಷಕ್ಕೆ ನಿಗದಿ ಮಾಡಿರುವುದರಿಂದ ಸಾಕಷ್ಟು ಸಮಸ್ಯೆಯಾಗಲಿದೆ. ಸರ್ಕಾರ ನಿಗದಿಪಡಿಸಿದ ಈ ವಯೋಮಿತಿಯ ನಿಯಮವನ್ನು ಪಾಲಕರು ತೀವ್ರವಾಗಿ ವಿರೋಧಿಸಿದ್ದಾರೆ. ಏಕೆಂದರೆ ಜೂನ್ ಮತ್ತು ಜುಲೈ ತಿಂಗಳಲ್ಲಿ ಜನಿಸಿರುವ ಮಕ್ಕಳು ಒಂದನೇ ತರಗತಿಗೆ ಪ್ರವೇಶ ಪಡೆಯಬೇಕೆಂದರೆ ಮತ್ತೊಂದು ವರ್ಷ ವ್ಯರ್ಥವಾಗಿ ಕಾಯಬೇಕಾಗುತ್ತದೆ.

ಇದಕ್ಕಿಂತ ಈ ಹಿಂದೆ ಇದ್ದ 5.5 ವರ್ಷದಿಂದ 1 ವರ್ಷಗಳ ವಯೋಮಿತಿಯು ವೈಜ್ಞಾನಿಕವಾಗಿ ಸರಿಯಾಗಿದೆ. ಈಗ ರೂಪಿಸಿರುವ ನಿಯಯವು ಅವೈಜ್ಞಾನಿಕವಾಗಿದೆ ಮತ್ತು ಮಕ್ಕಳ ಸ್ನೇಹಿಯಾಗಿಲ್ಲ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Exit mobile version